ನಿಂತಿಕಲ್ಲಿನಲ್ಲಿ ಸಂತೆ ಮಾರುಕಟ್ಟೆ ಲೋಕಾರ್ಪಣೆ

Advt_Headding_Middle
Advt_Headding_Middle

ನಿಂತಿಕಲ್ಲಿನ ಧರ್ಮಶ್ರೀ ಆರ್ಕೇಡ್ ಹಿಂಭಾಗದಲ್ಲಿ ನೂತನ ಸಂತೆ ಮಾರುಕಟ್ಟೆ ಜ.೧ ರಂದು ಲೋಕಾರ್ಪಣೆ ಗೊಂಡಿತು.
ರಾಮಕೃಷ್ಣ ಶೆಟ್ಟಿ ಕಟ್ಟಬೀಡುರವರು ತೆಂಗಿನಕಾಯಿ ಒಡೆಯುವುದರ ಮೂಲಕ ಸಂತೆ ಮಾರುಕಟ್ಟೆಯನ್ನು ಉದ್ಘಾಟಿಸಿ ಶುಭಹಾರೈಸಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಶುಭದಾ ರೈ,ತಾಲೂಕು ಪಂಚಾಯತ್ ಸದಸ್ಯ ಗಫೂರ್,ಎಣ್ಮೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಕರುಣಾಕರ ಗೌಡ,ಮಂಗಳೂರು ಜನತಾ ಬಜಾರ್ ನ ಮಾಜಿ ಅಧ್ಯಕ್ಷ ಪ್ರಸನ್ನ ಭಟ್,ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಶೇಖರ ಕಾಮತ್,ಶ್ರೀಮತಿ ಸರಸ್ವತಿ ಕಾಮತ್,ತಿಮ್ಮಪ್ಪ ಗೌಡ ಮಲ್ಲಾರ,ಅಬ್ದುಲ್ಲಾ ಎಣ್ಮೂರು ಹಾಗೂ ಹಲವು ಜನ ಗಣ್ಯರು ಉಪಸ್ಥಿತರಿದ್ದರು.
ಧರ್ಮಶ್ರೀ ಆರ್ಕೆಡ್ ಮಾಲಕ ಮಾಧವ ಗೌಡ ಕಾಮಧೇನು ಸ್ವಾಗತಿಸಿ,ದೀಕ್ಷಿತ್ ಗೌಡ ಕಾಮಧೇನು ವಂದಿಸಿದರು.
ವಿಶಾಲವಾದ ಜಾಗದಲ್ಲಿ ಸಂತೆಮಾರುಕಟ್ಟೆ ಪ್ರಾರಂಭಗೊಂಡಿದ್ದು ಹಲವಾರು ವಿಧದ ತರಕಾರಿ ಅಂಗಡಿಗಳು,ಹಣ್ಣಿನ ಅಂಗಡಿಗಳು,ಒಣಮೀನಿನ ಅಂಗಡಿಗಳು, ಹಾಗೂ ಜನರಿಗೆ ಉಪಯೋಗವಾಗುವ ದಿನನಿತ್ಯದ ಆಹಾರ ಸಾಮಾಗ್ರಿಗಳ ಸಂತೆ ಅಂಗಡಿಗಳಿವೆ .ವಾಹನ ಪಾರ್ಕಿಂಗ್ ಗೆ ಕೂಡಾ ವಿಶಾಲವಾದ ಜಾಗವಿದ್ದು ಸಾರ್ವಜನಿಕರಿಗೆ ಅನುಕೂಲಕರವಾಗಲಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.