Breaking News

ಟೀಮ್ ಮೋದಿ ತಂಡದಿಂದ ಕೇರ್ಪಳ ಹಿಂದೂ ರುದ್ರ ಭೂಮಿ ಸ್ವಚ್ಛತೆ

Advt_Headding_Middle
Advt_Headding_Middle

ಸುಳ್ಯದ ಕೇರ್ಪಳದಲ್ಲಿರುವ ಹಿಂದೂ ರುದ್ರ ಭೂಮಿಯನ್ನು ಟೀಮ್ ಮೋದಿ ತಂಡದ ಸದಸ್ಯರು ಡಿ.೩೦ರಂದು ಶ್ರಮದಾನ ನಡೆಸಿ ಸ್ವಚ್ಛಗೊಳಿಸಿದರು. ಕೇರ್ಪಳದ ಸ್ಮಶಾನದ ಒಳಗೆ ಮತ್ತು ಹೊರಗೆ ಕಾಡುಗಳು ತುಂಬಿತ್ತು. ಸ್ಮಶಾನದ ಪಕ್ಕದಲ್ಲಿರುವ ಗೋಡನ್‌ನ ಸೀಟುಗಳು ಹಾರಿ ಚೆಲ್ಲಾಪಿಲ್ಲಿಯಾಗಿದ್ದವು. ಶವ ತಂದವರು ಶವದ ಮೇಲಿದ್ದ ಹೂವುಗಳನ್ನು ಇನ್ನಿತ್ತರ ವಸ್ತುಗಳನ್ನು ಒಂದೇ ಕಡೆ ರಾಶಿ ಹಾಕದೆ ಅಲ್ಲಲ್ಲಿ ಎಸೆದಿದ್ದರು. ಹೀಗೆ ಹಿಂದು ರುದ್ರ ಭೂಮಿ ನಿರ್ವಹಣೆ ಇಲ್ಲದೆ ಪಾಳುಬಿದ್ದಂತೆ ಇತ್ತು. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸಶ್ಮಾನದ ಪೋಟೋಗಳು ಹರಿದಾಡುತ್ತಿದ್ದಲ್ಲದೆ ನ.ಪಂ. ರುದ್ರ ಭುಮಿಯನ್ನು ನಿವಾ
ಹಣೆ ಮಾಡುತ್ತಿಲ್ಲ ಎಂಬ ಸಂದೇಶಗಳು ರವಾನೆಯಾಗುತ್ತಿದ್ದವು. ಡಿ.೩೦ರಂದು ಸುಳ್ಯದ ಮೋದಿ ಟೀಮ್‌ನ ಸದಸ್ಯರು ಸೇರಿ ಹಿಂದೂ ಭೂಮಿಗೆ ತೆರಳಿ ಶ್ರಮದಾನ ನಡೆಸಿ ಸ್ವಚ್ಛಗೊಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.