ಜ್ಞಾನ ಗಂಗಾ ಸ್ಕೂಲ್ ನಲ್ಲಿ ಅರಿವಿನ ಪಯಣ ಕಾರ್ಯಗಾರ

Advt_Headding_Middle
Advt_Headding_Middle

ಜ್ಞಾನ ಗಂಗಾ ವಿದ್ಯಾ ಸಂಸ್ಥೆ ಬೆಳ್ಳಾರೆಯಲ್ಲಿ ಡಿ. 29ರಂದು “ಅರಿವಿನ ಪಯಣ” ಎಂಬ ಕಾರ್ಯಕ್ರಮವನ್ನು ಶ್ರೀ ಮತಿ ವಾಣಿ ಪೆರುವೋಡಿ ತಂಡದವರಿಂದ ನಡೆಸಲಾಯಿಜ್ಞಾನ ಗಂಗಾ ಸ್ಕೂಲ್ ನಲ್ಲಿ ಅರಿವಿನ ಪಯಣ ಕಾರ್ಯಗಾರತು. 

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಚಂದದ ಬದುಕು ನಮ್ಮದಾಗುವುದು ಹೇಗೆ? ಎಂಬ ವಿಷಯದ ಕುರಿತು ಹಾಡು, ನಾಟಕ, ಉಪನ್ಯಾಸ, ಚಟುವಟಿಕೆಗಳಿಂದ ಕೂಡಿದ ಮಾಹಿತಿಯನ್ನು ನೀಡಲಾಯಿತು. 

ಮುಖ್ಯವಾಗಿ ಪರಿಸರ ಸ್ವಚ್ಛತೆ, ಪ್ಲಾಸ್ಟಿಕ್‌ ನಿರ್ಮೂಲನೆ, ಲೈಂಗಿಕ ದೌರ್ಜನ್ಯ, ಲೈಂಗಿಕ ಕಿರುಕುಳದ ವಿರುದ್ಧ ಹೋರಾಡುವುದು ಇವುಗಳ ಕುರಿತಾಗಿ ಸಮಗ್ರ ಅರಿವು, ಜಾಗೃತಿಯನ್ನು ತಿಳಿಸಿದರು. ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯ ಬೇಕು, ಲಿಂಗ ತಾರತಮ್ಯ ಸಮಾಜದ ಸೃಷ್ಟಿಯೇ ಹೊರತು ಹುಟ್ಟಿನಿಂದ ಬಂದದ್ದಲ್ಲ, ಕಂದಾಚಾರಗಳು ಎಷ್ಟು ಸರಿ? ಜ್ಞಾನ ಒಂದಿದ್ದರೆ ಸಾಲದು ಅದನ್ನು ಅಳವಡಿಸಿ ಕೊಳ್ಳವುದು ಮುಖ್ಯ ಇತ್ಯಾದಿ ಸಲಹೆಗಳನ್ನು ನೀಡಿದರು. 

ಈ ಕಮ್ಮಟವು11 ಸಂಪನ್ಮೂಲ ವ್ಯಕ್ತಿಗಳನ್ನೊಳಗೊಂಡ ತಂಡದಿಂದ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೂ ಮಾಹಿತಿ ನೀಡಲಾಯಿತು. ಅರಿವಿನ ಪಯಣದ ಹಾದಿಯಲ್ಲಿ ಶಾಲಾ ಪ್ರಾಂಶುಪಾಲರಾದ ಕು.ದೇಚಮ್ಮ ಟಿ.ಎಂ. ಹಾಗೂ ಮೀನ ಕೃಷ್ಣಮೂರ್ತಿ ಯವರ ಸಹಕಾರ ನೀಡಿದರು. ಅಧ್ಯಾಪಕ ವೃಂದದವರು ಕಾರ್ಯಕ್ರಮದಲ್ಲಿ ಭಾಗಿಗಳಾದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.