Breaking News

ಜ.5 : ಸುಬ್ರಹ್ಮಣ್ಯ ದೈಹಿಕ ಶಿಕ್ಷಣ ಶಿಕ್ಷಕರ ಪದಗ್ರಹಣ ಮತ್ತು ಕಾರ್ಯಗಾರ

Advt_Headding_Middle
Advt_Headding_Middle

  ಸುಬ್ರಹ್ಮಣ್ಯದ ಗ್ರಾ.ಪಂ ಸಭಾಭವನದಲ್ಲಿ ಜ.೫ ರಂದು ಕರ್ನಾಟಕ ರಾಜ್ಯ ಸರಕಾರಿ ಗ್ರೇಡ್  1 ದೈ.ಶಿ ಶಿಕ್ಷಕರ ಸಂಘ ( ರಿ) ಬೆಂಗಳೂರು ಇದರ ದ.ಕ ಜಿಲ್ಲಾ ಘಟಕದ ಪದಗ್ರಹಣ ಮತ್ತು ದ.ಕ ಜಿಲ್ಲಾ ದೈ.ಶಿ.ಶಿಕ್ಷಕರಿಗೆ ಕಾರ್ಯಗಾರ ನಡೆಯಲಿದೆ ಎಂದು ದೈಹಿಕ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಗಣೇಶ್‌ರವರು ತಿಳಿಸಿದ್ದರೆ.
ಅವರು ಸುಬ್ರಹ್ಮಣ್ಯದಲ್ಲಿ ಜ.1 ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಡಿ.ಡಿ.ಪಿ.ಐ, ಸುಬ್ರಹ್ಮಣ್ಯ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ನಿವೃತ್ತ ಜಿಲ್ಲಾ ದೈ.ಶಿ.ಅಧೀಕ್ಷಕ ನಾಳ ಕುಶಾಲಪ್ಪ ಭಾಗವಹಿಸಲಿದ್ದಾರೆ ಎಂದವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಸಂಘದ ಅಧ್ಯಕ್ಷ ಗಣೇಶ್, ರಾಜ್ಯ ಸಂಘ ಪರಿಷತ್ ಸದಸ್ಯ ಸಹದೇವ್, ಜಿಲ್ಲಾ ಸಂಘದ ಕೋಶಾಧಿಕಾರಿ ವೆಂಕಟ್ರಮಣ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.