Breaking News

ಕುರುಂಜಿಭಾಗ್‌ನಲ್ಲಿ ಆಯುಷ್‌ಕೇರ್ ಔಷಧಿಗಳ ಮಳಿಗೆ ಶುಭಾರಂಭ

Advt_Headding_Middle
Advt_Headding_Middle


ಸುಳ್ಯ ಕುರುಂಜಿಭಾಗ್‌ನಲ್ಲಿ ಆಲ್‌ಸೀಸನ್ ರೆಸ್ಟೋರೆಂಟ್‌ನ ಕೆಳಭಾಗದ ಕೊಠಡಿಯಲ್ಲಿ ಆಯುರ್ವೇದ ಔಷಧಿಗಳ ಮಳಿಗೆ ಜ. ೩ರಂದು ಶುಭಾರಂಭಗೊಂಡಿತು. ಕೆ.ವಿ.ಜಿ.ಆಯುರ್ವೇದ ಕಾಲೇಜಿನ ಆಡಳಿತಾಧಿಕಾರಿ ಡಾ. ಡಿ.ವಿ.ಲೀಲಾಧರ್ ಸಂಸ್ಥೆಯನ್ನು ಉದ್ಘಾಟಿಸಿದರು.

ಸುಳ್ಯ ನ.ಪಂ. ಅಧ್ಯಕ್ಷೆ ಶೀಲಾವತಿ ಮಾಧವ, ವರ್ತಕರ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ, ಲಯನ್ಸ್ ಮಾಜಿ ಗವರ್ನರ್ ಎಂ.ಬಿ.ಸದಾಶಿವ, ಕೆಫೆಕ್ ನಿರ್ದೇಶಕ ಪಿ.ಎ.ಮಹಮ್ಮದ್, ಕೆ.ಬಿ.ಇಬ್ರಾಹಿಂ, ಮುಖ್ಯ ಅತಿಥಿಗಳಾಗಿದ್ದರು. ನ.ಪಂ.ಸದಸ್ಯ ಕೆ.ಎಂ.ಮುಸ್ತಫಾ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.


ಭಾರತ ಸರಕಾರದ ಆಯುಷ್ ಮಂತ್ರಾಲಯದಿಂದ ಅನುಮೋದನೆಗೊಂಡ ಆಯುರ್ವೇದ ಔಷಧಿಗಳ ಸೌಂದರ್ಯವರ್ಧಕಗಳ, ಕೃಷಿ ಸಂಬಂಧಿತ ಔಷಧಿಗಳ ಬೃಹತ್ ಮಳಿಗೆ ಇದಾಗಿದೆ ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.