ಜ್ಯೋತಿಷಿ ಭಾಸ್ಕರ ಬಲ್ಯಾಯರ ದಾಂಪತ್ಯ ಜೀವನದ ದಶಸಂಭ್ರಮದ ಪ್ರಯುಕ್ತ ಕಾವುನಲ್ಲಿ ಮೇಳೈಸಿದ ಕಟೀಲು ಮೇಳದ ಸೇವೆಯಾಟ

Advt_Headding_Middle
Advt_Headding_Middle

ಕಾವು: ಕಾವು ನನ್ಯ ತುಡರ್ ಯುವಕ ಮಂಡಲದ ಮಾಜಿ ಅಧ್ಯಕ್ಷ, ಕಾವು ಗೋಪೂಜಾ ಸಮಿತಿ ಗೌರವಾಧ್ಯಕ್ಷ ಮದ್ಲ ನಿವಾಸಿ ಜ್ಯೋತಿಷಿ ಭಾಸ್ಕರ ಬಲ್ಯಾಯ ಮತ್ತು ರಮ್ಯಭಾಸ್ಕರ ದಂಪತಿಗಳ ದಶಸಂಭ್ರಮದ ಪ್ರಯುಕ್ತ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯವರಿಂದ ಸಂಪೂರ್ಣ ಶ್ರೀ ದೇವಿ ಮಹಾತ್ಮೆ ಸೇವೆಯಾಟವು ಜ.1 ರಂದು ಕಾವು ಪಂಚವಟಿನಗರದಲ್ಲಿ ಮೇಳೈಸಿತು.

ಮೇಳದ ದೇವರ ಮೆರವಣಿಗೆ:
ಮೇಳದ ದೇವರ ವೈಭವದ ಮೆರವಣಿಗೆಯು ನನ್ಯ ಅಚ್ಚುತ ಮೂಡೆತ್ತಾಯರ ಅನನ್ಯ ನಿವಾಸದಿಂದ ಕಾವುವರೆಗೆ ಬಂದು ಬಳಿಕ ಅಲ್ಲಿಂದ ಭಾಸ್ಕರ ಬಲ್ಯಾಯರ ಅಭಿಜ್ಞಾನ ನಿವಾಸಕ್ಕೆ ತೆರಳಿ ದೇವರಿಗೆ ಆರತಿ ಸಲ್ಲಿಸಿ ಅಲ್ಲಿಂದ ಚೌಕಿಯವರೆಗೆ ಬಂದು ಸಮಾಪನಗೊಂಡಿತು. ಮೆರವಣಿಗೆಯ ಸಂದರ್ಭದಲ್ಲಿ. ಬ್ಯಾಂಡ್, ಕೊಂಬು ವಾಲಗದೊಂದಿಗೆ ಸಾಗಿ ಬಂದ ಮೆರವಣಿಗೆಗೆ ಮಾತೆಯರು ಕಲಶ ಹಿಡಿದು ಸ್ವಾಗತ ನೀಡಿದರು.

ಕಟೀಲು ಅಸ್ರಣ್ಣರ ಆಗಮನ:
ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಹರಿನಾರಾಯಣದಾಸ ಅಸ್ರಣ್ಣರವರು ಚೌಕಿಪೂಜೆಯ ಸಂದರ್ಭದಲ್ಲಿ ಆಗಮಿಸಿ, ಸೇವಾಕರ್ತರ ಪರವಾಗಿ ಶ್ರೀದೇವರಲ್ಲಿ ಪ್ರಾರ್ಥನೆ ಸಲ್ಲಿಸಿ ಪ್ರಸಾದ ನೀಡಿ ಶುಭಹಾರೈಸಿದರು.

ಗೌರವಾರ್ಪಣೆ:
ಕಾರ್ಯಕ್ರಮಕ್ಕೆ ಆಗಮಿಸಿ ಪ್ರಾರ್ಥನೆ ಸಲ್ಲಿಸಿ ಪ್ರಸಾದ ನೀಡಿದ ಹರಿನಾರಾಯಣದಾಸ ಅಸ್ರಣ್ಣರವರಿಗೆ ಮತ್ತು ಸೇವೆಯಾಟಕ್ಕೆ ಸರ್ವರೀತಿಯಲ್ಲೂ ಸಹಕಾರ ನೀಡಿದ ನನ್ಯ ಅಚ್ಚುತ ಮೂಡೆತ್ತಾಯರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು. ಭಾಸ್ಕರ ಬಲ್ಯಾಯ ಮತ್ತು ರಮ್ಯಭಾಸ್ಕರ ದಂಪತಿಯವರು ಶಾಲು ಹೊದಿಸಿ, ಹಾರ ಹಾಕಿ, ಫಲಪುಷ್ಫ ಸ್ಮರಣಿಕೆ ನೀಡಿ ಗೌರವಾರ್ಪಣೆ ಸಲ್ಲಿಸಿದರು.

ಅನ್ನಸಂತರ್ಪಣೆ:
ಚೌಕಿಪೂಜೆಯ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ರಾತ್ರಿ ೧೨ ಗಂಟೆಯ ಬಳಿಕ ಚಹಾ ತಿಂಡಿಯ ವ್ಯವಸ್ಥೆಯೂ ಮಾಡಲಾಗಿತ್ತು.

ಕೊಂಬುವಾಲಗ-ಆಕರ್ಷಕ ಸುಡುಮದ್ದು ಪ್ರದರ್ಶನ:
ಮೆರವಣಿಗೆ, ಚೌಕಿ ಪೂಜೆ, ಯಕ್ಷಗಾನ ವಿಶೇಷ ಸಂದರ್ಭಗಳಲ್ಲಿ ಬ್ಯಾಂಡ್, ಕೊಂಬುವಾಲಗ, ಆಕರ್ಷಕ ಸುಡುಮದ್ದು ಪ್ರದರ್ಶನ ಯಕ್ಷಗಾನದ ಮೆರುಗನ್ನು ಹೆಚ್ಚಿಸಿತು.

ಕಿಕ್ಕಿರಿದ ಜನಸ್ತೋಮ:
ಸುಮಾರು ೧೮ ವರ್ಷಗಳ ಬಳಿಕ ಕಾವುನಲ್ಲಿ ಮೇಳೈಸಿದ ಕಟೀಲು ಮೇಳದ ಸೇವೆಯಾಟಕ್ಕೆ ಜನ ಕಿಕ್ಕಿರಿದು ಸೇರಿದ್ದು, ಕಾವು ಪಂಚವಟಿನಗರದ ಮೈದಾನ ತುಂಬಿ ತುಳುಕಿತ್ತು.

ಶಾಸಕರು ಸೇರಿದಂತೆ ಹಲವು ಗಣ್ಯರ ಆಗಮನ:
ಕಟೀಲು ಮೇಳದ ಸೇವೆಯಾಟಕ್ಕೆ ಪುತ್ತೂರು ಶಾಸಕ ಸಂಜೀವ ಮಠಂದೂರು, ಜಿ.ಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಜಿ.ಪಂನ ಶಿಕ್ಷಣ ಮತ್ತು ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷೆ ಅನಿತಾ ಹೇಮನಾಥ ಶೆಟ್ಟಿ, ತಾ.ಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಕಾವು ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ದಿವ್ಯನಾಥ ಶೆಟ್ಟಿ, ಕೆಯ್ಯೂರು ದೇವಳದ ಆಡಳಿತ ಸಮಿತಿ ಅಧ್ಯಕ್ಷ ಎಸ್.ಬಿ ಜಯರಾಮ ರೈ ಬಳಜ್ಜ, ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿ, ಬಜರಂಗದಳದ ದಕ್ಷಿಣಪ್ರಾಂತದ ಸಂಚಾಲಕ ಮುರಳಿಕೃಷ್ಣ ಹಸಂತಡ್ಕ, ಕಾವು ದೇವಳದ ಪ್ರಧಾನ ಅರ್ಚಕ ಶಿವಪ್ರಸಾದ್ ಕಡಮಣ್ಣಾಯ, ಯುವ ಮುಂದಾಳು ಸಹಜ್ ರೈ ಬಳಜ್ಜ, ಮಕ್ಕಳ ತಜ್ಞ ಡಾ. ಶ್ರೀಕಾಂತ್ ರಾವ್, ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು, ನಿರ್ದೇಶಕ ರಾಕೇಶ್ ರೈ ಕೆಡೆಂಜಿ, ಕಾಣಿಯೂರು ವಿಶ್ವಜ್ಞ ಯುವಕ ಮಂಡಲದ ಗೌರವಾಧ್ಯಕ್ಷ ಜನಾರ್ಧನ ಆಚಾರ್ಯ ಕಾಣಿಯೂರು, ಬುಶ್ರಾ ವಿದ್ಯಾಸಂಸ್ಥೆಯ ಅಧ್ಯಕ್ಷ ಅಬ್ದುಲ್ ಅಜೀಜ್ ಬುಶ್ರಾ, ನಿವೃತ್ತ ಮುಖ್ಯಗುರು ಸರೋಜಿನಿ ನಾಗಪ್ಪಯ್ಯ ಮೇನಾಲ, ನ್ಯಾಯವಾದಿ ಗಿರೀಶ್ ಮಳಿ, ಅರಿಯಡ್ಕ ಗ್ರಾ.ಪಂ ಉಪಾಧ್ಯಕ್ಷ ಲೋಕೇಶ್ ಚಾಕೋಟೆ, ಕಟ್ಟೆ ನಾರಾಯಣ ರೈ ಸೇರಿದಂತೆ ಊರ-ಪರವೂರಿನ ಅನೇಕ ಭಕ್ತಾದಿಗಳು, ಕಲಾಭಿಮಾನಿಗಳು ಕಾರ್ಯಕ್ರಮಕ್ಕೆ ಆಗಮಿಸಿದ್ದರು.

ಸ್ವಯಂಸೇವಕರಾಗಿ ದುಡಿದ ತುಡರ್ ಸದಸ್ಯರು:
ಕಾವು ನನ್ಯ ತುಡರ್ ಯುವಕ ಮಂಡಲದ ಸದಸ್ಯರ ಮತ್ತು ಊರವರ ಸಹಕಾರದಿಂದ ಭಕ್ತಿ, ಸಂಭ್ರಮ, ಸಂಪ್ರದಾಯದ ಕಟೀಲು ಮೇಳದ ಸೇವೆಯಾಟದ ಎಲ್ಲಾ ವ್ಯವಸ್ಥೆಗಳು ಬಹಳ ಅಚ್ಚುಕಟ್ಟಾಗಿ ನಡೆಯಿತು. ಕಾರ್ಯಕ್ರಮದ ಪ್ರಚಾರ ಮತ್ತು ಯಶಸ್ವಿಯ ಪೂರ್ಣ ಜವಾಬ್ದಾರಿ ವಹಿಸಿಕೊಂಡಿದ್ದ ಕಾವು ನನ್ಯ ತುಡರ್ ಯುವಕ ಮಂಡಲದ ಸದಸ್ಯರು ಸ್ಥಾಪಕಾಧ್ಯಕ್ಷ ಸುಬ್ರಾಯ ಬಲ್ಯಾಯರ ಮಾರ್ಗದರ್ಶನ, ಅಧ್ಯಕ್ಷ ಗಂಗಾಧರ ನಾಯ್ಕರವರ ನಿರ್ದೇಶನದಂತೆ ಕಾರ್ಯಕ್ರಮದಂದು ಎಲ್ಲಾ ವ್ಯವಸ್ಥೆಗಳನ್ನು ಬಹಳ ಶಿಸ್ತು ಮತ್ತು ಅಚ್ಚುಕಟ್ಟಾಗಿ ನಿರ್ವಹಿಸುವ ಮೂಲಕ ಸಾರ್ವಜನಿಕರ ಪ್ರಶಂಸೆ ಪಡೆದಿದ್ದಾರೆ.
ಸರ್ವರ ಸಹಕಾರದಿಂದ ಕಾರ್ಯಕ್ರಮ ಯಶಸ್ವಿ:
ದಾಂಪತ್ಯ ಜೀವನದ ದಶವರ್ಷದ ಸಲುವಾಗಿ ಭಕ್ತಿಯ ರೂಪದಲ್ಲಿ ನಡೆಸಿದ ಕಟೀಲು ದೇವಿಯ ಸೇವೆಯಾಟವು ಬಹಳ ಉತ್ತಮ ರೀತಿಯಲ್ಲಿ ನಡೆದು ಮನಸ್ಸಿಗೆ ಬಹಳಷ್ಟು ತೃಪ್ತಿ, ಆನಂದವನ್ನು ನೀಡಿದೆ, ಸಾರ್ವಜನಿಕ ಪ್ರದೇಶದಲ್ಲಿ ಕಾರ್ಯಕ್ರಮ ನಡೆಸುವಾಗ ಸಹಜವಾಗಿಯೇ ಸ್ವಲ್ಪ ಆತಂಕ ನನ್ನಲ್ಲಿತ್ತು, ಆದರೆ ನಮ್ಮೂರಿನ ಎಲ್ಲಾ ಸಾರ್ವಜನಿಕರು, ಸರ್ವಧರ್ಮ ಮಿತ್ರರು ಕಟೀಲು ಅಮ್ಮನವರ ಸೇವೆಗೆ ಒಳ್ಳೆಯ ಸಹಕಾರವನ್ನು ನೀಡುವುದರ ಮೂಲಕ ಕಾರ್ಯಕ್ರಮವನ್ನು ಯಶಸ್ಸು ಮಾಡಿಕೊಟ್ಟಿದ್ದಾರೆ, ಅದರಲ್ಲೂ ನನ್ನ ಸಾಮಾಜಿಕ ಜೀವನದ ಮಾತೃಸಂಸ್ಥೆ ತುಡರ್ ಯುವಕ ಮಂಡಲದ ಸದಸ್ಯರ ಸೇವಾರೂಪದ ಶ್ರಮ, ಸಹಕಾರಕ್ಕೆ ಬೆಲೆ ಕಟ್ಟಲಾಗದು, ಹಾಗಾಗಿ ಕಲಾರಾಧನೆಗೆ ಸಹಕರಿಸಿದ, ಪಾಲ್ಗೊಂಡ ಎಲ್ಲರಿಗೂ ಜಗನ್ಮಾತೆ ಒಳಿತನ್ನು ಮಾಡಲಿ ಎಂದು ಶುಭಹಾರೈಸುತ್ತೇನೆ.
-ಭಾಸ್ಕರ ಬಲ್ಯಾಯ, ಸೇವಾಕರ್ತರು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.