Breaking News

ಜಯಕರ ಮಡ್ತಿಲರಿಗೆ ಸುಬೇದಾರ್ ಆಗಿ ಭಡ್ತಿ

Advt_Headding_Middle
Advt_Headding_Middle

ಭಾರತೀಯ ಸೈನ್ಯ ದಲ್ಲಿ 24 ವರ್ಷ ಗಳಿಂದ ಸೇವೆ ಸಲ್ಲಿಸುತ್ತಿರುವ ಜಯಕರ ಮಡ್ತಿಲರಿಗೆ ಸುಬೇದಾರ್ ಆಗಿ ಭಡ್ತಿ ದೊರೆತಿದೆ.
ಐವರ್ನಾಡು ಗ್ರಾಮದ ಮಡ್ತಿಲ ದಿ.ದುಗಪ್ಪ ಗೌಡ ಮತ್ತು ರೇವತಿ ದಂಪತಿಗಳ ಪುತ್ರ ರಾಗಿರುವ ಜಯಕರರು 1995ರಲ್ಲಿ ಭಾರತೀಯ ಸೇನೆಗೆ ಸೇರ್ಪಡೆಯಾದರು.

ಆರಂಭದಲ್ಲಿ ಪುಣೆಯಲ್ಲಿ ಕರ್ತವ್ಯ ನಿರ್ವಹಿಸಿದ ಇವರು, ಆ ಬಳಿಕ ಸಿಕ್ಕಿಂ, ಜಮ್ಮುಕಾಶ್ಮೀರ, ಸಿಮ್ಲಾ, ಬೆಳಗಾಂ, ಚಂಡೀಗಡ, ಪ್ರಸ್ತುತ ಗೋವಾದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. 2000ರಲ್ಲಿ ಲಾಮ್ಸ್ ನಾಯಕ್ ಆಗಿ ಭಡ್ತಿ ಪಡೆದ ಇವರು, 2002ರಲ್ಲಿ ನಾಯಕ್ ಆಗಿ, 2009ರಲ್ಲಿ ಹವಾಲ್ದಾರ್, 2015ರಲ್ಲಿ ನಾಯಕ್ ಸುಬೇದಾರ್ ಆದರು. ಇದೀಗ ಜ.1, 2019ರಂದು ಸುಬೇದಾರ್ ಪದೋನ್ನತಿ ಗೊಂಡಿದ್ದಾರೆ.
ಐವರ್ನಾಡು ಗ್ರಾಮದ ಮಡ್ತಿಲ ದವರಾಗಿದ್ದ ಇವರು, ಪ್ರಸ್ತುತ ಉಬರಡ್ಕ ಮಿತ್ತೂರು ಗ್ರಾಮದ ಕಟ್ಟಕೊಚ್ಚಿಯಲ್ಲಿ ಮನೆ ಮಾಡಿದ್ದಾರೆ. ಪತ್ನಿ ಶ್ರೀಮತಿ ಧನಲಕ್ಷ್ಮೀ ಉಬರಡ್ಕ ಶಾಲೆಯಲ್ಲಿ ಪ್ರಬಾರ ಮುಖ್ಯ ಶಿಕ್ಷಕಿಯಾಗಿ ದ್ದಾರೆ. ಪುತ್ರಿ ಶಿಬಾನಿ ಎಂ.ಜೆ. ಕೆ.ವಿ.ಜಿ. ಐ.ಪಿ.ಎಸ್.ನಲ್ಲಿ ಓದುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.