ಕನಕಮಜಲು ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ ಅವಿರೋಧ ಆಯ್ಕೆ

Advt_Headding_Middle
Advt_Headding_Middle

ಕನಕಮಜಲು ಹಾಲು ಉತ್ಪಾದಕ ಸಹಕಾರಿ ಸಂಘಕ್ಕೆ ಎಲ್ಲಾ ಹತ್ತು ಮಂದಿ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಂಘಕ್ಕೆ ಜ.6 ರಂದು ಚುನಾವಣೆ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ಯಾರೂ ನಾಮಪತ್ರ ಸಲ್ಲಿಸದೇ ಇದ್ದುದರಿಂದ ಡಿ.31 ರಂದು ಚುನಾವಣಾ ರಿಟರ್ನಿಂಗ್ ಅಧಿಕಾರಿಯಾಗಿರುವ ಸುಳ್ಯ ತೋಟಗಾರಿಕಾ ಇಲಾಖೆಯ ಅಧಿಕಾರಿ ರಮ್ಯ ಅವರ ಉಪಸ್ಥಿತಿಯಲ್ಲಿ ಎಲ್ಲಾ ಹತ್ತು ಮಂದಿ ಸದಸ್ಯರುಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು .
ನೂತನ ಸದಸ್ಯರುಗಳಾಗಿ ರಾಮ್ ಪ್ರಸಾದ್ ಭಟ್ ಮಠಬೈಲು, ಗಂಗಾಧರ ಗೌಡ ಕಣಜಾಲು, ವಿಶ್ವನಾಥ ಕಣಜಾಲು, ಮನೋಜ್ ಕುಮಾರ್ ಮಳಿ,ಬಿ.ಹೆಚ್. ಬಾಲಚಂದ್ರ ಮಾಣಿಮಜಲು, ಶ್ರೀಧರ ಕುತ್ಯಾಳ, ಈಶ್ವರ ಕೊರಂಬಡ್ಕ, ಬಾಬು ಪಂಜಿಗುಂಡಿ, ಶ್ರೀಮತಿ ಲೋಲಾಕ್ಷಿ ಪಲ್ಲತಡ್ಕ ಹಾಗೂ ಶ್ರೀಮತಿ ಶೇಷಮ್ಮ ಕಾರಿಂಜ ಅವಿರೋಧವಾಗಿ ಆಯ್ಕೆಯಾದರು. ಜ.11ರಂದು ಅಧ್ಯಕ್ಷ , ಉಪಾಧ್ಯಕ್ಷರ ಆಯ್ಕೆ ನಡೆಯಲಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.