ಗ್ರಾಹಕರ ಹಿತರಕ್ಷಣಾ ಮಸೂದೆಯ ತಿದ್ದುಪಡಿ ಕಾಯ್ದೆಗೆ ಐ.ಎಂ.ಎ. ವಿರೋಧ

Advt_Headding_Middle
Advt_Headding_Middle

ಕೇಂದ್ರ ಸರಕಾರವು ಜಾರಿಗೆ ತರಲು ಉದ್ದೇಶಿಸಿರುವ ಗ್ರಾಹಕರ ಹಿತರಕ್ಷಣಾ ಮಸೂದೆಯ ತಿದ್ದುಪಡಿ ಕಾಯ್ದೆ ದೇಶದ ಆರೋಗ್ಯ ಕ್ಷೇತ್ರಕ್ಕೆ ಮಾರಕವಾಗಿದ್ದು, ಇದನ್ನು ಭಾರತೀಯ ವೈದ್ಯಕೀಯ ಸಂಘವು ವಿರೋಧಿಸುವುದಾಗಿ ಐಎಂಎ ಸುಳ್ಯ ಶಾಖೆಯ ಅಧ್ಯಕ್ಷೆ ಡಾ. ಗೀತಾ ದೊಪ್ಪ ಮತ್ತು ಮಹಿಳಾ ಘಟಕದ ಅದ್ಯಕ್ಷೆ ಡಾ. ವೀಣಾ ತಿಳಿಸಿದ್ದಾರೆ.


ಸುಳ್ಯದಲ್ಲಿ ಪತ್ರಿಕಾಗೋಷ್ಠಿಯನ್ನುದ್ಧೇಶಿಸಿ ಮಾತನಾಡಿದ ಅವರು, ಈಗಾಗಲೇ ಆರೋಗ್ಯ ಕ್ಷೇತ್ರಕ್ಕೆ ಮಾರಕವಾಗಿರುವ ೨ ಕಾಯ್ದೆಗಳನ್ನು ಐಎಂಎ ವಿರೋಧಿಸಿದ್ದು ಇದನ್ನು ಕೂಡಾ ವಿರೋಧಿಸುತ್ತಿದೆ. 1986 ರಲ್ಲಿ ಸಂಸತ್ ಸಭೆಯಲ್ಲಿ ಮಂಡಿಸಲಾದ ಗ್ರಾಹಕ ಹಿತರಕ್ಷಣಾ ಮಸೂದೆಯಲ್ಲಿ ವೈದ್ಯಕೀಯ ವೃತ್ತಿ ಒಳಗೊಂಡಿರಲಿಲ್ಲ. 1994 ರಲ್ಲಿ ವೈದ್ಯಕೀಯ ವೃತ್ತಿಯನ್ನು ಸೇರ್ಪಡೆಗೊಳಿಸಲಾಯಿತು. ಈ ಕಾಯ್ದೆಯಲ್ಲಿ ಅನುಮೋದಿಸಿದ ತಿದ್ದುಪಡಿಗಳು ದೇಶದ ಆರೋಗ್ಯ ಕ್ಷೇತ್ರಕ್ಕೆ ಮಾರಕವಾಗಿದೆ. ಇದರ ಪ್ರಕಾರ ಜಿಲ್ಲಾ ಗ್ರಾಹಕ ಹಿತರಕ್ಷಣಾ ವೇದಿಕೆಯ ವ್ಯಾಪ್ತಿಯನ್ನು ರೂ. 2೦ ಲಕ್ಷದಿಂದ 1 ಕೋಟಿಗೆ ಏರಿಸಲಾಗಿದೆ. ರಾಜ್ಯ ಗ್ರಾಹಕ ಹಿತರಕ್ಷಣಾ ವೇದಿಕೆಯ ವ್ಯಾಪ್ತಿಯನ್ನು 1 ಕೋಟಿಯಿಂದ 1೦ ಕೋಟಿಗೆ ಏರಿಸಲಾಗಿದೆ. ಈ ತಿದ್ದುಪಡಿಯಿಂದಾಗಿ ಗ್ರಾಹಕ ಹಿತರಕ್ಷಣಾ ವೇದಿಕೆಯಲ್ಲಿ ನ್ಯಾಯಾಧೀಶರ ಸದಸ್ಯರ ಕಡ್ಡಾಯವಿಲ್ಲ. ತೊಂದರೆಗೊಳಗಾದವರು ಮಾತ್ರವಲ್ಲದೆ ಘಟನೆಗೆ ಸಂಬಂಧವಿಲ್ಲದ ಇತರ ಸಂಘಟನೆಗಳು ದೂರು ಸಲ್ಲಿಸಲು ಅವಕಾಶವಿದೆ. ಇದು ಸುಳ್ಳು ದೂರುಗಳಿಗೆ ಕಾರಣವಾಗುತ್ತದೆ. ಮಧ್ಯವರ್ತಿ ಘಟಕಗಳಗೆ ಅನುವು ಮಾಡಿಕೊಟ್ಟು ವೈದ್ಯರನ್ನು ಮತ್ತು ವೈದ್ಯಕೀಯ ಸಂಸ್ಥೆಗಳನ್ನು ಬೆದರಿಸಿ ಈ ಘಟಕಗಳು ವಸೂಲಿ ಕೇಂದ್ರಗಳಾಗಿ ಕೆಲಸ ಮಾಡುವ ಸಾಧ್ಯತೆಗಳಿವೆ. ಪರಿಣತ ವೈದ್ಯಕೀಯ ಅಭಿಪ್ರಾಯಗಳನ್ನು ಪಡೆಯದೆ ತೀರ್ಮಾನ ಕೈಗೊಳ್ಳುವ ವಕಾಶಗಳಿವೆ. ಘಟಕದ ಅಧ್ಯಕ್ಷರ ಮತ್ತು ಸದಸ್ಯರ ಅರ್ಹತೆಗಳನ್ನು ಕೇಂದ್ರ ಸರಕಾರವೇ ನಿಗದಿಪಡಿಸಲಿದ್ದು, ಅಧ್ಯಕ್ಷರು ಮತ್ತು ಸದಸ್ಯರಲ್ಲಿ ನ್ಯಾಯಾಧೀಶರು ಇರಬೇಕೆಂಬ ನಿಯಮವಿಲ್ಲ. ಈ ಎಲ್ಲಾ ಕಾರಣಗಳಿಗಾಗಿ ಈ ಕಾಯ್ದೆ ಆರೋಗ್ಯ ಕ್ಷೇತ್ರಕ್ಕೆ ಮಾರಕವಾಗಿದೆ ಎಂದರು.
ಈಗಾಗಲೇ ಕಾರಣವಿಲ್ಲದೆ ಹಣಕ್ಕಾಗಿ ಮತ್ತು ಬೆದರಿಕೆ ತಂತ್ರವಾಗಿ ವೈದ್ಯರ ಮತ್ತು ಆಸ್ಪತ್ರೆಗಳ ಮೇಲೆ ವ್ಯಾಜ್ಯಗಳು ನಡೆಯುತ್ತಿವೆ. ವೈದ್ಯರ ದಾಖಲೆಗಳ ಅಗತ್ಯಕ್ಕಾಗಿ ಮತ್ತು ಸ್ವರಕ್ಷಣೆಗಾಗಿ ಹಲವಾರು ಪರೀಕ್ಷೆಗಳನ್ನು ಮಾಡಿಸಬೇಕಾಗಿದ್ದು, ಇದರಿಂದ ಪರೀಕ್ಷಾ ಮತ್ತು ಚಿಕಿತ್ಸಾ ವೆಚ್ಚಗಳು ಮತ್ತಷ್ಟು ದುಬಾರಿಯಾಗಲಿವೆ. ಆದುದರಿಂದ ಈ ಮಸೂದೆಯನ್ನು ಜಾರಿ ಮಾಡಬಾರದು. ಒಂದು ವೇಳೆ ಜಾರಿ ಮಾಡುವುದಿದ್ದರೆ ಐಎಂಎ ಮುಂದಿರಿಸಿದ ಸಲಹೆಗಳನ್ನು ಪರಿಗಣಿಸಬೇಕು. ಸಮಿತಿಗೆ ನ್ಯಾಯಾಧೀಶರೇ ಅಧ್ಯಕ್ಷರಾಗಬೇಕು. ತೊಂದರೆಗೆ ಒಳಗಾದವರಿಗೆ ಹೊರತು ಬೇರೆ ಯಾರಿಗೂ ದೂರು ಸಲ್ಲಿಸಲು ಅವಕಾಶವಿರಬಾರದು. ಸಂಧಾನ ಸಮಿತಿಗಳು, ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರದ ಗ್ರಾಹಕ ಹಿತರಕ್ಷಣಾ ಮಂಡಳಿಗಳಲ್ಲಿ ತಜ್ಞ ವೈದ್ಯರ ಪ್ರಾತಿನಿತ್ಯ ಇರಬೇಕು. ಸುಳ್ಳು ಮೊಕದ್ದಮೆಗಳಿಗೆ ಸೂಕ್ತ ಪ್ರಮಾಣದಲ್ಲಿ ದಂಡ ವಿಧಿಸುವ ಕ್ರಮವನ್ನು ಅಳವಡಿಸಬೇಕು ಎಂಬುದು ಐಎಂಎ ಆಗ್ರಹವಾಗಿದೆ ಎಂದು ಅವರು ತಿಳಿಸಿದರು.
ಐಎಂಎ ಪೂರ್ವಾಧ್ಯಕ್ಷೆ ಡಾ. ಸಾಯಿಗೀತ, ಪ್ರ.ಕಾರ್ಯದರ್ಶಿ ಡಾ. ಭರತ್ ಶೆಟ್ಟಿ, ಡಾ. ರವಿಕಾಂತ್, ಡಾ. ಶಕುಂತಲಾ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.