Breaking News

ಮುರುಳ್ಯ ಶಾಲೆಯ ಪ್ರತಿಭಾ ದಿನೋತ್ಸವ

Advt_Headding_Middle
Advt_Headding_Middle

ಶಾಲೆಯ ಶ್ರೇಯೋಭಿವೃದ್ಧಿಯಲ್ಲಿ ಊರವರ ಸಹಕಾರ ಎಸ್‌ಡಿಎಂಸಿಯವರ ಮುತುವರ್ಜಿ ಮತ್ತು ಶಾಲಾ ಶಿಕ್ಷಕ ವೃಂದದ ಅವಿರತ ಶ್ರಮ ಶ್ಲಾಘನೀಯ. ಮುಂದಿನ ಶೈಕ್ಷಣಿಕ ಸಾಲಿನಲ್ಲಿ ವಿದ್ಯಾರ್ಥಿಗಳ ದಾಖಲಾತಿ ಇನ್ನೂ ಹೆಚ್ಚಾಗಿ ತಾಲೂಕಿನಲ್ಲಿ ಉತ್ತಮ ಶಾಲೆಯಾಗಿ ಮೂಡಿಬರಲಿ ಎಂದು ಶಾಸಕ ಎಸ್. ಅಂಗಾರ ಹೇಳಿದರು.


ಅವರು ಸ.ಹಿ.ಪಾ. ಶಾಲೆ ಮುರುಳ್ಯದಲ್ಲಿ ನಡೆದ ಶಾಲಾ ಪ್ರತಿಭಾ ದಿನೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ಸುಳ್ಯ ತಾಲೂಕು ಪಂಚಾಯತ್ ಅಧ್ಯಕ್ಷ ಚನಿಯ ಕಲ್ತಡ್ಕ ಅಧ್ಯಕ್ಷತೆ ವಹಿಸಿದ್ದರು. ಬೆಳ್ಳಾರೆ ಕ್ಷೇತ್ರದ ಜಿಲ್ಲಾ ಪಂಚಾಯತ್ ಸದಸ್ಯ ಎಸ್.ಎನ್. ಮನ್ಮಥ, ತಾಲೂಕು ಪಂ. ಉಪಾಧ್ಯಕ್ಷೆ ಶುಭದಾ ಎಸ್. ರೈ, ಗಾ.ಪಂ. ಉಪಾಧ್ಯಕ್ಷ ಕರುಣಾಕರ ಗೌಡ ಹುದೇರಿ, ಗ್ರಾ. ಪಂ. ಸದಸ್ಯೆ ಗೀತಾ ಪೂದೆ, ಶಿಕ್ಷಣ ಸಂಯೋಜಕಿ ಸಂಧ್ಯಾ ಕುಮಾರಿ ಎಣ್ಮೂರು ಕ್ಲಸ್ಟರ್‌ನ ಸಮೂಹ ಸಂಪನ್ಮೂಲ ವ್ಯಕ್ತಿ ಜಯಂತ ಕೆ. ಸ್ಥಳದಾನಿ ನವೀನ್ ಕುಮಾರ್ ಬೊಳ್ಕಜೆ ಮತ್ತು ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅಕ್ಷಯ ಆಳ್ವ ಪಿ.ಡಿ. ಮಾತನಾಡಿದರು.
ಈ ಸಂದರ್ಭದಲ್ಲಿ ಶಾಲಾ ರಂಗಮಂಟಪಕ್ಕೆ ರೂ. ೩ ಲಕ್ಷ ಅನುದಾನವನ್ನು ಘೋಷಿಸಲಾಯಿತು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಕಾರ್ಯದರ್ಶಿ ತೇಜಪ್ಪ ಹಾಗೂ ದತ್ತಿನಿಧಿ ದಾನಿಗಳು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕಿ ಲೀಲಾವತಿ ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ ರಾಘವ ಗೌಡ ಪಲ್ಲತಡ್ಕ ಮತ್ತು ನವೀನ್ ಬೊಳ್ಕಜೆ ತಲಾ ೧೦,೦೦೦ ದತ್ತಿನಿಧಿ ಘೋಷಣೆ ಮಾಡಿದರು.
ಕಾರ್ಯಕ್ರಮದಲ್ಲಿ ಪ್ರತಿಭಾ ದಿನ ಪ್ರಯುಕ್ತ ನಡೆದ ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ಹಾಗೂ ದತ್ತಿ ನಿಧಿಯನ್ನು ವಿತರಿಸಲಾಯಿತು. ಈ ಸಂದರ್ಭ ನಿವೃತ್ತ ವಿಷಯ ಪರಿವೀಕ್ಷಕರ ದಿ. ದಾಮೋದರ ಗೌಡ ದೇವರಮಜಲು ಸ್ಮರಣಾರ್ಥ ಶಾಲಾ ಮುಂಭಾಗದ ಆವರಣದ ಗೇಟ್ ನೀಡಿದ ಅವಿನಾಶ್ ದೇವರಮಜಲು ಹಾಗೂ ಶಾಲೆಗೆ ಕಾಲುದೀಪ ಕೊಡುಗೆಯಾಗಿ ನೀಡಿದ ಮೈನಾ ಕುಸುಮಾಧರ ಕೇಪಳ ಕಜೆಯವರನ್ನು ಪುರಸ್ಕರಿಸಲಾಯಿತು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಬಾಲಕೃಷ್ಣ ಕೆ. ಸ್ವಾಗತಿಸಿದರು ಎಸ್‌ಡಿಎಂಸಿ ಅಧ್ಯಕ್ಷೆ ಮಧು ಪಿ.ಆರ್. ಪ್ರಾಸ್ತಾವಿಕ ಮಾತುಗಳನ್ನು ಹಿಡಿದರು. ಮುಖ್ಯ ಶಿಕ್ಷಕಿ ಚಂದ್ರಿಕಾ ಬಿ.ಸಿ. ವರದಿ ವಾಚಿಸಿದರು. ಎಸ್‌ಡಿಎಂಸಿ ಉಪಾಧ್ಯಕ್ಷ ಸುಧಾಕರ ಗೌಡ ವಂದಿಸಿದರು. ಶಿಕ್ಷಕಿಯರಾದ ನಳಿನಾಕ್ಷಿ ಬಿ. ಮತ್ತು ಭುವನ ಬಿ.ಆರ್. ಕಾರ್ಯಕ್ರಮವನ್ನು ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.