ಕೇಂದ್ರ ಸರಕಾರದ ವಿರುದ್ಧ ಜ. 8 , 9ರಂದು ಮಹಾಮುಷ್ಕರ

Advt_Headding_Middle
Advt_Headding_Middle

ಕೇಂದ್ರ ಸರಕಾರದ ವಿರುದ್ಧ, ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಜ. 8, 9 ರಂದು ಅಖಿಲ ಭಾರತ ಮಹಾಮುಷ್ಕರ ದ.ಕ. ಜಿಲ್ಲೆಯಾದ್ಯಂತ ನಡೆಯಲಿದೆ ಮುಷ್ಕರವನ್ನು ಯಶಸ್ವಿಗೊಳಿಸಲು ಸಿಐಟಿಯು ಮುಖಂಡ ರಾಬರ್ಟ್ ಡಿಸೋಜಾ ತಿಳಿಸಿದ್ದಾರೆ.
ಅವರು ಜ. 5 ರಂದು ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.


ಕನಿಷ್ಠ ವೇತನ, ಸಾಮಾಜಿಕ ಭದ್ರತೆ, ಉದ್ಯೋಗ ಸೃಷ್ಟಿ, ಸ್ಕೀಮ್ ಕಾರ್ಮಿಕರ ಸವಲತ್ತುಗಳು ಮುಂತಾದ ಬೇಡಿಕೆಗಳ ಈಡೇರಿಕೆಗಾಗಿ ಹಾಗೂ ಖಾಸಗೀಕರಣ, ಗುತ್ತಿಗೆ ಪದ್ಧತಿ, ಮುಂತಾದ ಸರಕಾರದ ಕ್ರಮಗಳನ್ನು ವಿರೋಧಿಸಿ 12 ಅಂಶಗಳ ಬೇಡಿಕೆ ಪಟ್ಟಿಯನ್ನು ದೇಶದ ಎಲ್ಲಾ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಕೇಂದ್ರ ಸರಕಾರದ ಮುಂದಿಟ್ಟು ಅವುಗಳ ಈಡೇರಿಕೆಗಾಗಿ ಹಲವಾರು ಹೋರಾಟಗಳನ್ನು ನಡೆಸುತ್ತಾ ಬಂದಿದೆ. ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದು ಅವರು ಹೇಳಿದರು.
ಬೆಲೆಯೇರಿಕೆ ತಡೆಗಟ್ಟಬೇಕು, ಕನಿಷ್ಠ ವೇತನವನ್ನು ಮಾಸಿಕ 18೦೦೦ಕ್ಕೆ ಹೆಚ್ಚಿಸಬೇಕು, ಕಾರ್ಮಿಕರ ಹಿತಾಸಕ್ತಿಗಳ ವಿರುದ್ಧವಾಗಿ ಕಾರ್ಮಿಕ ಕಾನೂನುಗಳನ್ನು ತಿದ್ದುಪಡಿ ಮಾಡಬಾರದು, ಗುತ್ತಿಗೆ, ದಿಕೂಲಿ ಕಾರ್ಮಿಕರನ್ನು ಖಾಯಂ ಮಾಡಬೇಕು. ಹೊರಗುತ್ತಗೆ ಪೂರ್ಣವಾಗಿ ನಿಲ್ಲಿಸಬೇಕು, ಎಲ್ಲಾ ನಿವೃತ್ತ ಕಾರ್ಮಿಕರಿಗೂ ಕನಿಷ್ಠ 3೦೦೦ ರೂ. ಪಿಂಚಣಿ ನೀಡಬೇಕು, ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು, ಅಸಂಘಟಿತ ಮತ್ತು ಕೃಷಿ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸಬೇಕು. ಮೊದಲಾದ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಅವರು ಹೇಳಿದರು.
ಸುಳ್ಯದಲ್ಲಿ ಬೆಳಿಗ್ಗೆ 11 ಗಂಟೆಗೆ ಜ್ಯೋತಿ ಸರ್ಕಲ್‌ನಲ್ಲಿ ಸೇರಿ ಗಾಂಧಿನಗರದವರೆಗೆ ಮೆರವಣಿಗೆ ಮಾಡಿ ಅಲ್ಲಿಂದ ಹಿಂತಿರುಗಿ ಬಸ್‌ನಿಲ್ದಾಣದ ಬಳಿ ಬೃಹತ್ ಸಭೆ ಮಾಡಲಿದ್ದೇವೆ ಎಂದು ಶಾಫಿ ಕುತ್ತಮೊಟ್ಟೆ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕಟ್ಟಡ ಕಾರ್ಮಿಕರ ಸಂಘದ ನಾಗರಾಜ ಕಲ್ಲುಮುಟ್ಲು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.