Breaking News

ನಿವೃತ್ತ ಉಪ ಕಾರ್ಯದರ್ಶಿ ವಸಂತ ಕುಮಾರ್ ಗೆ ಬೀಳ್ಕೊಡುಗೆ

Advt_Headding_Middle
Advt_Headding_Middle

ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘ ಇದರ ಉಪ ಕಾರ್ಯದರ್ಶಿ ಕೆ. ವಸಂತ ಕುಮಾರ್ ಅವರ ಬೀಳ್ಕೊಡುಗೆ ಕಾರ್ಯಕ್ರಮ ಜ.5 ರಂದು ಸಂಘದ ಪ್ರಧಾನ ಕಛೇರಿಯಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೊಸೈಟಿ ಅಧ್ಯಕ್ಷ ಎಂ.ಸುಧಾಕರ ರೈ ಬಾಳಿಲ ವಹಿಸಿದ್ದರು. ಕಳಂಜ ಬಾಳಿಲ ಸೊಸೈಟಿ ಮಾಜಿ ಅಧ್ಯಕ್ಷ ಎಸ್.ಬಿ.ದಳ ವಸಂತ ಕುಮಾರ್ ಮತ್ತು ಅವರ ಪತ್ನಿ ಕೋಟೆಮುಂಡುಗಾರು ಹಿ.ಪ್ರಾ.ಶಾಲೆಯ ಶಿಕ್ಷಕಿ ರೋಹಿಣಿ ದಂಪತಿಗಳನ್ನು ಶಾಲು ಹಾಕಿ, ಫಲಪುಷ್ಪ ನೀಡಿ, ಚಿನ್ನದ ಉಂಗುರ ನೀಡಿ ಗೌರವಿಸಿದರು.

 

ವೇದಿಕೆಯಲ್ಲಿ ಸೊಸೈಟಿ ಉಪಾಧ್ಯಕ್ಷ ಟಿ.ಲಿಂಗಪ್ಪ ಗೌಡ ತಂಟೆಪ್ಪಾಡಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ವೆಂಕಪಯ್ಯ ನಿರ್ದೇಶಕರುಗಳಾದ ಎನ್.ವಿಶ್ವನಾಥ ರೈ, ಅಜಿತ್ ರಾವ್, ಬಿ.ಸುಭಾಶ್ಚಂದ್ರ ರೈ, ಎಂ ಕೂಸಪ್ಪ ಗೌಡ, ಬಿ.ಕುಂಞಣ್ಣ ನಾಯ್ಕ, ಮಾಲಿನಿ ಪ್ರಸಾದ್, ಉಪಸ್ಥಿತರಿದ್ದರು. ರಾಧಾಕೃಷ್ಣ ಗಿರಿಪುಂಡೂರು, ಡಾ.ನಮೃತಾ, ಡಾ.ಹರ್ಷವರ್ಧನ ಅಭಿಪ್ರಾಯ ವ್ಯಕ್ತಪಡಿಸಿದರು. ಅಜಿತ್ ರಾವ್ ಕಿಲಂಗೋಡಿ ಸ್ವಾಗತಿಸಿ, ಸುಭಾಶ್ಚಂದ್ರ ರೈ ವಂದಿಸಿದರು. ಸೊಸೈಟಿ ಸಿಬ್ಬಂದಿ ಭಾಸ್ಕರ ಶೇಣಿ ಪ್ರಾರ್ಥನೆ ಮಾಡಿದರು. ವೆಂಕಪಯ್ಯ ಅವರು ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.