ಸಾವಯವ ಕೃಷಿ ಮತ್ತು ದ್ರಢೀಕರಣ ಕಾರ್ಯಕ್ರಮದಡಿ ಅರ್ಜಿ ಸಲ್ಲಿಸಲು ಜ. 10 ರವರೆಗೆ ಅವಕಾಶ

Advt_Headding_Middle
Advt_Headding_Middle

ಸಾವಯವ ಕೃಷಿ ಪ್ರಮಾಣೀಕೃತ ಪ್ರದೇಶವನ್ನು ಹೆಚ್ಚಿಸುವುದರೊಂದಿಗೆ ಮಾರುಕಟ್ಟೆಗೆ ನಿರಂತರವಾಗಿ ಒಳ್ಳೆಯ ಗುಣಮಟ್ಟದ ಸಾವಯವ ಕೃಷಿ ಉತ್ಪನ್ನಗಳನ್ನು ಪೂರೈಕೆ ಮಾಡಲು ಸಾವಯವ ಕೃಷಿ ಮತ್ತು ದರಢೀಕರಣ ಯೋಜನೆಯನ್ನು ಕರ್ನಾಟಕ ರಾಜ್ಯ ಸಾವಯವ ಪ್ರಮಾಣೀಕರಣ ಸಂಸ್ಥೆಯ ಮೂಲಕ ಅನುಷ್ಠಾನಗೊಳಿಸಲು ಯೋಜಿಸಲಾಗಿದೆ. ಈ ಯೋಜನೆಯ ಸೌಲಭ್ಯ ಪಡೆಯಲು ಕ್ಷೇತ್ರವನ್ನು ಸಾವಯವ ಪ್ರಮಾಣೀಕರಣಕ್ಕೆ ಈಗಾಗಲೇ ಮೊದಲನೇ ವರ್ಷಕ್ಕೆ ನೊಂದಾಯಿಸಲಾಗಿರುವ ಮತ್ತು ನೊಂದಾಯಿಸಲು ಆಸಕ್ತಿ ಇರುವ ಅರ್ಹ ನೊಂದಾಯಿತ ಸಂಘ ಸಂಸ್ಥೆಗಳು, ಕೃಷಿಕರ ಸಂಘಗಳು, ಖಾಸಗಿ ಸಂಸ್ಥೆಗಳು / ರೈತ ಉತ್ಪಾದನಾ ಸಂಸ್ಥೆಗಳು / ಕೃಷಿಕರು ಡಿ. 31  ರೊಳಗಾಗಿ ಸಮೀಪದ ಇಲಾಖೆಯ ಕಛೇರಿಗಳಲ್ಲಿ ಪ್ರಸ್ತಾವನೆಯನ್ನು ಸಲ್ಲಿಸಲು ಈ ಹಿಂದೆ ಪ್ರಕಟಣೆ ನೀಡಲಾಗಿತ್ತು. ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ಜ. 10 ರ ತನಕ ಮುಂದೂಡಲಾಗಿದ್ದು, ಆಸಕ್ತಿಯುಳ್ಳ ಕೃಷಿಕರು ಹಾಗೂ ಸಂಘ ಸಂಸ್ಥೆಗಳು ಅರ್ಜಿಯನ್ನು ಸಲ್ಲಿಸಬೇಕಾಗಿ ಕೋರಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರ ದ ಕೃಷಿ ಅಧಿಕಾರಿಗಳನ್ನಾಗಲೀ, ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರನ್ನಾಗಲೀ ಸಂಪರ್ಕಿಸಬಹುದಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.