Breaking News

ಸಂಪಾಜೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಸ್ವಚ್ಛತಾ ಆಂದೋಲನದ ಬಗ್ಗೆ ಸಭೆ

Advt_Headding_Middle
Advt_Headding_Middle

ಸಂಪಾಜೆ ಗ್ರಾ.ಪಂ., ವರ್ತಕರ ಸಂಘ ಸಂಪಾಜೆ ಮತ್ತು ವಿವಿಧ ಸಂಘಸಂಸ್ಥೆಗಳ ವತಿಯಿಂದ ಸಂಪಾಜೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಸ್ವಚ್ಛತಾ ಆಂದೋಲನದ ಬಗ್ಗೆ ಜ . 6 ರಂದು ಸಭೆ ಕರೆಯಲಾಯಿತು.

ಕಲ್ಲುಗುಂಡಿಯ ಎಲ್ಲಾ ಕಸದ ತೊಟ್ಟಿಗಳನ್ನು ತೆರವುಗೊಳಿಸಿ ವಾಹನದ ಮೂಲಕ ಕಸ ಸಂಗ್ರಹಿಸಿ ತೆಗೆದುಕೊಂಡು ಹೋಗುವುದೆಂದು ತೀರ್ಮಾನಿಸಿ ಇದರ ವೆಚ್ಚವನ್ನು ವರ್ತಕರು ಮತ್ತು ಗ್ರಾ.ಪಂ. ಭರಿಸುವುದೆಂದು ತೀರ್ಮಾನಿಸಲಾಯಿತು. ಕೋಳಿ ತ್ಯಾಜ್ಯಗಳನ್ನು ಅಲ್ಲಲ್ಲಿ ಎಸೆಯುವ ಬಗ್ಗೆ ಕ್ರಮ ಕೈಗೊಳ್ಳುವಂತೆ ಸುಳ್ಯ ಸಬ್ ಇನ್ಸ್‌ಪೆಕ್ಟರ್‌ರಿಗೆ ಮನವಿಯನ್ನು ಮಾಡಲಾಯಿತು. ಸಂಪಾಜೆ ಸಂಪೂರ್ಣ ಪ್ಲಾಸ್ಟಿಕ್ ರಹಿತ ಮಾಡುವಂತೆ ತೀರ್ಮಾನಿಸಿ ಪ್ಲಾಸ್ಟಿಕ್ ಮಾರುವವರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ನಿರ್ಣಯ ಮಾಡಲಾಯಿತು.

ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ವರ್ತಕರ ಸಂಘದ ಅಧ್ಯಕ್ಷರು, ಸದಸ್ಯರು, ಲಯನ್ಸ್‌ನ ಅದ್ಯಕ್ಷರು, ಸದಸ್ಯರು, ಧ.ಗ್ರಾ.ಯೋಜನೆಯ ಪದಾಧಿಕಾರಿಗಳು ಮತ್ತು ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.