ಜ.13: ಬೆಳ್ಳಾರೆಯಲ್ಲಿ ಗಾನಸಿರಿ ಹಾಡು-ಆಟ ಆಡು ರಿಯಾಲಿಟಿ ಶೋ

Advt_Headding_Middle
Advt_Headding_Middle

ಪುತ್ತೂರು: ಗಾಯಕ ಕಿರಣ್ ಕುಮಾರ್ ಸಾರಥ್ಯದ ಗಾನಸಿರಿ ಕಲಾಕೇಂದ್ರ ತನ್ನದೇ ಆದ ವಿಭಿನ್ನ ಶೈಲಿಯ ಸಂಗೀತ ಕಾರ್ಯಕ್ರಮಗಳ ಸಂಘಟನೆಗೆ ಹೆಸರುವಾಸಿಯಾಗಿದೆ. ಈ ಸಾಲಿಗೆ ಒಂದು ಸೇರ್ಪಡೆ ಎಂಬಂತೆ ಇದೀಗ ಇನ್ನೊಂದು ವಿಶಿಷ್ಟ ಕಾರ್ಯಕ್ರಮ ಜ.೧೩ರಂದು ಬೆಳ್ಳಾರೆ ಸರಕಾರಿ ಪದವಿ ಪೂರ್ವ ಕಾಲೇಜಿನ ನಾರಾಯಣ ಶೇಖ ಸಭಾಂಗಣದಲ್ಲಿ ಬೆಳಿಗ್ಗೆ 9.30 ರಿಂದ ರಾತ್ರಿ 8.30 ರವರೆಗೆ ಹಾಡು – ಆಟ ಆಡು ಎಂಬ ಮ್ಯೂಸಿಕಲ್ ರಿಯಾಲಿಟಿ ಶೋ ನಡೆಯಲಿದೆ.
ಗಾನಸಿರಿಯ 7ವಿವಿಧ ಶಾಖೆಗಳ ಸುಮಾರು 500ವಿದ್ಯಾರ್ಥಿಗಳಿಗೆ 3ಹಂತಗಳಲ್ಲಿ ಟಿ ವಿ ರಿಯಾಲಿಟಿ ಶೋ ಮಾದರಿಯಲ್ಲಿ ನಡೆಯುವ ಅದ್ದೂರಿ ಸಂಗೀತ ಹಬ್ಬ ಇದಾಗಿದೆ. ಭಾವಗೀತೆ, ಜನಪದ, ದೇಶಭಕ್ತಿ, ಹಳೆಯ ಮಧುರ ಗೀತೆಗಳು, ಕಾಮೆಡಿ ಹಾಡುಗಳು, ಸಮೂಹ ಗೀತೆ, ಹೊಸ ಚಲನ ಚಿತ್ರ ಗೀತೆಗಳು, ಫಿಲ್ಮಿ ಕ್ಲಾಸಿಕಲ್ ಹೀಗೆ ಒಟ್ಟು 20 ವಿವಿಧ ಗೀತ ಪ್ರಾಕಾರಗಳನ್ನು ಪ್ರತಿ ತಂಡವೂ ತಮ್ಮ ಪ್ರತ್ಯೇಕ 2.00 ಗಂಟೆಗಳ ಸಮಯಾವಕಾಶದಲ್ಲಿ ಪ್ರಸ್ತುತ ಪಡಿಸುವ ಕಾರ್ಯಕ್ರಮ ಇದಾಗಿದ್ದು ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿದೆ. ನಾಡಿನ ಸುಪ್ರಸಿದ್ಧ ಹಿನ್ನೆಲೆ ಸಂಗೀತ ಕಲಾವಿದರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು ಮನಮೋಹಕ ವೇದಿಕೆ ವಿನ್ಯಾಸ, ಅತ್ಯಾಧುನಿಕ ಧ್ವನಿ ಬೆಳಕು ಎಂದಿನಂತೆ ಗಾನಸಿರಿಯ ಕಾರ್ಯಕ್ರಮಕ್ಕೆ ಕಳೆ ಕಟ್ಟಲಿದ್ದು ಕಲಾಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಗಾನಸಿರಿ ಪ್ರಕಟಣೆ ತಿಳಿಸಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.