Breaking News

ಸುಬ್ರಹ್ಮಣ್ಯ ಉಪವಿಭಾಗದವರು ಮೆಸ್ಕಾಂ ಬಿಲ್ ಕಟ್ಟಲು ಸುಬ್ರಹ್ಮಣ್ಯಕ್ಕೆ ಹೋಗಬೇಕು

Advt_Headding_Middle
Advt_Headding_Middle

ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿ ಬಿಲ್ ಕಟ್ಟಲು ಗ್ರಾಹಕರು ೪೦ ಕೀ.ಮೀ ದೂರ ತೆರಳಬೇಕಾದ ಪ್ರಸಂಗ ನಡೆದಿದೆ. ಗ್ರಾಹಕರ ಅನುಕೂಲಕ್ಕಾಗಿ ಮಾಡಿದ ಕೆಲಸ ಕೆಲ ಗ್ರಾಮದವರಿಗೆ ಉಪದ್ರವಾಗಿ ಪರಿಣಮಿಸಿದರೆ ಕೆಲವರಿಗೆ ವರವಾಗಿದೆ.
ಹಲವು ವರ್ಷಗಳಿಂದ ಸುಬ್ರಹ್ಮಣ್ಯದಲ್ಲಿ ಮೆಸ್ಕಾಂ ಸಬ್ ಸ್ಟೇಷನ್ ಆಗಬೇಕೆಂಬ ಕೂಗು ಇದ್ದು ಹಲವರ ಪಯತ್ನದಿಂದ ಕಳೆದೊಂದು ವರ್ಷದ ಹಿಂದೆ ಸುಬ್ರಹ್ಮಣ್ಯದಲ್ಲಿ ಮೆಸ್ಕಾಂ ಸಬ್‌ಸ್ಟೇಷನ್ ಕಾಯಾ ಚರಣೆ ಮಾಡಲಾರಂಭಿಸಿತ್ತಾದರೂ ಅಧಿಕಾರಿಗಳ ಕೊರತೆಯಿಂದ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಆರಂಭವಾಗಿರಲಿಲ್ಲ. ತಿಂಗಳ ಹಿಂದೆ ಹೊಸ ಅಸಿಸ್ಟೆಂಟ್ ಇಂಜಿನಿಯರ್ ಕರ್ತವ್ಯಕ್ಕೆ ಹಾಜರಾಗಿರುವ ಕಾರಣ ಕಳೆದ ತಿಂಗಳಿನಿಂದ ಸುಬ್ರಹ್ಮಣ್ಯದ ಮೆಸ್ಕಾಂ ಸಬ್ ಸ್ಟೇಷನ್ ಪೂರ್ಣಪ್ರಮಾಣದಲ್ಲಿ ಕೆಲಸ ಮಾಡಲು ಆರಂಭಿಸಿದೆ. ಇದರೊಂದಿಗೆ ಸುಬ್ರಹ್ಮಣ್ಯ ಸಬ್‌ಸ್ಟೇಷನ್ ವ್ಯಾಪ್ತಿಗೆ ಬರುವ ಗ್ರಾಮಗಳ ವಿದ್ಯುತ್ ಗ್ರಾಹಕರು ತಮ್ಮ ವಿದ್ಯುತ್ ಬಿಲ್‌ನ್ನು ಕೂಡ ಸುಬ್ರಹ್ಮಣ್ಯ ಸಬ್‌ಸ್ಟೇಷನ್ ನಲ್ಲಿಯೇ ಪಾವತಿಸಬೇಕಾಗಿದೆ. ಬಿಲ್‌ನಲ್ಲಿಯೇ ಮೇಲಿನ ಭಾಗದಲ್ಲಿ ಯಾವ ಸಬ್‌ಸ್ಟೇಷನ್ ಬರುತ್ತದೆ ಎಂಬ ಮಾಹಿತಿ ಇದೆ. ಇದರಿಂದ ಕೆಲ ಗ್ರಾಮದವರಿಗೆ ಉಪಕಾರಿಯಾದರೂ ಕೆಲವೊಂದು ಗ್ರಾಮದವರಿಗೆ ತೊಂದರೆಯೆನಿಸಿದೆ. ತಾಲೂಕಿನ ಕೆಲ ಗ್ರಾಮದವರು ಸುಳ್ಯ ಹತ್ತಿರವಿದ್ದರೂ, ನೆಲ್ಲೂರು ಕೆಮ್ರಾಜೆಯಂತಹ ಗ್ರಾಹಕರು ಸುಳ್ಯ ಹತ್ತಿರವಿದ್ದರೂ ೪೦ ಕಿ.ಮೀ ತೆರಳಿ ಸುಬ್ರಹ್ಮಣ್ಯದಲ್ಲಿ ವಿದ್ಯುತ್ ಪಾವತಿಸಬೇಕಾಗಿದೆ. ಸುಬ್ರಹ್ಮಣ್ಯದಲ್ಲಿ ಪಾವತಿಸುವವರು ಬಿಲದ್ವಾರದ ಬಳಿಯಿರುವ ಬಿ.ಎಸ್.ಎನ್.ಎಲ್ ಕಚೇರಿಯ ಒಂದನೇ ಮಹಡಿಯಲ್ಲಿರುವ ಸುಬ್ರಹ್ಮಣ್ಯ ಮೆಸ್ಕಾಂ ಸಬ್ ಸ್ಟೇಷನ್ ಇದ್ದು ಇಲ್ಲಿ ಬೆಳಿಗ್ಗೆ ೧೦ ರಿಂದ ೧.೩೦ ಮಧ್ಯಾಹ್ನ ೨.೩೦ ರಿಂದ ೩.೩೦ ರವರೆಗೆ ವಿದ್ಯುತ್ ಬಿಲ್ ಪಾವತಿಸಬಹುದಾಗಿದೆ. ಗ್ರಾಹಕರ ಅನುಕೂಲಕ್ಕಾಗಿ ಕೆಲವೊಂದು ವ್ಯವಸ್ಥೆಗಳನ್ನು ಮಾಡಲಾಗಿದ್ದು ಕೆಲ ಗ್ರಾಮಗಳಲ್ಲಿ ಆಯ್ದ ಕೆಲ ದಿನಗಳಂದು ಗ್ರಾ.ಪಂ ಕಚೇರಿಗಳ ಬಳಿ ವಿದ್ಯುತ್ ಬಿಲ್ ಪಾವತಿಸುವ ವ್ಯವಸ್ಥೆ ಮಾಡಲಾಗಿದೆ.
ಅಂಚೆ ಕಚೇರಿಯಲ್ಲಿ ಪಾವತಿಸಬಹುದು:
ತಮ್ಮ ಸಮೀಪದ ಅಂಚೆ ಕಚೇರಿಯಲ್ಲಿ ಕೂಡಾ ಬಿಲ್ ಪಾವತಿಸಬಹುದಾಗಿದೆ. ಸುಬ್ರಹ್ಮಣ್ಯಕ್ಕೆ ಬರಬೇಕಾಗಿಲ್ಲ. ಏನಾದರೂ ವಿಚಾರಣೆ ಇದ್ದರೆ ಸುಬ್ರಹ್ಮಣ್ಯಕ್ಕೆ ಬರಬೇಕಾಗುತ್ತದೆ ಎಂದು ಜೂ.ಇಂಜಿನಿಯರ್ ತಿಳಿಸಿದ್ದಾರೆ.

ಗ್ರಾಮಗಳಲ್ಲಿ ಬಿಲ್ ಕಟ್ಟುವ ದಿನಾಂಕ : ಪಂಜದಲ್ಲಿ ೩ ಮತ್ತು೨೦ ಕ್ಕೆ ಹಳೆ ಪಂಚಾಯತ್ ಬಳಿ, ಗುತ್ತಿಗಾರಲ್ಲಿ ೧೨ ಮತ್ತು ೧೮ ಕ್ಕೆ ಸೆಕ್ಷನ್ ಆಫೀಸ್, ಹರಿಹರದಲ್ಲಿ ೧೫ ಕ್ಕೆ ಮತ್ತು ಎಡಮಂಗಲದಲ್ಲಿ ೧೭ಕ್ಕೆ ಗ್ರಾ.ಪಂ ವ್ಯಾಪ್ತಿಯಲ್ಲಿ , ಅಲೆಕ್ಕಾಡಿಯಲ್ಲಿ ೨೭ ಕ್ಕೆ ಅಂಗಡಿಬಳಿ, ಕಲ್ಮಡ್ಕದಲ್ಲಿ ೨೯ ಕ್ಕೆ ಸೊಸೈಟಿ ಬಳಿ ಪಾವತಿಸಬಹುದಾಗಿದೆ. ಸರಕಾರಿ ರಜೆ ಇದ್ದಲ್ಲಿ ಮರುದಿನ ಪಾವತಿಸಬಹುದಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.