Breaking News

ಸುಬ್ರಹ್ಮಣ್ಯ: ಬಡಕುಟುಂಬಕ್ಕೆ ಜೆಡಿಎಸ್‌ನಿಂದ ಶೌಚಾಲಯ ಹಸ್ತಾಂತರ

Advt_Headding_Middle
Advt_Headding_Middle

ಕಳೆದ ಇಪ್ಪತ್ತು ವರ್ಷಗಳಿಂದಲೂ ಅಧಿಕ ಸಮಯಗಳಿಂದ ಶೌಚಾಯಲಯ ಹೊಂದದೆ ಇದ್ದ ಸುಬ್ರಹ್ಮಣ್ಯ ಗ್ರಾಮದ ಅಗ್ರಹಾರ ನಿವಾಸಿ ಪರಿಶಿಷ್ಟ ಜಾತಿಯ ಗುರುವ ಅವರ ಕುಟುಂಬಕ್ಕೆ ಸುಬ್ರಹ್ಮಣ್ಯ ಜೆಡಿಎಸ್ ಕಾರ್ಯಕರ್ತರು ಶೌಚಾಲಯ ಮತ್ತು ಸ್ನಾನದಮನೆ ನಿರ್ಮಿಸಿಕೊಟ್ಟಿದ್ದು ಅದರ ಹಸ್ತಾಂತರ ಕಾರ್ಯಕ್ರಮ ಜ. 7 ರಂದು ನಡೆಯಿತು.


ಜೆಡಿಎಸ್ ಮುಖಂಡರಾದ ಡಾ.ತಿಲಕ್ ಎ.ಎ, ನಾರಾಯಣ ಅಗ್ರಹಾರ, ದಿನೇಶ್ ಎಂ.ಪಿ ಹಾಗೂ ಗುರುವ ಮತ್ತು ಕುಟುಂಬದವರು ಉಪಸ್ಥಿತರಿದ್ದರು. ಗುರುವ ಅವರು ಶೌಚಾಲಯಕ್ಕೆ ಸ್ಥಳಿಯ ಗ್ರಾ.ಪಂ ಅರ್ಜಿ ಸಲ್ಲಿಸಿದ್ದರು. ಶೌಚಾಲಯ ಮತ್ತು ಸ್ನಾನದ ಮನೆ ಜತೆಯಲ್ಲಿ ನೀಡಲು ಅಸಾಧ್ಯ ಎಂದು ಗ್ರಾ.ಪಂ ಸಿಬಂದಿಗಳು ಅರ್ಜಿಯನ್ನು ವಿಲೆವಾರಿ ಮಾಡದೆ ಇರಿಸಿಕೊಂಡಿದ್ದರು. ಶೌಚಾಲಯವಿಲ್ಲದೆ ಕುಟುಂಬ ಸದಸ್ಯರಿಗೆ ಸಮಸ್ಯೆ ಆಗುವುದನ್ನು ಮನಗಂಡ ಕಡಬ ತಾ. ಜೆ ಡಿ ಎಸ್ ಪ್ರಧಾನ ಕಾರ್ಯದರ್ಶಿ ಡಾ.ತಿಲಕರವರು ರೂ.25000
ಮೊತ್ತದಲ್ಲಿ ಉತ್ತಮ ಶೌಚಾಲಯ, ಸ್ನಾನದಮನೆ ನಿರ್ಮಿಸಿಕೊಟ್ಟರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.