Breaking News

ಫೆ. 5- 23 :ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಪಿಲಿಪ್ಪೆ ಬ್ರಹ್ಮಕಲಶೋತ್ಸವ

Advt_Headding_Middle
Advt_Headding_Middle

ಬಂಟ್ವಾಳ ತಾಲೂಕಿನ ಕುಳ ಗ್ರಾಮದ ಪಿಲಿಪ್ಪೆ ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಮತ್ತು ಶ್ರೀ ಮಲರಾಯ ಮೂವರ್ ದೈವಂಗಳ ದೈವಸ್ಥಾನ ಶಿಬರಿಕಲ್ಲ ಮಾಡ ಇದರ ಪುನರ್‌ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಫೆ. 5 ರಿಂದ 23೩ರವರೆಗೆ ನಡೆಯಲಿರುವುದು.

ಬ್ರಹ್ಮಕಲಶೋತ್ಸವದ ಪ್ರಯುಕ್ತ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯದ ಸಂಪೂರ್ಣವಾದ ಚಿತ್ರಣವನ್ನು ದೇವಸ್ಥಾನದ ಸಂಘಟಕರು ಜ. ೬ರಂದು ಸುಳ್ಯದ ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ಸಾಕ್ಷ್ಯಚಿತ್ರ ಪ್ರದರ್ಶಿಸುವ ಮೂಲಕ ಗ್ರಾಮದ ಗ್ರಾಮಸ್ಥರ ಒಗ್ಗೂಡುವಿಕೆಯಲ್ಲಿ ಜೀರ್ಣೋದ್ಧಾರ ಕಾರ್ಯ ನಡೆದು ಬಂದ ಹಾದಿಯನ್ನು ಪ್ರದರ್ಶಿಸಿದರು. ಗ್ರಾಮದಲ್ಲಿರುವ ಸುಮಾರು 1260 ಮನೆಗಳನ್ನು ಭೇಟಿ ಮಾಡಿ ದೇವಸ್ಥಾನದಿಂದ ತೆಗೆದುಕೊಂಡು ಹೋದ ದೀಪದ ಜ್ಯೋತಿಯನ್ನು ಪ್ರತಿ ಮನೆಗಳಲ್ಲಿ ಅರ್ಚಕರು ಬೆಳಗಿ ಮನೆಯ ದೀಪದೊಂದಿಗೆ ವಿಲೀನಗೊಳಿಸಿ ಮತ್ತೆ ಪುನಃ ದೇವಸ್ಥಾನಕ್ಕೆ ದೀಪದ ಜ್ಯೋತಿಯನ್ನು ತಂದು ವಿಲೀನಗೊಳಿಸುವ ಮೂಲಕ ಪ್ರತಿ ಮನೆಯಲ್ಲಿಯೂ ಬೆಳಕು ಬೆಳಗುವಂತಾಗಬೇಕು ಎನ್ನುವ ಸಂಕಲ್ಪದೊಂದಿಗೆ ಪ್ರತಿ ಮನೆಯ ಸದಸ್ಯರು ಜೀರ್ಣೋದ್ಧಾರ ಕಾರ್ಯದಲ್ಲಿ ತೊಡಗಿಸಿಕೊಂಡು ಸುಮಾರು ೩ ಕೋಟಿ ಅಂದಾಜಿನಷ್ಟು ಗ್ರಾಮದ ಜನರಿಂದಲೇ ಧನಸಂಗ್ರಹಿಸಿ ದೇವಸ್ಥಾನದ ನಿರ್ಮಾಣ ಕಾರ್ಯವಾಗಿದೆ. ಇದೀಗ ದೇವಸ್ಥಾನ ಹಾಗೂ ದೈವಸ್ಥಾನದ ಪುನರ್‌ಪ್ರತಿಷ್ಠಾ ಬ್ರಹ್ಮಕಲಶೋತ್ಸವ ತುಳು ಹಾಗೂ ಕನ್ನಡ ನಾಡಿನ ಯತಿವರೇಣ್ಯರ, ಧರ್ಮದರ್ಶಿಗಳ ಹಾಗೂ ಮೈಸೂರು ಮಹಾರಾಜರ ಉಪಸ್ಥಿತಿಯಲ್ಲಿ ವಿಟ್ಲ ಸೀಮೆಯ ರಾಜ ದರ್ಬಾರ್ ನಡೆಯಲಿದೆ. ಪ್ರತಿ ದಿನ ನಡೆಯುವ ಧರ್ಮಸಭೆಯಲ್ಲಿ ತುಳುನಾಡಿನ ಹೆಸರಾಂತ ಅರಸು ಮನೆತನದ ರಾಜರುಗಳು ಅಧ್ಯಕ್ಷತೆ ವಹಿಸಲಿದ್ದಾರೆ. ಲೋಕಕಲ್ಯಾಣಾರ್ಥವಾಗಿ ನಾಡಿನ ವಿಧ್ವಜ್ಜನರಿಂದ ವೇದ ಪಾರಾಯಣಗಳು ಹಾಗೂ ದೈವಜ್ಞರ ಮಾರ್ಗದರ್ಶನದಂತೆ ಹವನ, ವೈದಿಕ ಕಾರ್ಯಕ್ರಮಗಳು ನಡೆಯಲಿರುವುದು. ಬ್ರಹ್ಮಕಲಶೋತ್ಸವದ ಸಂಪೂರ್ಣ ಮಾಹಿತಿಯುಳ್ಳ ಹರಿವಾಣಿ ಎಂಬ ನಾಮದ ಆಮಂತ್ರಣ ಪತ್ರಿಕೆಯನ್ನು ಈಗಾಗಲೇ ಗ್ರಾಮದ ಪ್ರತಿ ಮನೆಗಳಿಗೆ ತಲುಪಿಸಲಾಗಿದೆ ಎಂದು ದೇವಸ್ಥಾನದ ಸಂಘಟಕರು ಈ ಸಂದರ್ಭದಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಸುಳ್ಯ ಚೆನ್ನಕೇಶವ ದೇವಸ್ಥಾನದ ಅನುವಂಶಿಕ ಮೊಕ್ತೇಸರ ಡಾ. ಹರಪ್ರಸಾದ್ ತುದಿಯಡ್ಕ, ತೊಡಿಕಾನ ಮಲ್ಲಿಕಾರ್ಜುನ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ದಿವಾಕರ ರೈ ಪಿ.ಬಿ., ಉಮೇಶ್ ಪಿ.ಕೆ. ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.