Breaking News

ಐವರ್ನಾಡು : ಸ.ಪ.ಪೂ.ಕಾಲೇಜಿನಲ್ಲಿ ವಿಜ್ಞಾನ ಮತ್ತು ಗಣಿತ ಮಾದರಿಗಳ ಪ್ರದರ್ಶನ

Advt_Headding_Middle
Advt_Headding_Middle


ಐವರ್ನಾಡು ಸ.ಪ.ಪೂ.ಕಾಲೇಜಿನಲ್ಲಿ ವಿಜ್ಞಾನ ಮತ್ತು ಗಣಿತ ಮಾದರಿಗಳ ಪ್ರದರ್ಶನ ಜ. ೯ರಂದು ನಡೆಯಿತು. ಗ್ರಾಮದ ಹಿರಿಯರಾದ ಕೃಷ್ಣಪ್ಪ ಗೌಡ ನೆಕ್ರಪ್ಪಾಡಿ ಅವರು ಸ್ಪಿರಿಟ್ ಲ್ಯಾಂಪನ್ನು ಆಸಿಡ್ ಕಡ್ಡಿಯಲ್ಲಿ ಉರಿಸುವ ಮೂಲಕ ಉದ್ಘಾಟಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಶ್ರೀಯುತ ಇಸಾಕ್ ಸರ್ ಹಾಗೂ ಪ್ರೌಢಶಾಲಾ ಹಿರಿಯ ಶಿಕ್ಷಕರಾದ ಸೂಫಿ ಪಿ. ಐ., ಎಸ್.ಡಿ.ಎಂ.ಸಿ ಸದಸ್ಯರಾದ ಲತಾ ಭಾಸ್ಕರ್, ವಿಜ್ಞಾನ ಮತ್ತು ಗಣಿತ ಸಂಘದ ಅಧ್ಯಕ್ಷರಾದ ಕು. ರುಕ್ಸಾನಾ ಹಾಗೂ ಕು. ಪ್ರಜ್ವಲ್ ಸಿ.ವಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಕಾಲೇಜಿನ ಉಪನ್ಯಾಸಕ ವೃಂದ, ಶಿಕ್ಷಕ ವರ್ಗ, ಬೋಧಕೇತರ ವರ್ಗ, ವಿದ್ಯಾರ್ಥಿಗಳು ಹಾಜರಿದ್ದರು. ೯ನೇ ತರಗತಿಯ ಕು. ಲಿಖಿತ್ ಇವರಿಂದ ಮ್ಯಾಜಿಕ್ ಪ್ರದರ್ಶನ ನಡೆಯಿತು. ಎಲ್ಲಾ ವಿದ್ಯಾರ್ಥಿಗಳು ತಮ್ಮ ವಿಶಿಷ್ಟ ಮಾದರಿಗಳಿಂದ ಎಲ್ಲರನ್ನು ಆಕರ್ಷಿಸಿದರು.
ವಿಜ್ಞಾನ ಅಧ್ಯಾಪಕರಾದ ಚಿದಾನಂದ ಕೆ ಇವರು ಕಾರ್ಯಕ್ರಮ ನಿರ್ವಹಿಸಿದರು. ಗಣಿತ ಅಧ್ಯಾಪಕರಾದ ಶ್ರೀ. ನಾರಾಯಣ ಬಿ. ಎಲ್ಲರನ್ನೂ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.