ಪಂಜ : ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಚಂದ್ರಶೇಖರ ಶಾಸ್ತ್ರಿ ಸತತ ೭ ನೇ ಬಾರಿಗೆ ಆಯ್ಕೆ

Advt_Headding_Middle
Advt_Headding_Middle

ಪಂಜ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಸಿ ಚಂದ್ರಶೇಖರ ಶಾಸ್ತ್ರಿ ಯವರು ಸತತ 7 ನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಉಪಾಧ್ಯಕ್ಷರಾಗಿ ದೇವದಾಸ ರೈ ಕೆಬ್ಲಾಡಿ,ನಿರ್ದೇಶಕರಾಗಿ ನಾರಾಯಣ ನಾಯ್ಕ ಚಾಳೆಗುಳಿ, ಚನಿಯಪ್ಪ ಕುಳ್ಳಕೋಡಿ, ಸತೀಶ್ ಬೊಳ್ಳಾಜೆ, ರಾಮಚಂದ್ರ, ಉದಯ ಬಿಡಾರಕಟ್ಟೆ, ನವೀನ್ ಕೆಬ್ಲಾಡಿ, ಯಶೋಧ ಬಿಳಿಮಲೆ, ಸಾವಿತ್ರಿ ಪಾಂಡಿಗದ್ದೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಹಿಂದುಳಿದ ವರ್ಗ’ಎ’ 2ಸ್ಥಾನಕ್ಕೆ ಮತ್ತು ಪ.ಜಾತಿ 1ಸ್ಥಾನಕ್ಕೆ ನಾಮಪತ್ರ ಸಲ್ಲಿಕೆಯಾಗಿಲ್ಲ. ಉಳಿದ 10 ಸ್ಥಾನಗಳಿಗೆ ನಾಮ ಪತ್ರ ಸಲ್ಲಿಕೆಯಾಗಿ ಅವಿರೋಧವಾಗಿ ಆಯ್ಕೆಯಾದರು.ಜ.೯.ರಂದು ಅಧ್ಯಕ್ಷರ ಆಯ್ಕೆ ನಡೆಯಿತು.ಚುನಾವಣಾಧಿಕಾರಿ ಪುರುಷೋತ್ತಮ ಜಿ,ಪಂಜ ಗ್ರಾ.ಪಂ.ಅಧ್ಯಕ್ಷ ಕಾರ್ಯಪ್ಪ ಗೌಡ ಚಿದ್ಗಲ್ಲು, ಸದಸ್ಯ ಜಗಧೀಶ್ ಪುರಿಯ, ಪಂಜ.ಪ್ರಾ.ಕೃ.ಪ.ಸ.ಸಂಘದ ಉಪಾಧ್ಯಕ್ಷ ಲೋಕೇಶ್ ಬರೆಮೇಲು, ಚಿನ್ನಪ್ಪ ಗೌಡ ಚೊಟ್ಟೆಮಜಲು ಮೊದಲಾದವರು ಉಪಸ್ಥಿತರಿದ್ದರು. ಚಂದ್ರಶೇಖರ ಶಾಸ್ತ್ರಿ ಯವರು ಆಡಳಿತ ಅವಧಿ ೩ ವರುಷವಿದ್ದಾಗ ಮೂರು ಬಾರಿ ಮತ್ತು ಆಡಳಿತ ಅವಧಿ 5 ವರುಷವಿದ್ದಾಗ ಮೂರು ಭಾರಿ ಒಟ್ಟು 24 ವರುಷ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ.ಸತತ 7 ನೇ ಬಾರಿಗೆ ಆಯ್ಕೆಯಾಗಿದ್ದಾರೆ. ಪ್ರಸ್ತುತ ಅವರು ಪಂಜ.ಪ್ರಾ.ಕೃ.ಪ.ಸ.ಸಂಘದಲ್ಲೂ ಅಧ್ಯಕ್ಷರಾಗಿ ಸೇವೆ ಗೈಯುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.