Breaking News

ಪಂಜಿಕಲ್ಲು ಕ್ಯಾಂಪ್ಕೋ ಬ್ರಾಂಚಿನಲ್ಲಿ ರಬ್ಬರ್ ಖರೀದಿ- ಕೇಂದ್ರ ಉದ್ಘಾಟನೆ

Advt_Headding_Middle
Advt_Headding_Middle

ದೇಲಂಪಾಡಿ: ದೇಲಂಪಾಡಿ ಪಂಚಾಯತಿನ ಪಂಜಿಕಲ್ಲು ಕ್ಯಾಂಪ್ಕೋ ಬ್ರಾಂಚಿನಲ್ಲಿ ಅಡಿಕೆ ಖರೀದಿಯೊಂದಿಗೆ ರಬ್ಬರ್ ಬೆಳೆಗಾರರ ಅನುಕೂಲಕ್ಕಾಗಿ ರಬ್ಬರ್ ಖರೀದಿ ಯೋಜನೆಯನ್ನು ಶ್ರೀ ಶೈಲ ಎಂಟರ್‌ಪ್ರೈಸಸ್ ಸಂಕೀರ್ಣದ ಮಾಲಕ ಹಿರಿಯ ಕೃಷಿಕ ಪೆರಂಬಾರು ವಿಷ್ಣು ಭಟ್ ದೀಪ ಪ್ರಜ್ವಲನಗೊಳಿಸುವ ಮೂಲಕ ಉದ್ಘಾಟಿಸಿದರು. ಅಡಿಕೆ ಕೃಷಿಕರ ರಬ್ಬರ್ ಕೃಷಿಕರ ಪರವಾಗಿ ದೇಲಂಪಾಡಿ ಸೇವಾ ಸಹಕಾರಿ ಬ್ಯಾಂಕಿನ ಮಾಜಿ ಅಧ್ಯಕ್ಷ ಬೆಳ್ಳಿಪ್ಪಾಡಿ ಸದಾಶಿವ ರೈ ಮಾತನಾಡಿ ಕೃಷಿಕರು ಸದ್ಯ ಅನುಭವಿಸುತ್ತಿರುವ ಸಂಕಷ್ಟಗಳನ್ನು ವಿವರಿಸಿದರು.ವೇದಿಕೆಯಿಂದ ಮಾತಾಡಿದ ಕ್ಯಾಂಪ್ಕೋ ಸಂಸ್ಥೆಯ ಉಪಾಧ್ಯಕ್ಷ ಖಂಡಿಗೆ ಶಂಕರನಾರಾಯಣ ಭಟ್ ಅವರು ಸಂಸ್ಥೆ ಬೆಳೆದು ಬಂದ ದಾರಿ ಕೃಷಿಕರೊಂದಿಗೆ ಇರುವ ಒಡನಾಟ ಹಾಗೂ ಸವಲತ್ತುಗಳ ಬಗ್ಗೆ ವಿವರಿಸಿದರು. ವೇದಿಕೆಯಲ್ಲಿ ಸಂಸ್ಥೆಯ ನಿರ್ದೇಶಕ ಶಿವಕೃಷ್ಣ ಭಟ್ ಉಪಸ್ಥಿತರಿದ್ದರು.ಕ್ಯಾಂಪ್ಕೋ ಸಂಸ್ಥೆಯ ಬದಿಯಡ್ಕ ಪ್ರಾದೇಶಿಕ ಅಧಿಕಾರಿ ಪ್ರಕಾಶ್ ಕುಮಾರ್ ಶೆಟ್ಟಿ ಹಾಗೂ ರಬ್ಬರ್ ವಿಭಾಗದ ಅಧಿಕಾರಿ ರಾಘವೇಂದ್ರ ಅವರು ಸಾಂದರ್ಭಿಕವಾಗಿ ಕಾರ್ಯಕ್ರಮ ನಿರೂಪಿಸಿದರು.ಸಭೆಯಲ್ಲಿ ಕೆ. ಶಿವರಾಮ ಗೌಡ ಮಾಸ್ಟ್ರು, ಮುಡೂರು ಕೃಷ್ಣ ಭಟ್, ಕಜೆ ನಾರಾಯಣ ಭಟ್, ಜಯಪ್ರಕಾಶ್ ಕೆಮನಬಳ್ಳಿ, ರವೀಂದ್ರ ಕುಮಾರ್, ಡಾ| ಹರಿಪ್ರಸಾದ್, ಕೆ. ವಿಶ್ವವಿನೋದ ಬನಾರಿ, ಯಸ್. ಯನ್. ಪ್ರಸಾದ್ ಪೆರುಂಬೂರು, ಸುಬ್ರಮಣಿ ಬೆಳ್ಳಿಪ್ಪಾಡಿ, ಗಣೇಶ ಶರ್ಮ ಬೆಳ್ಳಿಪ್ಪಾಡಿ, ವೈ.ಯಸ್.ಗಣೇಶ್ ಬೆಳ್ಳಿಪ್ಪಾಡಿ, ಹರಿಶ್ಚಂದ್ರ ನಾಯಕ್ ಹೊಳೆಕರೆ ಉಪಸ್ಥಿತರಿದ್ದರು.ಆರಂಭದಲ್ಲಿ ಮೇನೇಜರ್ ಪ್ರವೀಣ ಮಳಿಯಾಲ ಸ್ವಾಗತಿಸಿ, ಸಂತೋಷ್ ಕಂಬಳಿ ವಂದಿಸಿದರು. ಸಂಸ್ಥೆಯ ಹರೀಶ ಸಭಾ ವ್ಯವಸ್ಥೆ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.