ಜ.13 ಮತ್ತು 15: 10ನೇ ವರ್ಷದ `ಸುದ್ದಿ ಸೌಹಾರ್ದ ಟ್ರೋಫಿ’ ಕ್ರಿಕೆಟ್

Advt_Headding_Middle
Advt_Headding_Middle

ಸುದ್ದಿ ಬಿಡುಗಡೆ ಪತ್ರಿಕೆಯ ವತಿಯಿಂದ ಪ್ರತಿ ವರ್ಷ ನಡೆಯುತ್ತಿರುವ ಸುದ್ದಿ ಸೌಹಾರ್ದ ಟ್ರೋಫಿ ಕ್ರಿಕೆಟ್ ಪಂದ್ಯಾಟಕ್ಕೆ ಈ ವರ್ಷ ದಶಮಾನೋತ್ಸವ ವರ್ಷವಾಗಿದ್ದು, ಇದರ ಪ್ರಯುಕ್ತ ಜ.13 ಮತ್ತು ಜ.15ರಂದು ಎರಡು ದಿನ ಕ್ರಿಕೆಟ್ ಪಂದ್ಯಾಟ ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಜರುಗಲಿದೆ.
ಜ.13 ಆದಿತ್ಯವಾರದಂದು ನಡೆಯುವ ಪಂದ್ಯಾಟದಲ್ಲಿ ವರ್ತಕರ ಸಂಘ, ಜೇಸಿ ಸುಳ್ಯ, ಕೆ.ವಿ.ಜಿ.ಡಿ.ಸಿ., ಫೊಟೋಗ್ರಾಫರ್‍ಸ್ ತಂಡ, ತಾ.ಪಂ. ತಂಡ, ಅಂಚೆ ಇಲಾಖೆ, ಸಹಕಾರಿ ತಂಡ, ಸುದ್ದಿ ಬಿಡುಗಡೆ ಪುತ್ತೂರು, ಕಂದಾಯ ಇಲಾಖೆ, ಕಾರ್ಮಿಕರ ತಂಡ, ಕೇಬಲ್ ನೆಟ್‌ವರ್ಕ್ ತಂಡ, ಕೆ.ವಿ.ಜಿ. ಎಂ.ಸಿ., ಗ್ಯಾರೇಜ್/ಶೋರೂಂ ತಂಡ, ರಿಕ್ಷಾ ಚಾಲಕರ ತಂಡಗಳು ಭಾಗವಹಿಸಲಿವೆ.
ಜ.೧೫ರಂದು ನಡೆಯುವ ಪಂದ್ಯಾಟದಲ್ಲಿ ಸುದ್ದಿ ಬಿಡುಗಡೆ ಸುಳ್ಯ, ಜನಪ್ರತಿನಿಧಿಗಳು, ಪತ್ರಕರ್ತರ ತಂಡ, ಹೋಂ ಗಾರ್ಡ್, ಅರಣ್ಯ ಇಲಾಖೆ, ಪೋಲೀಸ್ ತಂಡ, ಮೆಸ್ಕಾಂ ತಂಡ, ವಕೀಲರ ತಂಡ, ದೈಹಿಕ ಶಿಕ್ಷಣ ಶಿಕ್ಷಕರುತಂಡಗಳು ಸೆಣಸಲಿದ್ದು, ತಂಡದ ಪ್ರತಿ ಸದಸ್ಯರು ಸಂಬಂಧಪಟ್ಟ ಸಂಘದ ಗುರುತಿನ ಚೀಟಿಯ ಪ್ರತಿ ಕಡ್ಡಾಯವಾಗಿ ನೀಡತಕ್ಕದ್ದು. ತಪ್ಪಿದಲ್ಲಿ ತಂಡವನ್ನು ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ. ಪಟ್ಟಿಯಲ್ಲಿ ಹೆಸರು ನೀಡಿದವರು ಮಾತ್ರ ಪಂದ್ಯಾಟದಲ್ಲಿ ಆಡತಕ್ಕದ್ದು. ವ್ಯವಸ್ಥಾಪಕರ ಮತ್ತು ನಿರ್ಣಾ ಯಕರ ತೀರ್ಮಾನವೇ ಅಂತಿಮ ತೀರ್ಮಾನವಾಗಿರುತ್ತದೆ. ಫೋನ್: 08257230230, 9880347155, 9845785443

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.