ಬೆಳ್ಳಾರೆ: ತರಕಾರಿ ಅಂಗಡಿಯಲ್ಲಿ ಚೂರಿ ಇರಿತ

Advt_Headding_Middle
Advt_Headding_Middle

ಬೆಳ್ಳಾರೆ ಪೇಟೆಯ ತರಕಾರಿ ಅಂಗಡಿಯಲ್ಲಿ ತರಕಾರಿ ಕೊಳ್ಳಲು ಬಂದ ಬೆಳ್ಳಾರೆ ಸಹಕಾರಿ ಸಂಘದ ಸಿಬ್ಬಂದಿ ವಿಜಯ ಎಂಬವರ ಮೇಲೆ ರಾಮ ಪರವ ಎಂಬವರು ಚೂರಿಯಿಂದ ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ.
ವಿಜಯರವರು ಅಂಗಡಿಗೆ ಬಂದು ಅಂಗಡಿಯಿಂದ ತರಕಾರಿಯನ್ನು ತೆಗೆದುಕೊಳ್ಳುತ್ತಿದ್ದಾಗ ಅಲ್ಲೆ ಅಂಗಡಿಯ ಪಕ್ಕದಲ್ಲಿದ್ದ ರಾಮಪರವ ಎಂಬವರು ತರಕಾರಿಗಳ ಮೇಲೆ ಇಟ್ಟಿದ್ದ ಚೂರಿ ತೆಗೆದು ಹಲ್ಲೆ ನಡೆಸಿದರೆನ್ನಲಾಗಿದೆ.
ತಕ್ಷಣ ವಿಜಯರವರು ಅವರನ್ನು ದೂಡಿದರು.ವಿಷಯ ತಿಳಿದು ಸಾರ್ವಜನಿಕರು ಸೇರಿ ರಾಮಪರವನನ್ನು ಹಿಡಿದು ಪೊಲೀಸರಿಗೆ ಮಾಹಿತಿ ನೀಡಿದರು.ಪೊಲೀಸರು ಸ್ಥಳಕ್ಕೆ ಬಂದು ಹಲ್ಲೆ ನಡೆಸಿದ ರಾಮಪರವನನ್ನು ಠಾಣೆಗೆ ಕರೆದೊಯ್ದರು.ಆತ ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದಾನೆಂದು ಹೇಳಲಾಗುತ್ತಿದೆ.ಘಟನೆಗೆ ಕಾರಣ ಇನ್ನಷ್ಟೆ ತಿಳಿದು ಬರಬೇಕಾಗಿದೆ.ಗಾಯಗೊಂಡ ವಿಜಯರವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.