ಜ.೨೦ರಂದು ಕೊಲ್ಲಮೊಗ್ರದಲ್ಲಿ ಅರೆಬಾಸೆ ಗೌಜಿ ಮತ್ತು ಸಾಂಸ್ಕೃತಿಕ ವೈಭವ

Advt_Headding_Middle
Advt_Headding_Middle

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಮಡಿಕೇರಿ ಇದರ ವತಿಯಿಂದ ಅರೆಭಾಸೆ ಸಾಂಸ್ಕೃತಿಕ ಕಲಾ ಸಂಘ ಕೊಲ್ಲಮೊಗ್ರ ಇದರ ಸಹಕಾರದಿಂದ ಅಕಾಡೆಮಿ ಪ್ರಕಟಿತ ಅರೆಬಾಸೆ ಪುಸ್ತಕಗಳ ಬಿಡುಗಡೆ, ಅರೆಬಾಸೆ ಮತ್ತು ಸಾಂಸ್ಕೃತಿಕ ವೈಭವವು ಜ.೨೦ರಂದು ಕೊಲ್ಲಮೊಗ್ರ ಶ್ರೀ ಮಯೂರ ಕಲಾಮಂದಿರ ಕೊಲ್ಲಮೊಗ್ರದಲ್ಲಿ ನಡೆಯಲಿದೆ ಎಂದು ಅಕಾಡೆಮಿ ಸದಸ್ಯರು ಹಾಗೂ ಕಾರ್ಯಕ್ರಮ ಸಂಚಾಲಕರುಗಳಾದ ಎ.ಕೆ.ಹಿಮಕರ್ ಹಾಗೂ ದಿನೇಶ್ ಹಾಲೆಮಜಲು ಹೇಳಿದರು.
ಜ.೧೧ರಂದು ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಕಾರ್ಯಕ್ರಮದ ವಿವರ ನೀಡಿದ ಅವರು, `’ಸಾಹಿತಿ ಉಮೇಶ್ ಬಿಳಿಮಲೆ ಉದ್ಘಾಟನೆ ನೆರವೇರಿಸಲಿದ್ದು, ಅಕಾಡೆಮಿ ಅಧ್ಯಕ್ಷ ಪಿ.ಸಿ.ಜಯರಾಮ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೊಲ್ಲಮೊಗ್ರ ಗ್ರಾ.ಪಂ. ಅಧ್ಯಕ್ಷೆ ವೀಣಾನಂದ ಬಿಳಿಮಲೆ, ತಾ.ಪಂ. ಸದಸ್ಯ ಉದಯ ಕೊಪ್ಪಡ್ಕ, ಅಕಾಡೆಮಿ ಮಾಜಿ ಸದಸಸ್ಯ ಶಿವರಾಮ ಗೌಡ ಕುಂಞಿಟ್ಟಿ., ಸಾಹಿತಿ ಲಲಿತಾಜ ಮಲ್ಲಾರ, ಹರಿಹರ ಕೊಲ್ಲಮೊಗ್ರ ಸಹಕಾರಿ ಸಂಘದ ಅಧ್ಯಕ್ಷ ದೇವಜನ ಹರ್ಷಕುಮಾರ್, ಮೋಹನ ಗೌಡ ಮಡ್ತಿಲ, ನಿವೃತ್ತ ಶಿಕ್ಷಕ ಗಣಪತಿ ಗೌಡ ಭಾಗವಹಿಸಲಿದ್ದಾರೆ.
ಬಳಿಕ ಅರೆಬಾಸೆ ಸೋಬಾನೆ, ಅರೆಬಾಸೆ ಪದ್ಯ ಹೇಳುವ ಸ್ಪರ್ಧೆ, ಉರು ಗೌಡ್ರ ಹೇಳಿಕೆಗ ಸ್ಪರ್ಧೆಗಳು ನಡೆಯುವುದು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಅಕಾಡೆಮಿ ಅಧ್ಯಕ್ಷ ಪಿ.ಸಿ.ಜಯರಾಮ್ ವಹಿಸಲಿದ್ದು, ನಿವೃತ್ತ ಪ್ರಾಂಶುಪಾಲ ಕೆ.ಆರ್.ಗಂಗಾಧರ್ ಸಮಾರೋಪ ಭಾಷಣ ಮಾಡುವರು.
ಮುಖ್ಯ ಅತಿಥಿಗಳಾಗಿ ಜಿ.ಪಂ. ಸದಸ್ಯೆ ಆಶಾ ತಿಮ್ಮಪ್ಪ, ಅಕಾಡೆಮಿ ಮಾಜಿ ಸದಸ್ಯ ಬಿ.ಸಿ.ವಸಂತ, ಗೌಡರ ಯುವ ಸೇವಾ ಸಮಘದ ಪೂರ್ವಾಧ್ಯಕ್ಷ ದಿನೇಶ್ ಮಡಪ್ಪಾಡಿ, ಧರ್ಮಸ್ಥಳ ಯೋಜನೆಯ ವಲಯ ಮೇಲುಸ್ತುವಾರಿ ಶ್ರೀನಿವಾಸ ಗೌಡ, ಹರಿಹರ ಪಲ್ಲತಡ್ಕ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸತೀಶ್ ಕೂಜುಗೋಡು, ಕೊಲ್ಲಮೊಗ್ರ ಗ್ರಾ.ಪಂ. ಮಾಜಿ ಅಧ್ಯಕ್ಷ ಕೆ.ಪಿ.ಗಿರಿಧರ ಭಾಗವಹಿಸಲಿದ್ದಾರೆ.
ಕೃತಿ ಬಿಡುಗಡೆ
ಉದ್ಘಾಟನಾ ಸಮಾರಂಭದಲ್ಲಿ ಕೃತಿಗಳ ಬಿಡುಗಡೆ ನಡೆಯಲಿದ್ದು ಹಾಸನ ಜಿಲ್ಲೆಯ ಅಬಕಾರಿ ಸಹಾಯಕ ಆಯುಕ್ತ ಕೆ.ಗೋಪಾಲಕೃಷ್ಣ ಗೌಡ ಕಣ್ಕಲ್ ಮಾಡುವರು. ಸಾಹಿತಿ ಕೆ.ಆರ್.ತೇಜಕುಮಾರ್ ಬಡ್ಡಡ್ಕರು ಬರೆದ ಕಾಡ್‌ನ ಮಕ್ಕ, ಎಂ.ಜಿ. ಕಾವೇರಮ್ಮರು ಬರೆದ ಬೊದ್ಕ್, ಕು.ವಿನೋದ್ ಮೂಡಗದ್ದೆಯವರ ನೆನ್ಪುನ ಜೊಂಪೆ ಹಾಗೂ ಅಕಾಡೆಮಿ ಪ್ರಕಟಿತ ಹಿಂಗಾರ ಸಂಚಿಕೆಯ ೮ನೇ ಆವೃತ್ತಿಯ ಬಿಡುಗಡೆ ನಡೆಯಲಿದೆ. ಅಕಾಡೆಮಿ ಸದಸ್ಯ ಎ.ಕೆ. ಹಿಮಕರ ಕೃತಿ ಪರಿಚಯ ಮಾಡಲಿದ್ದಾರೆ.
ಪುಸ್ತಕ ಬಹುಮಾನ : ಅಕಾಡೆಮಿ ವತಿಯಿಂದ ಯೋಗೀಶ ಹೊಸೊಳಿಕೆಯವರ ತಿಂಗೊಳ್ ಬೆಳ್‌ಕ್ ಹಾಗೂ ಸುಧೀರ್ ಏನೆಕಲ್‌ರ ಒಟ್ಟಿಗೆ ಒಳ ಕೃತಿಗೆ ಅಕಾಡೆಮಿ ಪುಸ್ತಕ ಬಹುಮಾನ ನೀಡಿ ಗೌರವಿಸಲಿದೆ.
ಸನ್ಮಾನ : ಸಮಾರೋಪ ಸಮಾರಂಭದಲ್ಲಿ ೧೩ ಮಂದಿ ಸಾಧಕರನ್ನು ಸನ್ಮಾನಿಸಲಾಗುತ್ತದೆ. ನಿವೃತ್ತ ಹಿರಿಯ ಯೋಧ ಪಟೇಲ್ ನಾಗಪ್ಪ ಗೌಡ, ಆರೋಗ್ಯ ಸೇವೆಗಾಗಿ ಡಾ. ಚಂದ್ರಶೇಖರ ಕಿರಿಭಾಗ, ಸಮಾಜ ಸೇವೆಗಾಗಿ ಶಿವರಾಜ್ ಕಟ್ಟ ಹಾಗೂ ಹಮೀದ್ ಇಡ್ನೂರು, ಊರುಕಟ್ಟ್‌ನ ಸೇವೆಗಾಗಿ ಉಮೇಶ್ ಆಚಾರ್ಯ, ಮಣಿಕಂಠಕಟ್ಟ, ಸುರೇಶ್ ಚಾಳೆಪ್ಪಾಡಿ, ಸಂಸ್ಕೃತಿ ಸೇವೆಯಲ್ಲಿ ಕೃಷ್ಣ ಬೆಳ್ಚಪ್ಪಾಡ ಹಾಗೂ ಬೊಳಿಯ ಅಜಲ, ಪೆದ್ದೊಳ್ತಿ ಕೂಸುನ ಆರೈಕೆಗಾಗಿ ಮುತ್ತಮ್ಮ ಕಾಚಿಲ, ಧಾರ್ಮಿಕದಲ್ಲಿ ರಾಜಣ್ಣ ನೆಲ್ಲಿಪುಣಿ, ಶ್ರಮಜೀವಿ ಸೇವೆಗಾಗಿ ಹರ್ಷಕೋನಡ್ಕ, ಸಂಸ್ಕೃತಿ ಸೇವೆಗಾಗಿ ಕಾತ್ಯಾಯಿನಿ ಇವರನ್ನು ಸನ್ಮಾನಿಸಲಾಗುವುದು.
ಪತ್ರಿಕಾಗೋಷ್ಠಿಯಲ್ಲಿ ಅಕಾಡಮಿ ಸದಸ್ಯರಾದ ಕೆ.ಟಿ.ವಿಶ್ವನಾಥ್, ತಿರುಮಲೇಶ್ವರಿ ಜಾಲ್ಸೂರು, ಸುರೇಶ್ ಎಂ.ಎಚ್. ಇದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.