ಕನಕಮಜಲು: ಶ್ರೀ ಆತ್ಮಾರಾಮ ಭಜನಾ ಮಂದಿರದ ವಾರ್ಷಿಕ ಮಹಾಸಭೆ

Advt_Headding_Middle
Advt_Headding_Middle

ಕನಕಮಜಲಿನ ಶ್ರೀ ಆತ್ಮಾರಾಮ ಭಜನಾ ಮಂದಿರದ ವಾರ್ಷಿಕ ಮಹಾಸಭೆಯು ಡಿ.೨೩ರಂದು ಮಂದಿರದ ಅಧ್ಯಕ್ಷ ಜಗನ್ನಾಥ ಕಾಪಿಲ ಅವರ ಅಧ್ಯಕ್ಷತೆಯಲ್ಲಿ ಶ್ರೀ ಆತ್ಮಾರಾಮ ಸಭಾಭವನದಲ್ಲಿ ಜರುಗಿತು.
ಮಂದಿರದ ಕಾರ್ಯದರ್ಶಿ ಜಯಪ್ರಸಾದ್ ಕಾರಿಂಜ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ಈ ಸಂದರ್ಭದಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು. ಗೌರವಾಧ್ಯಕ್ಷರಾಗಿ ಜಗನ್ನಾಥ ಕಾಪಿಲ, ಅಧ್ಯಕ್ಷರಾಗಿ ಹರೀಶ್ ಮೂರ್ಜೆ, ಕಾರ್ಯದರ್ಶಿಯಾಗಿ ಚಂದ್ರಶೇಖರ ನೆಡಿಲು, ಸದಸ್ಯರುಗಳಾಗಿ ಕುಸುಮಾಧರ ಬೊಮ್ಮೆಟ್ಟಿ, ಹೇಮಚಂದ್ರ ಕುತ್ಯಾಳ, ಮನೋಜ್ ಕಲ್ಲೂರಾಯ, ವಿಜಯಕುಮಾರ್ ನರಿಯೂರು, ಅಶೋಕ ಕೊರಂಬಡ್ಕ, ಬಾಬು ಮಳಿ, ವಾಸುದೇವ ಪೆರುಂಬಾರು ಆಯ್ಕೆಯಾದರು.
ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕ ಕೇಪು ಸುಂದರ ಮಾಸ್ತರ್, ಆನಂದ ಗೌಡ ಮಾಣಿಕೋಡಿ, ಲಕ್ಷ್ಮೀನಾರಾಯಣ ಕಜೆಗದ್ದೆ, ಈಶ್ವರ ಕೊರಂಬಡ್ಕ, ಹೇಮಂತ್ ಮಠ, ಗೋಪಾಲಕೃಷ್ಣ ಕುತ್ಯಾಳ ಸೇರಿದಂತೆ ಭಜನಾ ಮಂದಿರದ ಪದಾಧಿಕಾರಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.