ಪಂಜ : ವಾರ್ಷಿಕೋತ್ಸವ – ಸಾಮೂಹಿಕ ಶ್ರೀ ಸತ್ಯದತ್ತ ವೃತ್ತ ಪೂಜೆ- ಮಾನವ ಧರ್ಮದ ಉದ್ದಾರಕ್ಕೆ ಭಗವಂತನ ಅವತಾರ- ಗುರುದೇವಾನಂದ ಸ್ವಾಮೀಜಿ

Advt_Headding_Middle
Advt_Headding_Middle

“ಬದುಕುವುದು ಮತ್ತು ಬೇರೆಯವರನ್ನು ಬದುಕಲು ಬಿಡುವುದು ಮಾನವ ಧರ್ಮ. ಧರ್ಮ ಅರಿವು ಇದ್ದವನಿಗೆ ದ್ವೇಶದ ಭಾವ ಇರದೆ,ಪ್ರೀತಿಯ ಭಾವ ಇರುತ್ತದೆ. ಮಾನವ ಧರ್ಮದ ಉದ್ದಾರಕ್ಕಾಗಿಯೇ ಭಗವಂತನ ಅವತಾರವಾಗಿದೆ?ಎಂದು ಒಡಿಯೂರು ಶ್ರೀ ಗುದರುದೇವದತ್ತ ಸಂಸ್ಥಾನಮ್ ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು ಅವರು ಜ.೭.ರಂದು ಪಂಜ ಶ್ರೀ ಪರಿವಾರ ಪಂಚಲಿಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಜರುಗಿದ ಒಡಿಯೂರು ಶ್ರೀ ಚಾರಿಟೇಬಲ್ ಟ್ರಸ್ಟ್ ,ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್,ಸಂಚಾಲತ ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಐವತ್ತೊಕ್ಲು, ಕೂತ್ಕುಂಜ, ಪಂಬೆತ್ತಾಡಿ ಘಟ ಸಮಿತಿಯ ವಾರ್ಷಿಕೋತ್ಸವ ಹಾಗೂ ಸಾಮೂಹಿಕ ಶ್ರೀ ಸತ್ಯದತ್ತ ವೃತ್ತ ಪೂಜೆ ಪ್ರಯುಕ್ತ ನಡೆದ ಧಾರ್ಮಿಕ ಸಭಾ ಕಾರ್‍ಯಕ್ರಮದಲ್ಲಿ ಆಶೀರ್ವಚಿಸಿದರು. ಮುಖ್ಯ ಅತಿಥಿಗಳಾಗಿ ಪಂಜ ಶ್ರೀ ಪರಿವಾರ ಪಂಚಲಿಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ಗೋಪಾಲಕೃಷ್ಣ ಭಟ್, ಸಂತ ರೀತಮ್ಮನವರ ಚರ್ಚ್‌ನ ಧರ್ಮ ಗುರು ರೇ.ಪಾ.ವಂ ಅನಿಲ್ ರೋಶನ್ ಲೋಬೋ, ಗ್ರಾ.ಪಂ.ಅಧ್ಯಕ್ಷ ಕಾರ್ಯಪ್ಪ ಗೌಡ ಚಿದ್ಗಲ್ಲು, ತಾ.ಪಂ.ಸದಸ್ಯ ಅಬ್ದುಲ್ ಗಫೂರ್, ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ಮಹೇಶ್ ಕುಮಾರ್ ಕರಿಕಳ, ಪಂಜ ಶ್ರೀ ಶಾರದಾಂಬಾ ಭಜನಾ ಮಂಡಳಿ ಪೂರ್ವಾಧ್ಯಕ್ಷ ಮಹಾಲಿಂಗ ಸಂಪ, ಶ್ರೀ ಗ್ರಾಮ ವಿಕಾಸ ಯೋಜನೆಯ ಸುಳ್ಯ ತಾಲೂಕು ಮೇಲ್ವಿಚಾರಕ ಮುರಳಿಧರ,ಹಾಗೂ ಐವತ್ತೊಕ್ಲು ಘಟ ಸಮಿತಿ ಅಧ್ಯಕ್ಷ ಪ್ರೇಮಾನಂದ ಶೆಟ್ಟಿ, ಉಪಾಧ್ಯಕ್ಷ ಜಿನ್ನಪ್ಪ ಅಳ್ಪೆ, ಕಾರ್ಯದರ್ಶಿ ಭವ್ಯ ಬಿ ಕೆ, ಜತೆ ಕಾರ್ಯದರ್ಶಿ ಶಶಿಕಲಾ ಕೆಮ್ಮೂರು, ಸಂಘಟನಾ ಕಾರ್‍ಯದರ್ಶಿ ಬಾಲಕೃಷ್ಣ ಪುಂಡುಕಾಯರ್ , ಕೂತ್ಕುಂಜ ಘಟ ಸಮಿತಿ ಅಧ್ಯಕ್ಷ ವಿಮಲ ನಾಗತೀರ್ಥ, ಉಪಾಧ್ಯಕ್ಷ ಜೀನತ್ ಚೀಮುಳ್ಳು, ಕಾರ್ಯದರ್ಶಿ ನಾಗವೇಣಿ ಹೆಬ್ಬಾರ್‌ಹಿತ್ಲು, ಜತೆ ಕಾರ್ಯದರ್ಶಿ ಸವಿತಾ ಸಂಪ, ಸಂಘಟನಾ ಕಾರ್‍ಯದರ್ಶಿ ರಮೇಶ್ ಹೆಬ್ಬಾರಿತ್ಲು, ಪಂಬೆತ್ತಾಡಿ ಘಟ ಸಮಿತಿ ಅಧ್ಯಕ್ಷ ಜಯಕುಮಾರ್, ಉಪಾಧ್ಯಕ್ಷೆ ಸುಮಿತ್ರ ಜಾಕೆ, ಕಾರ್ಯದರ್ಶಿ ಅಶೋಕ್, ಜತೆ ಕಾರ್ಯದರ್ಶಿ ಬೆಳ್ಯಪ್ಪ ಗೌಡ ಕಲ್ಚಾರು, ಸಂಘಟನಾ ಕಾರ್‍ಯದರ್ಶಿ ಪುರಂದರ ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಮೂವರು ಸಾಧಕರಿಗೆ ಸನ್ಮಾನ ಜರುಗಿತು. ಮಾಜಿ ಸೈನಿಕ ಲಿಂಗಪ್ಪ ಬಳ್ಳಕ, ಹೈನುಗಾರಿಕೆ ಪೂವಮ್ಮ ಭೀಮಗುಳಿ, ಅಡಿಕೆ ಕಟಾವು ಮತ್ತು ಮದ್ದು ಸಂಪಡಣೆ ಬಾಲಕೃಷ್ಣ ಗೌಡ ಪಲ್ಲೋಡಿ ಯವರಿಗೆ ಸನ್ಮಾನ ನಡೆಯಿತು. ಕಾರ್‍ಯಕ್ರಮದಲ್ಲಿ ವಿಮಲ ನಾಗತೀರ್ಥ ಪ್ರಾರ್ಥಿಸಿದರು. ಸವಿತ ಸಂಪ ವರದಿ ವಾಚಿಸಿದರು. ಪ್ರೀತಿ ರೈ ಸ್ವಾಗತಿಸಿದರು. ಜಯಶ್ರೀ ಪಂಬೆತ್ತಾಡಿ, ಧನ್ಯಾ, ರೀತಾ ಜಾಕೆ ಸನ್ಮಾನಿತರನ್ನು ಸಭೆಗೆ ಪರಿಚಾಯಿಸಿದರು. ಪಂಜ ವಲಯ ಸಂಯೋಜಕಿ ಅಮಿತಾ ರೈ ಬಹುಮಾನ ವಿಜೇತರ ಪಟ್ಟಿ ಓದಿದರು.ಪ್ರದೀಪ್ ರೈ ಎಣ್ಮೂರು ನಿರೂಪಿಸಿದರು. ಜಿನ್ನಪ್ಪ ಅಳ್ಪೆ ವಂದಿಸಿದರು.ಮಧ್ಯಾಹ್ನ ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ, ಮಧ್ಯಾಹ್ನದ ಬಳಿಕ ಸಾಂಸ್ಕೃತಿಕ ಕಾರ್‍ಯಕ್ರಮಗಳು ಜರುಗಿತು. ಶ್ರೀ ಒಡಿಯೂರು ಗ್ರಾಮ ವಿಕಾಸ ಯೋಜನೆ ಸುಳ್ಯ ತಾಲೂಕು ಸಿಬ್ಬಂದಿಗಳು, ಯೋಜನೆ ಸದಸ್ಯರು ಮೊದಲಾದವರು ಪಾಲ್ಗೊಂಡಿದ್ದರು.ಸಭಾಭವನ ಒಳಗೆ ಹೂವು ಮತ್ತು ತಳಿರು ತೋರಣದಿಂದ ಶೃಂಗಾರ ಮಾಡಲಾಗುತ್ತು.ಸಭಾಭನಕ್ಕೆ ಪ್ರವೇಶಿಸುವಲ್ಲಿ ತಳಿರು ತೋರಣದಿಂದ ಕಮನುಗಳನ್ನು ನಿರ್ಮಿಸಿ ಶೃಂಗರಿಸಲಾಗಿತ್ತು,
*ಯಾರು ತನ್ನ ಧರ್ಮದ ಬಗ್ಗೆ ಅರಿತು ಕೊಳ್ಳುತ್ತಾನೆ. ಆತನಿಗೆ ಬೇರೆ ಧರ್ಮದ ಬಗ್ಗೆ ಗೌರವ,ಅಭಿಮಾನವಿರುತ್ತದೆ.- ಪಾ. ಅನಿಲ್ ರೋಶನ್ ಲೋಬೋ
*ಸ್ವಾತಂತ್ರ ಪೂರ್ವದಲ್ಲಿಯೇ ಗ್ರಾಮ ವಿಕಾಸನದ ಕನಸು ಗಾಂಧೀಜಿ ಕಂಡಿದ್ದರು. ಒಡಿಯೂರು ಸ್ವಾಮಿಗಳ ಈ ಯೋಜನೆಯಿಂದ ಅದು ಪರಿಪೂರ್ಣವಾಗಲು ಗುರಿ ಮುಟ್ಟಲು ಸಾಧ್ಯ-ಕಾರ್ಯಪ್ಪ ಗೌಡ ಚಿದ್ಗಲ್ಲು
*ಒಡಿಯೂರು ಸ್ವಾಮಿಗಳಿಂದ ಇಂದು ಸಮಾಜಕ್ಕೆ ಉತ್ತಮ ಕೊಡುಗೆಗಳು ಬಹಳಷ್ಟು ಅರ್ಪಣೆಯಾಗಿದೆ. ಸ್ವಾಮಿಗಳು ಎಂದರೇ ಹೀಗರ ಬೇಕು-ಮಹೇಶ್ ಕುಮಾರ್ ಕರಿಕಳ
*ಎಲ್ಲಾ ಧರ್ಮಗಳ ಸರಾಂಶ ಪರಸ್ಪರ ಪ್ರೀಯಿಂದ ಬಾಳಿ ಮತ್ತು ಕಷ್ಟದಲ್ಲಿರುವವರಿಗೆ ಸಹಾಯ ಮಾಡಿ.: ಅಬ್ದುಲ್ ಗಫೂರ್ ಕಲ್ಮಡ್ಕ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.