Breaking News

ಜ. 5: ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯ ವಾರ್ಷಿಕೋತ್ಸವ

Advt_Headding_Middle
Advt_Headding_Middle

ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯ ವಾರ್ಷಿಕೋತ್ಸವವು ಜ. 5ರಂದು ಕುರುಂಜಿ ಜಾನಕಿ ವೆಂಕಟ್ರಮಣ ಸಭಾಂಗಣದಲ್ಲಿ ನಡೆಯಿತು.
ಕೆವಿಜಿ ಕಾನೂನು ಮಹಾ ವಿದ್ಯಾಲಯದ ಸ್ಥಾಪಕ ಪ್ರಾಚಾರ್ಯರಾದ ಪಡ್ಡಂಬೈಲು ವೆಂಕಟರಮಣ ಗೌಡ ಅವರು ಸಭಾಧ್ಯಕ್ಷತೆ ವಹಿಸಿದ್ದರು.
ಕೆವಿಜಿ ಮೆಡಿಕಲ್ ಕಾಲೇಜಿನ ಸ್ತ್ರೀ ರೋಗ ವಿಭಾಗದ ಮುಖ್ಯಸ್ಥೆ ಡಾ. ಗೀತಾ ದೊಪ್ಪ ಮುಖ್ಯ ಅತಿಥಿ ಗಳಾಗಿ ಭಾಗವಹಿಸಿ, ಮಕ್ಕಳನ್ನು ಆರೋಗ್ಯಕರ ನಾಗರಿಕರನ್ನಾಗಿ ಮಾಡುವಲ್ಲಿ ಶಿಕ್ಷಕರ ಪಾತ್ರದಷ್ಟೇ ಜವಾಬ್ದಾರಿ ಹೆತ್ತವರದ್ದು ಆಗಿರುತ್ತದೆ. ಮಕ್ಕಳು ಕೇವಲ ಅಂಕ ಗಳಿಕೆಯ ಯಂತ್ರಗಳಲ್ಲ ಅವರು ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡು ಬೆಳೆಯಲು ಎಲ್ಲರೂ ಶ್ರಮಿಸಬೇಕು. ಸದೃಢ ಸಮಾಜದ ಪ್ರಜೆಗಳನ್ನು ರೂಪಿಸುವ ಗುರುತರವಾದ ಹೊಣೆ ಹೆತ್ತವರದ್ದು ಹಾಗೂ ಶಿಕ್ಷಕರದ್ದೂ ಆಗಿದೆ. ಆ ನಿಟ್ಟಿನಲ್ಲಿ ನಾವೆಲ್ಲರೂ ಕಾರ್ಯ ಪ್ರವೃತ್ತರಾಗೋಣ ಎಂದು ತಿಳಿಸಿದರು.

ಸಂಸ್ಥೆಯ ಉಪ ಪ್ರಾಚಾರ್ಯೆ ಶಿಲ್ಪಾ ಬಿದ್ದಪ್ಪ, ಕೆವಿಜಿ ಅಮರ ಜ್ಯೋತಿ ಪ.ಪೂ ಕಾಲೇಜಿನ ಪ್ರಾಂಶುಪಾಲೆ ಡಾ. ಯಶೋಧ ರಾಮಚಂದ್ರ, ಕೆವಿಜಿ ದಂತ ಮಹಾವಿದ್ಯಾಲಯದ ಹಿರಿಯ ಕಾರ್ಯ ನಿರ್ವಹಣಾಧಿಕಾರಿ ಎನ್.ಜಿ. ರಾಮಚಂದ್ರ , ಕೆವಿಜಿ ಐಟಿಐನ ಪ್ರಾಚಾರ್ಯ ಚಿದಾನಂದ ಬಾಳಿಲ, ಕೆವಿಜಿ ಆಂಗ್ಲಮಾಧ್ಯಮ ಪ್ರೌಢ ಶಾಲಾ ಮುಖ್ಯೋಪಾಧ್ಯಯಿನಿ ಶಾಂತ ಬಿ. ಬೈಪಾಡಿತ್ತಾಯ, ವಿದ್ಯಾರ್ಥಿ ಪೋಷಕರು ಬೋಧಕ ಬೋಧಕೇತರ ವರ್ಗದವರು ಉಪಸ್ಥಿತರಿದ್ದರು.
ಬಳಿಕ ಚಿಣ್ಣರಿಂದ ಮನರಂಜನೆ ಕಾರ್ಯ ಕ್ರಮಗಳು, ವಿದ್ಯಾರ್ಥಿಗಳಿಂದ ಬಗೆಬಗೆಯ ಸಾಂಸ್ಕೃತಿಕ ವಿನೋಧವಳಿಗಳು ನಡೆಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.