ಬಾಳುಗೋಡು ಶ್ರೀ ಉಳ್ಳಾಕುಲು ಶ್ರೀ ಶಿರಾಡಿ ದೈವಗಳ ಪುನಃ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ

Advt_Headding_Middle
Advt_Headding_Middle


ಬಾಳುಗೋಡು ಗ್ರಾಮದ ಗ್ರಾಮ ದೈವಗಳಾದ ಪನ್ನೆ ಶ್ರೀ ಉಳ್ಳಾಕುಲು ಪರಿವಾರ ದೈವಗಳ ಹಾಗೂ ಬೆಟ್ಟುಮಕ್ಕಿ ಶ್ರೀ ಶಿರಾಡಿ ಪರಿವಾರ ದೈವಗಳ ಪುನಃ ಪ್ರತಿಷ್ಠೆ ಮತ್ತು ಬ್ರಹ್ಮಕಲಶಾಭಿಷೇಕ ಕಾರ್ಯಕ್ರಮಗಳು ಜ.೮ ರಿಂದ ಜ.೧೦ ರವರೆಗೆ ನಡೆಯಿತು.

ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದ ಪ್ರಧಾನ ಅರ್ಚಕರಾದ ವೇದಮೂರ್ತಿ ಬ್ರಹ್ಮ ಶ್ರೀ ಸೀತರಾಮ ಯಡಪಡಿತ್ತಾಯ ಮತ್ತು ದೇರೆಬೈಲು ತಂತ್ರಿ ರಾಘವೇಂದ್ರ ಪ್ರಸಾದ ಶಾಸ್ತ್ರಿ ಮುಕ್ಕೂರು ಇವರ ನೇತೃತ್ವದಲ್ಲಿ ನಡೆಯಿತು.

ಜ.೮ ರಂದು ಪನ್ನೆ ಶ್ರೀ ಉಳ್ಳಾಕುಲು ಸಾನಿಧ್ಯದಲ್ಲಿ ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹವಾಚನ, ಪ್ರಾಸಾದ ಶುದ್ಧಿ ರಾಕ್ಷೆಘ್ನ ಹೋಮ, ವಾಸ್ತು ಹೋಮ, ವಾಸ್ತು ಪೂಜಾ ಬಲಿ, ಪ್ರಕಾರ ಬಲಿ, ಪ್ರಸಾದ ವಿತರಣೆ ನಡೆದು ಜ.೯ ರಂದು ಮಹಾಗಣಪತಿ ಹೋಮ, ಬ್ರಹ್ಮಕಲಶ ಪೂಜೆ, ಸಾನಿಧ್ಯ ಪೂಜೆ ನಡೆದು ಉಳ್ಳಾಕುಲು ಹಾಗೂ ಪರಿವಾರ ದೈವಗಳ ಪುನಃ ಪ್ರತಿಷ್ಠೆ ಮತ್ತು ಬ್ರಹ್ಮ ಕಶಾಭಿಷೇಕ ನಡೆಯಿತು. ಬಳಿಕ ತಂಬಿಲ, ಮಹಾಪೂಜೆ , ಪ್ರಸಾದ ವಿತರಣೆ ನಡೆದು ಅನ್ನಸಂತರ್ಪಣೆ ನಡೆಯಿತು. ಜ.9 ರ ಸಂಜೆ  ಬೆಟ್ಟುಮಕ್ಕಿ ಶ್ರೀ ಶಿರಾಡಿ ಹಾಗೂ ಪರಿವಾರ ಸಾನಿಧ್ಯದಲ್ಲಿ ದೇವತಾ ಪ್ರಾರ್ಥನೆ , ಸ್ವಸ್ತಿ ಪುಣ್ಯಾಹವಾಚನ, ಪ್ರಸಾದ ಶುದ್ದಿ, ರಾಕ್ಷೆಘ್ನ ಹೋಮ, ವಾಸ್ತು ಹೋಮ, ವಾಸ್ತು ಪೂಜಾ ಬಲಿ, ಪ್ರಕಾರ ಬಲಿ, ಪ್ರಸಾದ ವಿತರಣೆ ನಡೆದು ಜ.೧೦ ರಂದು ಮಹಾಗಣಪತಿ ಹೋಮ, ಬ್ರಹ್ಮಕಲಶ ಪೂಜೆ, ಸಾನಿಧ್ಯ ಪೂಜೆ ನಡೆದು ಶ್ರೀ ಶಿರಾಡಿ ದೈವ ಹಾಗೂ ಪರಿವಾರ ದೈವಗಳ ಪುನಃ ಪ್ರತಿಷ್ಠೆ, ಬ್ರಹ್ಮಕಶಾಭಿಷೇಕ ನಡೆಯಿತು. ಬಳಿಕ ತಂಬಿಲ, ಮಹಾಪೂಜೆ, ಪ್ರಸಾದ ವಿತರಣೆ ನಡೆದು ಅನ್ನಸಂತರ್ಪಣೆ ನಡೆಯಿತು. ಕಾರ್ಯಕ್ರಮ ಯಶಸ್ವಿಗೆ ಆಡಳಿತ ಸಮಿತಿಯ ಗೌರವಾಧ್ಯಕ್ಷರು, ಅಧ್ಯಕ್ಷರು, ಪದಾಧಿಕಾರಿಗಳು, ದೈವದ ಪೂಜಾರಿಗಳು, ಉಪಸಮಿತಿಯ ಸಂಚಾಲಕರು ಹಾಗೂ ಸದಸ್ಯರುಗಳು ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.