Breaking News

ಫೆ.3ರಂದು ಸುಳ್ಯ ತಾಲೂಕು ಬಂಟರ ಸಮಾವೇಶ

Advt_Headding_Middle
Advt_Headding_Middle

ಬಂಟರ ಯಾನೆ ನಾಡವರ ಸಂಘ ಸುಳ್ಯ ಇದರ ಅರಂತೋಡು ವಲಯ ಹಾಗೂ ಸುಳು ನಗರ ವಲಯ ಇದರ ಆಶ್ರಯದಲ್ಲಿ ಸುಳ್ಯ ತಾಲೂಕು ಬಂಟರ ಸಮಾವೇಶವು ಫೆ.೩ರಂದು ಕೇರ್ಪಳ ರಸ್ತೆಯಲ್ಲಿರುವ ಬಂಟರ ಸಂಘದ ನಿವೇಶನದಲ್ಲಿ ನಡೆಯಲಿದೆ.
ಸುಳ್ಯ ತಾಲೂಕು ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ಎನ್.ಜಯಪ್ರಕಾಶ್ ರೈ ಪತ್ರಿಕಾಗೋಷ್ಟಿಯಲ್ಲಿ ಈ ಕುರಿತು ಮಾಹಿತಿ ನೀಡಿದರು.
ಒಡಿಯೂರು ಗುರುದೇವದತ್ತ ಸಂಸ್ಥಾನದ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಆಶೀವರ್ಚನ ನೀಡಲಿದ್ದು, ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಉದ್ಘಾಟನೆ ನೆರವೇರಿಸುವರು. ಮಾತೃ ಸಂಘದ ತಾಲೂಕು ಸಂಚಾಲಕ ಪಿ.ಬಿ. ದಿವಾಕರ ರೈ ಅಧ್ಯಕ್ಷತೆ ವಹಿಸಲಿದ್ದು, ಸಂಸದ ನಳಿನ್ ಕುಮಾರ್ ಕಟೀಲ್ ಯುವ ಪುರಸ್ಕಾರ ನೆರವೇರಿಸಲಿರುವರು.
ಶಕುಂತಳಾ ಶೆಟ್ಟಿ. ಜಯರಾಜ್ ರೈ, ರಾಮಕೃಷ್ಣ ಶೆಟ್ಟಿ ಕಟ್ಟಬೀಡು, ಡಾ. ಮಾಲತಿ ಶೆಟ್ಟಿ ಮಾಣೂರು, ದಯಾಕರ ಆಳ್ವ ಮುಖ್ಯ ಅತಿಥಿಗಳಾಗಿರುವರು. ಸಮಾರಂಭದಲ್ಲಿ ವಿಖ್ಯಾತ್ ರೈ, ಅನನ್ಯ ಹರೀಶ್ ಶೆಟ್ಟಿ, ಸಾತ್ವಿಕ್ ರೈ, ಸುಭಾಶ್ ರೈ ಕಂಡಿಕಟ್ಟ, ಅಂಕಿತ ರೈ ರೆಂಜಾಳ ಇವರಿಗೆ ಯುವ ಪುರಸ್ಕಾರ ನೀಡಲಾಗುವುದು.
ಬಳಿಕ ಬಂಟರ ಸಂಘದ ಮಹಾಸಭೆ ನಡೆಯಲಿದ್ದು ನಂತರ ಅಂತರ್‌ವಲಯ ಸಾಂಸ್ಕೃತಿಕ ಸ್ಪರ್ಧೆಗಳು ನೆರವೇರಲಿದೆ.
ಸಂಜೆ ನಡೆಯುವ ಸಮಾರೋಪ ಹಾಗೂ ಸನ್ಮಾನ ಸಮಾರಂಭದಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ ಸಾಧಕರನ್ನು ಸನ್ಮಾನಿಸುವರು. ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ಉಪೇಂದ್ರ ಶೆಟ್ಟಿ ಯೋಧರಿಗೆ ಸನ್ಮಾನ ನೆರವೇರಿಸುವರು. ಐಕಳ ಹರೀಶ್ ಶೆಟ್ಟಿ, ಸೀತರಾಮ ರೈ ಸವಣೂರು, ಕೇನ್ಯ ರವೀಂದ್ರನಾಥ ಶೆಟ್ಟಿ, ಸತೀಶ್ ಶೆಟ್ಟಿ ಪಟ್ಲ, ರಾಜಗೋಪಾಲ ರೈ, ದೇವಿಚರಣ್ ಶೆಟ್ಟಿ, ದೀಪಕ್ ಶೆಟ್ಟಿ ಮುಖ್ಯ ಅತಿಥಿಗಳಾಗಿರುವರು.
ವಿವಿಧ ಕ್ಷೇತ್ರಗಳ ಸಾಧಕರಾದ ಕಮಲಾಕ್ಷಿ ವಿ ಶೆಟ್ಟಿ, ವಸಂತ ಶೆಟ್ಟಿ ಕಾಯರ್ತೋಡಿ, ಪ್ರಭಾಕರ ರೈ ಪಿ.ಬಿ, ಮಂಜುನಾಥ ರೈ ಕುಂಚಾಡಿ, ಕರ್ನಲ್ ಶರತ್ ಭಂಡಾರಿ, ರಾಧಾಕೃಷ್ಣ ರೈ ಆಲೆಟ್ಟಿ, ರಾಧಾಕೃಷ್ಣ ರೈ ಬೂಡು, ರಮಾನಂದ ರೈ, ರಘುನಾಥ್ ರೈ ಕಾಯರ್ತೋಡಿ, ಜಗನ್ಮೋಹನ ರೈ ರೆಂಜಾಳ, ಸುಧೀಶ್ ಶೆಟ್ಟಿ, ಮೊರಂಗಲ್ಲು ಗುರುಪ್ರಸಾದ್ ರೈ, ಸಚಿತ್ ಕುಮಾರ್ ರೈ ಬಾಲೆಂಬಿ, ಸಾಂತಪ್ಪ ರೈ ಸೂಂತೋಡು, ಉಮೇಶ್ ಶೆಟ್ಟಿ ಉಬರಡ್ಕ, ಪಿ.ಬಿ. ಹರಿಪ್ರಸಾದ್ ರೈ ಅವರನ್ನು ಸನ್ಮಾನಿಸಲಾಗುವುದು.
ರಾತ್ರಿ ಪಟ್ಲ ಸತೀಶ್ ಶೆಟ್ಟಿ ಸಾರಥ್ಯದಲ್ಲಿ ಯಕ್ಷಗಾನ ನಾಟ್ಯ ವೈಭವ ನಡೆಯಲಿದೆ.
ಬಂಟ ಸಮವೇಶಕ್ಕೆ ಪೂರ್ವಭಾವಿಯಾಗಿ ಜ.೨೦ರಂದು ಸುಳ್ಯ ತಾಲೂಕು ಬಂಟರ ಕ್ರೀಡಾಕೂಟವು ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನಡೆಯಲಿದೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಸಂಘದ ಕಾರ್ಯದರ್ಶಿ ಬಿ.ಸುಭಾಶ್ಚಂದ್ರ ರೈ, ಕೋಶಾಧಿಕಾರಿ ಎಸ್.ಗಂಗಾಧರ ರೈ, ಮಹಿಳಾ ಸಂಘದ ಅಧ್ಯಕ್ಷೆ ಪ್ರಫುಲ್ಲಾ ಪಧ್ಮನಾಭ ರೈ, ಸುಳ್ಯ ವಲಯ ಅಧ್ಯಕ್ಷ ಪಿ.ಶಶಿಧರ ಶೆಟ್ಟಿ, ಅರಂತೋಡು ವಲಯ ಅಧ್ಯಕ್ಷ ಗಿರೀಶ್ ರೈ ಕುತ್ತಮೊಟ್ಟೆ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.