ಕೋವಿ ಪರವಾನಿಗೆಗೆ ಹೆಚ್ಚುವರಿ ಶುಲ್ಕ ಆದೇಶ ಹಿಂಪಡೆಯಲು ರಾಜ್ಯ ರೈತ ಸಂಘ ಒತ್ತಾಯ

Advt_Headding_Middle
Advt_Headding_Middle

“ದ.ಕ. ಹಾಗೂ ಉಡುಪಿ ಜಿಲ್ಲೆ ಮೊದಲಾದ ಕಡೆಗಳಲ್ಲಿ ಗುಡ್ಡಗಾಡು ಪ್ರದೇಶವಾದ್ದರಿಂದ ರೈತರ ಬೆಳೆ ರಕ್ಷಣೆ ಹಾಗೂ ಆತ್ಮರಕ್ಷಣೆಗೆ ಕೋವಿಯ ಪರವಾನಿಗೆಯನ್ನು ಸರಕಾರ ರೈತರಿಗೆ ನೀಡಿದೆ. ಈ ಕೋವಿ ಪರವಾನಿಗೆಯನ್ನು ಮೂರು ವರ್ಷಕ್ಕೊಮ್ಮೆ ನವೀಕರಿಸಬೇಕಾಗಿದ್ದು ರೂ.೯೦ ಇದ್ದ ಶುಲ್ಕವನ್ನು ೨೦೧೬ ಜುಲೈಯಿಂದ ರೂ.೧೫೦೦ ಕ್ಕೆ ಏರಿಸಿ ಸರಕಾರ ರೈತರನ್ನು ಸಂಕಷ್ಟಕ್ಕೀಡು ಮಾಡಿದೆ. ಆದ್ದರಿಂದ ಹೆಚ್ಚು ಮಾಡಲಾಗಿರುವ ಆದೇಶವನ್ನು ಮತ್ತೆ ಹಿಂಪಡೆಯಬೇಕೆಂದು ತಾಲೂಕು ರೈತ ಸಂಘ ಹಾಗೂ ಈ ಹಸಿರು ಸೇನೆ ಒತ್ತಾಯಿಸಿದೆ.
ಜ.೧೨ರಂದು ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಮಾತನಾಡಿ ರೈತ ಸಂಘ ಹಾಗೂ ಹಸಿರುಸೇನೆಯ ಲೋಲಜಾಕ್ಷ ಭೂತಕಲ್ಲುರವರು ಈ ವಿಷಯ ಹೇಳಿದರು.
“ಹಿಂದೆ ೫ ವರ್ಷಕ್ಕೆ ಒಂದೆರಡು ಬಾರಿ ಚುನಾವಣೆ ನಡೆಯುತ್ತಿತ್ತು. ಆ ಒಂದು ತಿಂಗಳು ಕೋವಿ ಯನ್ನು ಪೋಲೀಸ್ ಠಾಣೆಯಲ್ಲಿ ಅಡವಿಡಬೇಕಾಗಿತ್ತು. ಈ ವರ್ಷದಲ್ಲಿ ಮೂರ್‍ನಾಲ್ಕು ಬೇರೆ ಬೇರೆ ಚುನಾವಣೆ ಬರುತ್ತಿರುವುದರಿಂದ ಕೋವಿ ಅಡವಿಡುವುದು ಸಮಸ್ಯೆಯಾಗಿದೆ. ರಯತರ ಬೆಳೆ ರಕ್ಷಣೆಗೆಂದು ಇರುವ ಕೋವಿ ನಮ್ಮ ಅಗತ್ಯಕ್ಕೆ ಸಿಗುತ್ತಿಲ್ಲ. ಚುನಾವಣೆಯಲ್ಲಿ ರೈತರು ಅಹಿತಕರ ಘಟನೆಯಲ್ಲಿ ತೊಡಗುವುದಿಲ್ಲವಾದ್ದರಿಂದ ಕೋವಿಯನ್ನು ಅಡವಿಡುವ ಅವಶ್ಯಕತೆ ಇಲ್ಲ ಎಂದು ಅವರು ಹೇಳಿದರು.
ಸಹಕಾರಿ ಬ್ಯಾಂಕ್ ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ರೈತರು ಸಾಲ ಪಡೆಯುವಾಗ ಸಬ್ ರಿಜಿಸ್ಟ್ರಾರ್ ಆಫೀಸ್‌ನಲ್ಲಿ ಮಾಡಿಸಿ ಆರ್‌ಟಿಸಿ ಗೆ ಲೋನ್ ಎಂಟ್ರಿ ಮಾಡ್ತಾರೆ. ಇದಕ್ಕಾಗಿ ಬ್ಯಾಂಕ್‌ನವರು ರೂ.೨೫೦೦ ರಿಂದ ರೂ.೩೫೦೦ ಶುಲ್ಕ ವಿಧಿಸುತ್ತಿದ್ದಾರೆ. ಸಾಲ ತೀರಿದ ನಂತರ ಈ ಸಾಲದ ಎಂಟ್ರಿ ಆರ್‌ಟಿಸಿಯಲ್ಲಿ ಹಾಗೇ ಉಳಿಯುತ್ತದೆ. ಹಳೆಯ ಸಾಲದ ಎಂಟ್ರಿ ಸೇರಿ ಒಂದು ಆರ್.ಟಿ.ಸಿ.ಗೆ ಹಲವು ಪ್ರತಿಗಳಾಗುತ್ತದೆ ಇದನ್ನು ನಾವು ತೆಗೆಸಬೇಕಾದರೆ ಮತ್ತೆ ೧೭೦೦ ಶುಲ್ಕವನ್ನು ಕೇಳುತ್ತಾರೆ. ಇದು ರೈತರಿಗೆ ಹೊರೆಯಾಗಿದೆ. ಈ ಸಮಸ್ಯೆ ಸರಿಯಾಗಬೇಕು ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರದೀಪ್ ಕುಮಾರ್ ಕೆ.ಎಲ್., ಪುರುಷೋತ್ತಮ ನಂಗಾರು, ನಂದರಾಜ ಸಂಕೇಶ, ದಿವಾಕರ ಪೈ, ಜೀವನ್ ನಾರ್ಕೊಡು, ಸತ್ಯಪ್ರಸಾದ್ ಚಿಮ್ಟಿಕಲ್, ಸೆಬಾಸ್ಟಿನ್ ಕ್ರಾಸ್ತಾ, ಸುಳ್ಯಕೋಡಿ ಮಾಧವ ಗೌಡರು ಇದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.