Breaking News

ಸುಳ್ಯ: ಎನ್ನೆಂಸಿಯ ಯುವ ರೆಡ್‌ಕ್ರಾಸ್ ಘಟಕಕ್ಕೆ ಮಂಗಳೂರು ವಿ ವಿ ಮಟ್ಟದ ಅತ್ಯುತ್ತಮ ಘಟಕ ಪ್ರಶಸ್ತಿ 2019

Advt_Headding_Middle
Advt_Headding_Middle

ಸುಳ್ಯದ ನೆಹರೂ ಮೆಮೋರಿಯ್ ಕಾಲೇಜಿನ ಯುವ ರೆಡ್‌ಕ್ರಾಸ್ ಘಟಕಕ್ಕೆ2018-19ನೇ ಸಾಲಿನ ಮಂಗಳೂರು ವಿಶ್ವ ವಿದ್ಯಾಲಯ ಮಟ್ಟದ ಅತ್ಯುತ್ತಮ ಘಟಕ ಪ್ರಶಸ್ತಿ 2019 ಒಲಿದು ಬಂದಿದೆ. ಇದುವರೆಗೆ ಸುಮಾರು ೧೩೫ಕ್ಕೂ ಅಧಿಕ ಉಪಯುಕ್ತ ಕಾರ್ಯಕ್ರಮಗಳನ್ನು ಆಯೋಜಿಸಿರುವ ರೆಡ್‌ಕ್ರಾಸ್ ಘಟಕದ 2018-19ನೇ ಸಾಲಿನ ಕಾರ್ಯವೈಖರಿಯನ್ನು ಗಮನಿಸಿ ಈ ಪ್ರಶಸ್ತಿಯನ್ನು ನೀಡಲಾಗಿದ್ದು, ಜನವರಿ ೧೨ರಂದು ಮಂಗಳೂರಿನ ಪುರಭವನದಲ್ಲಿ ವಿವೇಕಾನಂದ ಜಯಂತಿ ಪ್ರಯುಕ್ತ ನಡೆದ ರಾಷ್ಟ್ರೀಯ ಯುವ ದಿನಾಚರಣೆಯಂದು ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಹಿಂದೆ ರಾಜ್ಯ ರೆಡ್ ಕ್ರಾಸ್ ಶಾಖೆಯಿಂದ ದ.ಕ.ಜಿಲ್ಲೆಯ ಲೀಡ್ ಕಾಲೇಜು ಎಂದು ಗುರುತಿಸಲ್ಪಟ್ಟ ಕಾಲೇಜಿನ ರೆಡ್ ಕ್ರಾಸ್ ಘಟಕ ಇದೀಗ ಮಂಗಳೂರು ವಿಶ್ವ ವಿದ್ಯಾಲಯದಿಂದ ಪ್ರಥಮ ಬಾರಿಗೆ ಘೋಷಿಸಲ್ಪಟ್ಟ ಈ ಪ್ರಶಸ್ತಿಗೆ ಭಾಜನವಾಗಿದೆ. ಕಾಲೇಜಿನ ಕನ್ನಡ ಉಪನ್ಯಾಸಕಿ, ಯುವ ರೆಡ್‌ಕ್ರಾಸ್ ಘಟಕದ ನೇತೃತ್ವವನ್ನು ವಹಿಸಿಕೊಂಡು ಮುನ್ನಡೆಸುತ್ತಿರುವ ಕಾರ್ಯಕ್ರಮಾಧಿಕಾರಿ ಡಾ. ಅನುರಾಧಾ ಕುರುಂಜಿಯವರು ಜಿಲ್ಲಾಧಿಕಾರಿ ಶಶಿಕಾಂತ್ ಶೆಂಥಿಲ್, ವಿ.ವಿ ಉಪಕುಲಪತಿ ಈಶ್ವರ್ ಇವರಿಂದ ಅತ್ಯುತ್ತಮ ಘಟಕ ಪ್ರಶಸ್ತಿ 2019ನ್ನು ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪೋಲೀಸ್ ಅಧೀಕ್ಷಕರಾದ ಬಿ ಎಂ ಲಕ್ಷ್ಮೀಪ್ರಸಾದ್ ಐಪಿಎಸ್, ವಿ ವಿ ರಿಜಿಸ್ಟ್ರಾರ್ ಎ ಎಂ ಖಾನ್, ಕ್ರೀಡಾಪಟು ಸಹನಾ ಕುಮಾರಿ, ಜಿಲ್ಲಾ ರೆಡ್‌ಕ್ರಾಸ್ ಚಯರ್‌ಮನ್ ಶಾಂತರಾಮ ಶೆಟ್ಟಿ, ಕಾರ್ಯದರ್ಶಿ ಪ್ರಭಾಕರ ಶರ್ಮ, ವಿ.ವಿ ರೆಡ್‌ಕ್ರಾಸ್ ಸಂಯೋಜನಾಧಿಕಾರಿ ವಿನೀತಾ ರೈ, ಜಿಲ್ಲಾ ಸಂಯೋಜಕ ಸಚೇತ್ ಸುವರ್ಣ, ವೃಷಭರಾಜ್ ಜೈನ್ ಮೊದಲಾದವರು ಉಪಸ್ಥಿತರಿದ್ದರು. ಪ್ರಶಸ್ತಿ ವಿಜೇತ ಘಟಕವನ್ನು ಕಾಲೇಜಿನ ಆಡಳಿತ ಮಂಡಳಿ ಹಾಗೂ ಪ್ರಾಂಶುಪಾಲರು ಅಭಿನಂದಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.