ಸುಳ್ಯ ಗುರು ರಾಘವೇಂದ್ರ ಮಠದಲ್ಲಿ ಭಜನಾ ಸ್ಪರ್ಧೆ-ಪ್ರಥಮ ಮೂಡುಶೆಡ್ಡೆ ಮಂಗಳೂರು, ದ್ವೀತಿಯ ಆಲೆಟ್ಟಿ

Advt_Headding_Middle
Advt_Headding_Middle

ಸುಳ್ಯ ಚೆನ್ನಕೇಶವ ದೇವರ ಜಾತ್ರೆಯ ಅಂಗವಾಗಿ ಜಳಕದ ಸಂದರ್ಭದಲ್ಲಿ ಜ.೧೨ ರಂದು ಗುರು ರಾಘವೇಂದ್ರ ಮಠದ ವಠಾರದಲ್ಲಿ ಭಜನಾ ಸ್ಪರ್ಧೆಯು ನಡೆಯಿತು. ಸ್ಪರ್ಧಾ ಕಾರ್ಯಕ್ರಮವನ್ನು ಗುರು ರಾಘವೇಂದ್ರ ಮಠ ನಿರ್ಮಾಣ ಸಮಿತಿ ಅಧ್ಯಕ್ಷ ಡಾ.ಕೆ.ವಿ.ಚಿದಾನಂದರವರು ಉಧ್ಘಾಟಿಸಿ “ಹಿಂದೂ ಸಂಸ್ಕೃತಿ ಉಳಿದು ಬೆಳೆಯ ಬೇಕಾದರೆ ಇಂತಹ ಭಜನಾ ಕಾರ್ಯಕ್ರಮಗಳನ್ನು ಆಯೋಜಿಸಿ ಯುವ ಪೀಳಿಗೆ ತೊಡಗಿಸಿಕೊಳ್ಳುವಂತಾಗಬೇಕು.ಇದರಿಂದ ಧರ್ಮ ಜಾಗೃತಿ ಮೂಡುವುದು ಎಂದು ಹೇಳಿದರು. ಬೃಂದಾವನ ಸೇವಾ ಟ್ರಸ್ಟ್ ಅಧ್ಯಕ್ಷ ಶ್ರೀಕೃಷ್ಣ ಸೋಮಯಾಗಿ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಕೃಷ್ಣ ನಾವಡ ಸುಳ್ಯ, ಶಾರದಾ ಬಾಯಿ ಉಪಸ್ಥಿತರಿದ್ದರು. ಭಜನಾ ಸ್ಪರ್ಧಾ ಸಮಿತಿ ಅಧ್ಯಕ್ಷ ಪ್ರಭಾಕರ ನಾಯರ್ ಸ್ವಾಗತಿಸಿದರು.
ಕಾರ್ಯಕ್ರಮ ಸಂಘಟಕರಾದ ಪ್ರಕಾಶ್ ಮೂಡಿತ್ತಾಯರವರು ಪ್ರಾಸ್ತಾವಿಕ ಮಾತನಾಡಿದರು. ಕು.ವಿಭಾಶ್ರೀ ಪ್ರಾರ್ಥಿಸಿದರು. ಸಮಿತಿ ಸದಸ್ಯ ಮುರಳೀಕೃಷ್ಣ ವಂದಿಸಿದರು. ಸಮಿತಿ ಸದಸ್ಯರಾದ ಶಿವಪ್ರಸಾದ್ ಆಲೆಟ್ಟಿ, ಕೇಶವ ಮಾಸ್ತರ್ ಕಾರ್ಯಕ್ರಮ ನಿರೂಪಿಸಿದರು.ಭಜನಾ ಸ್ಪರ್ಧೆಯು ಕುಳಿತುಕೊಂಡು ಮತ್ತು ಕುಣಿತ ದೊಂದಿಗೆ ಎರಡು ವಿಭಾಗದಲ್ಲಿ ನಡೆಯಿತು. ಒಟ್ಟು ೧೨ ತಂಡಗಳು ಭಾಗವಹಿದ್ದವು. ಪ್ರಥಮ ಬಹುಮಾನ ಶ್ರೀ ದೇವಿ ಭಜನಾ ಮಂದಿರ ಮೂಡುಶೆಡ್ಡೆ,ಮಂಗಳೂರು, ದ್ವಿತೀಯ ಶ್ರೀ ಸದಾಶಿವ ಭಜನಾ ಸಂಘ ಆಲೆಟ್ಟಿ, ತೃತೀಯ ಶ್ರೀ ಪ್ರಸನ್ನಾಂಜನೇಯ ಭಜನಾ ಮಂಡಳಿ ಅಂಜನಾದ್ರಿ, ಕುಣಿತ ಭಜನೆಯಲ್ಲಿ ಪ್ರಥಮ ಶ್ರೀ ದೇವಿ ಭಜನಾ ಮಂದಿರ ಮೂಡುಶೆಡ್ಡೆ ಮಂಗಳೂರು, ದ್ವಿತೀಯ ಶ್ರೀ ಗುರು ರಾಘವೇಂದ್ರ ಭಜನಾ ಮಂಡಳಿ ಸುಳ್ಯ, ತೃತೀಯ ಶ್ರೀ ಮೂಕಾಂಬಿಕಾ ಭಜನಾ ಮಂದಿರ ಅರಂಬೂರು,ಹಾಗೂ ಭಾಗವಹಿಸಿದ ಎಲ್ಲಾ ಮಂಡಳಿಗಳಿಗೆ ನಗದು ಮತ್ತು ಪ್ರಶಸ್ತಿ ಫಲಕ ನೀಡಿ ಪ್ರೋತ್ಸಾಹಿಸಲಾಯಿತು. ರಾತ್ರಿ ನಡೆದ ಸಮಾರಂಭದಲ್ಲಿ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸಹಾಯಕ ಕಾರ್ಯ ನಿರ್ವಹಣಾಧಿಕಾರಿ ಚಂದ್ರಶೇಖರ ಪೇರಾಲು ಬಹುಮಾನ ವಿತರಿಸಿದರು. ವೇದಿಕೆಯಲ್ಲಿ ನಿರ್ಣಾಯಕರಾದ ರಮೇಶ್ ಕಲ್ಮಾಡಿ, ನರೇಶ್ ಕುಮಾರ್ ಸಸಿಹಿತ್ಲು, ಜಯಪ್ರಕಾಶ್ ಬಿಳಿನೆಲೆ ಉಪಸ್ಥಿತರಿದ್ದರು.ಬಳಿಕ ರಾಯರ ಬಳಗ ಮಕ್ಕಳ ಮೇಳ ಸುಳ್ಯ ಇವರಿಂದ ಜಾಂಬವತಿ ಕಲ್ಯಾಣ ಯಕ್ಷಗಾನ ಪ್ರದರ್ಶನಗೊಂಡಿತು.ಆಗಮಿಸಿದ ಸರ್ವರಿಗೂ ಸಂಜೆ ಉಪಹಾರ ರಾತ್ರಿ ಅನ್ನ ಸಂತರ್ಪಣೆ ನಡೆಯಿತು.ಶ್ರೀ ದೇವರ ಜಳಕದ ಸಂದರ್ಭದಲ್ಲಿ ವಿಶೇಷ ಸುಡುಮದ್ದು ಪ್ರದರ್ಶನ ಆಕರ್ಷಕವಾಗಿತ್ತು. ಸಮಿತಿಯ ಸದಸ್ಯರು ಮತ್ತು ಟ್ರಸ್ಟಿನ ಸದಸ್ಯರು ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.