Breaking News

ಜ.19ರಂದು ಸುಳ್ಯದಲ್ಲಿ ವಿಜೃಂಭಿಸಲಿದೆ ರಾಜ್ಯ ಮಟ್ಟದ ಹಾಫ್ ಮ್ಯಾರಥಾನ್

Advt_Headding_Middle
Advt_Headding_Middle

ಕರ್ನಾಟಕ ಅಥ್ಲೆಟಿಕ್ಸ್ ಅಸೋಸಿಯೇಶನ್, ದಕ್ಷಿಣ ಕನ್ನಡ ಅಥ್ಲೆಟಿಕ್ಸ್ ಅಸೋಸಿಯೇಶನ್ ಮತ್ತು ಕೆ.ವಿ.ಜಿ ಸಮೂಹ ಸಂಸ್ಥೆಗಳ ಸಹಕಾರದೊಂದಿಗೆ ಸುಳ್ಯ ತಾಲೂಕು ಅಥ್ಲೆಟಿಕ್ಸ್ ಅಸೋಸಿಯೇಶನ್ ವತಿಯಿಂದ ರಾಜ್ಯಮಟ್ಟದ ಹಾಫ್ ಮ್ಯಾರಥಾನ್ ಜ.19ರಂದು ಸುಳ್ಯದ ಕೆ.ವಿ.ಜಿ ಕ್ರೀಡಾಂಗಣದಲ್ಲಿ ನಡೆಯಲಿದೆ.


ಸುಳ್ಯ ತಾಲೂಕು ಅಥ್ಲೆಟಿಕ್ಸ್ ಅಸೋಸಿಯೇಶನ್ ಕಾರ್ಯದರ್ಶಿ ಸುಬ್ರಹ್ಮಣ್ಯ ಕೆ.ಎಂ. ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದರು. ಪುರುಷರಿಗೆ 21 ಕಿ.ಮೀ, ಮಹಿಳೆಯರಿಗೆ 10 ಕಿ.ಮೀ., ಮಾಸ್ಟರ‍್ಸ್ ವಿಭಾಗದಲ್ಲಿ 45 ವರ್ಷಕ್ಕಿಂತ ಮೇಲ್ಪಟ್ಟ ಪುರುಷರಿಗೆ 4 ಕಿ.ಮೀ, 35 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಿಗೆ 3 ಕಿ.ಮೀ, 16 ವರ್ಷ ವಿಭಾಗದಲ್ಲಿ ಹುಡುಗರಿಗೆ 4 ಕಿ.ಮೀ, ಮತ್ತು ಹುಡುಗಿಯರಿಗೆ 3 ಕಿ.ಮೀ ಮ್ಯಾರಥಾನ್ ಓಟ ನಡೆಯಲಿದೆ. ಈಗಾಗಲೇ ಸುಮಾರು 2,200 ಸ್ಪರ್ಧಿಗಳು ಹೆಸರು ನೋಂದಾಯಿಸಿದ್ದಾರೆ ಎಂದು ಅವರು ತಿಳಿಸಿದರು.
ಸ್ಪರ್ಧೆಯನ್ನು ಕರ್ನಾಟಕ ರಾಜ್ಯ ಅಥ್ಲೆಟಿಕ್ಸ್ ಅಸೋಸಿಯೇಶನ್ ಅಧ್ಯಕ್ಷ ಎನ್.ಮುತ್ತಪ್ಪ ರೈ ಮತ್ತು ಖ್ಯಾತ ಪಾಪ್ ಗಾಯಕ ರಘು ದೀಕ್ಷಿತ್ ಉದ್ಘಾಟಿಸಲಿದ್ದಾರೆ. ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ಅಧ್ಯಕ್ಷತೆ ವಹಿಸಲಿದ್ದು, ಅಕಾಡೆಮಿಯ ಪ್ರಧಾನ ಕಾರ್ಯದರ್ಶಿ ಡಾ.ರೇಣುಕಾಪ್ರಸಾದ್ ಕೆ.ವಿ., ಸಂಸದ ನಳಿನ್‌ಕುಮಾರ್ ಕಟೀಲ್, ಶಾಸಕ ಎಸ್.ಅಂಗಾರ, ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಭಾರತೀಯ ಕ್ರೀಡಾ ಪ್ರಾಧಿಕಾರದ ಅಥ್ಲೆಟಿಕ್ಸ್ ತರಬೇತುದಾರ ಕುರಿಯನ್ ಮ್ಯಾಥ್ಯು, ಜಿ.ಎಲ್.ಆಚಾರ‍್ಯ ಜ್ಯುವೆಲ್ಲರ‍್ಸ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಬಲರಾಮ್ ಆಚಾರ‍್ಯ, ಅರಂತೋಡು ಪಾಪ್ಯುಲರ್ ಎಜ್ಯುಕೇಷನ್ ಸೊಸೈಟಿಯ ಅಧ್ಯಕ್ಷ ಪಿ.ಬಿ.ದಿವಾಕರ ರೈ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸ್ಪರ್ಧೆಯ ನಂತರ ನಡೆಯುವ ಸಮಾರೋಪ ಸಮಾರಂಭದಲ್ಲಿ ಡಾ.ಕೆ.ವಿ. ಚಿದಾನಂದ ಅಧ್ಯಕ್ಷತೆ ವಹಿಸಲಿದ್ದು, ರಾಜ್ಯ ಯುವಜನ ಸೇವಾ ಮತ್ತು ಕ್ರೀಡಾ ಸಚಿವ ರಹೀಂ ಖಾನ್, ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ನಿರ್ದೇಶಕ ಅಕ್ಷಯ್ ಕೆ.ಸಿ, ಅಥ್ಲೆಟಿಕ್ಸ್ ಫೆಡೆರೇಷನ್ ಆಫ್ ಇಂಡಿಯಾ ಎಕ್ಸಿಕ್ಯೂಟಿವ್ ಮೆಂಬರ್ ಚಂದ್ರಶೇಖರ್ ರೈ, ದ.ಕ ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಶನ್ ಅಧ್ಯಕ್ಷ ಮಂಜುನಾಥ್ ಭಂಡಾರಿ, ಜಿಲ್ಲಾ ಪಂಚಾಯತ್ ಸದಸ್ಯ ಹರೀಶ್ ಕಂಜಿಪಿಲಿ, ನಗರ ಪಂಚಾಯತ್ ಅಧ್ಯಕ್ಷೆ ಶೀಲಾವತಿ ಮಾಧವ, ಫಾಸ್ಟ್ ಟ್ರಾಕ್ ಮ್ಯಾನೇಜಿಂಗ್ ಡೈರೆಕ್ಟರ್ ಮಹಮ್ಮದ್ ಶಾಫಿ, ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ದಿಲೀಪ್ ಬಾಬ್ಲುಬೆಟ್ಟು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಜಿಲ್ಲಾ ನಿವೃತ್ತ ದೈಹಿಕ ಶಿಕ್ಷಣ ಅಧೀಕ್ಷಕ ಕುಶಾಲಪ್ಪ ಗೌಡ ನಾಳ ಅವರನ್ನು ಸನ್ಮಾನಿಸಲಾಗುವುದು.
ಗ್ರಾಮೀಣ ಪ್ರದೇಶದಲ್ಲಿ ರಾಜ್ಯಮಟ್ಟದ ಹಾಫ್ ಮ್ಯಾರಥಾನ್ ನಡೆಯುತ್ತಿರುವುದು ಒಂದು ದಾಖಲೆಯಾಗಿದೆ. ಈಗಾಗಲೇ ಪೇರಾಲು ಪರಿಸರದಲ್ಲಿ ಸುಮಾರು 20ರಷ್ಟು ಕ್ರೀಡಾಪಟುಗಳು ರಾಜ್ಯದ ವಿವಿದೆಡೆಗಳಲ್ಲಿ ಮ್ಯಾರಥಾನ್ ಓಟದಲ್ಲಿ ಭಾಗಿಯಾಗುತ್ತಿರುವುದು ತಾಲೂಕಿಗೆ ಹೆಮ್ಮೆಯ ವಿಷಯ ಎಂದು ಹೇಳಿದ ಸುಬ್ರಹ್ಮಣ್ಯ ಕೆ.ಎಂ. ರವರು, ಅಥ್ಲೆಟಿಕ್ಸ್ ಅಸೋಸಿಯೇಶನ್ ವತಿಯಿಂದ ಮುಂದಿನ ದಿನಗಳಲ್ಲಿ ಕ್ರೀಡಾ ಪಟುಗಳಿಗೆ ತರಬೇತಿ ಶಿಬಿರಗಳನ್ನು ಏರ್ಪಡಿಸುವ ಯೋಚನೆ ಇದೆ ಎಂದರು.
ಅಥ್ಲೆಟಿಕ್ ಅಸೋಸಿಯೇಶನ್ ಗ್ರಾಮೀಣ ಪ್ರದೇಶದ ಕ್ರೀಡಾ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಫ್ಲಾಟ್‌ಫಾರಂ ಇದ್ದ ಹಾಗೆ, ಯುವ ಕ್ರೀಡಾ ಪಟುಗಳಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ಈ ಮ್ಯಾರಾಥಾನ್ ಸ್ಪರ್ಧೆಯು ನಡೆಯುತ್ತಿದ್ದು ಕ್ರೀಡಾಪಟುಗಳು ಛಲ ಮತ್ತು ಆತ್ಮಸ್ಥೈರ್ಯದಿಂದ ಭಾಗವಹಿಸಬೇಕು. ಇದನ್ನು ಪ್ರತಿ ವರ್ಷವೂ ಹಮ್ಮಿಕೊಳ್ಳುವ ಯೋಚನೆ ಇದೆ ಎಂದು ಹೇಳಿದ ಅಸೋಸಿಯೇಶನ್ ಉಪಾಧ್ಯಕ್ಷ ಅಕ್ಷಯ್ ಕೆ.ಸಿ., ಅಸೋಸಿಯೇಶನ್‌ಗೆ ವೆಬ್‌ಸೈಟ್ ಕೂಡಾ ತಯಾರಾಗಿದ್ದು ಮುಂದಿನ ದಿನಗಳಲ್ಲಿ ಲೋಕಾರ್ಪಣೆಗೊಳಿಸಲಾಗುವುದು ಎಂದರು.
ಮ್ಯಾರಥಾನ್ ಓಟವು ಕೆ.ವಿ.ಜಿ ಕ್ರೀಡಾಂಗಣದಿಂದ, ಜ್ಯೋತಿ ವೃತ್ತ ,ಪೈಚಾರು ,ಸೋಣಂಗೇರಿ, ಜಾಲ್ಸೂರು ಹಾದಿಯಲ್ಲಿ ಕ್ರಮಿಸಿ ಹಿಂತಿರುಗಲಿದೆ ಎಂದು ಅಸೋಸಿಯೇಶನ್ ಗೌರವಾಧ್ಯಕ್ಷ ತುಕಾರಾಮ್ ಏನೆಕಲ್ಲು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅಸೋಸಿಯೇಶನ್ ಅಧ್ಯಕ್ಷ ಮಾಲಪ್ಪ ಗೌಡ ಕೆ., ಉಪಾಧ್ಯಕ್ಷ ಹರೀಶ್ ಕಂಜಿಪಿಲಿ, ಕೋಶಾಧಿಕಾರಿ ವಸಂತ ಎ.ಸಿ., ಜೊತೆಕಾರ್ಯದರ್ಶಿ ಹರಿಪ್ರಕಾಶ್ ಅಡ್ಕಾರ್, ನಿರ್ದೇಶಕರಾದ ಶರತ್ ಅಡ್ಕಾರ್, ವೀರನಾಥ್, ಮಂಜುನಾಥ್ ಎ.ಯು., ಪದ್ಮಶ್ರೀ ಬಿ.ಸಿ. ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.