ಅರಂತೋಡು ಶ್ರೀ ದುರ್ಗಾಮಾತಾ ಭಜನಾ ಮಂದಿರದ ಅಮೃತ ಮಹೋತ್ಸವದ ಉದ್ಘಾಟನೆ

Advt_Headding_Middle
Advt_Headding_Middle

 

ಭಕ್ತಿಮಾರ್ಗದ ಭಜನೆಯ ಮೂಲಕ ಜಾಗೃತ ಸಮಾಜದ ನಿರ್ಮಾಣ – ಮೋಹನದಾಸ್ ಸ್ವಾಮೀಜಿ
ಸಮಾಜದಲ್ಲಿ ಅಶಾಂತಿಯಿಂದ ಶಾಂತಿಯ ವಾತಾವರಣ ನಿರ್ಮಾಣವಾಗಬೇಕಾದರೆ ಭಕ್ತಿಯ ಮೂಲಕ ಭಜನಾ ನಾಮ ಸಂಕೀರ್ತನೆ ಮಾಡಬೇಕು. ಧರ್ಮದ ಸಂಸ್ಕೃತಿ, ಸಂಸ್ಕಾರ ಉಳಿಯಬೇಕಾದರೆ ಇಂದಿನ ಯುವ ಪೀಳಿಗೆಯು ಭಜನೆಯಲ್ಲಿ ತೊಡಗಿಸಿಕೊಳ್ಳುವಂತಾಗಬೇಕು. ಸ್ವಚ್ಚ ಮನಸ್ಸು, ಸ್ವಚ್ಚ ಭಕ್ತಿಯ ಭಾವನೆಯಿಂದ ದೇವರ ನಾಮ ಸಂಕೀರ್ತನೆಯನ್ನು ಭಜಿಸಿದಾಗ ನೆಮ್ಮದಿಯ ಬದುಕು ಕಾಣಲು ಸಾಧ್ಯ.  ಇದರಿಂದ ನಮ್ಮ ಆಚಾರ ವಿಚಾರಗಳು ಉಳಿಯಬಹುದು. ಭಕ್ತಿ ಮಾರ್ಗದ ಭಜನೆಯಿಂದ ಸುಧೃಢ ಜಾಗೃತ ಸಮಾಜ ನಿರ್ಮಾಣವಾಗಬಹುದು ಎಂದು ಶ್ರೀ ಧಾಮ ಮಾಣಿಲ ಕ್ಷೇತ್ರದ ಮೋಹನದಾಸ್ ಪರಮಹಂಸ ಸ್ವಾಮೀಜಿ ಯವರು ಹೇಳಿದರು.
  ಜ. ೧೬ ರಂದು ಅರಂತೋಡು ಶ್ರೀ ದುರ್ಗಾಮಾತಾ ಭಜನಾ ಮಂದಿರದ ಅಮೃತ ಮಹೋತ್ಸವದ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಸಿ ಜಗತ್ತಿನಲ್ಲಿ ಮೊದಲ ಸ್ಥಾನ ತಾಯಿಗಿದೆ. ಅಮ್ಮನಿಂದಲೇ ಪ್ರತಿಯೊಂದು ಮಗುವಿಗ ಭೋಧನೆ ಪಾಠ ಪ್ರಾರಂಭವಾಗುವುದು. ನಮ್ಮ ಸಂಸ್ಕೃತಿ, ಆಚಾರ, ವಿಚಾರ, ಶಿಷ್ಟಚಾರಗಳು, ತತ್ವಗಳ ಬಗ್ಗೆ ಮಕ್ಕಳಿಗೆ ತಿಳಿಸುವ ಕರ್ತವ್ಯ ತಾಯಿಗಿದೆ. ಮಕ್ಕಳನ್ನು ಭಜನೆಯಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೆಪಣೆ ನೀಡಿ ಸುಸಂಸ್ಕೃತರನ್ನಾಗಿ ಸಮಾಜದ ಶಕ್ತಿಯನ್ನಾಗಿ ರೂಪುಗೊಳಿಸುವಂತೆ ಮಾಡಬೇಕು. ಭಜನೆಯಲ್ಲಿ ಅಗಾಧವಾದ ಶಕ್ತಿ ಅಡಗಿದೆ. ಭಜನೆಯ ತರಂಗಗಳು, ಯಾಗ ಹವನದ ಧೂಮಗಳು ಪಸರಿಸಿದ ಪರಿಸರದಲ್ಲಿ ನಿರ್ಮಲವಾದ ವಾತಾವರಣ ಸೃಷ್ಟಿಯಾಗುವುದು ಎಂದು ಸ್ವಾಮೀಜಿಯವರು ಆಶೀರ್ವಚನ ನೀಡಿದರು.
ಅಧ್ಯಕ್ಷತೆಯನ್ನು ಭಜನಾ ಮಂದಿರದ ಅಧ್ಯಕ್ಷ ಯು.ಯಂ. ನಾರಾಯಣ ಗೌಡ ರವರು ವಹಿಸಿದ್ದರು. ಅತಿಥಿಗಳಾಗಿ ಅರಂತೋಡು ಕ್ಷೇತ್ರದ ತಾ.ಪಂ.ಸದಸ್ಯೆ ಪುಷ್ಪಾಮೇದಪ್ಪ, ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಜೀ.ಸ.ಅಧ್ಯಕ್ಷ ಪಿ.ಬಿ.ದಿವಾಕರ ರೈ, ಸುಳ್ಯ ತಾಲೂಕು ಭಜನಾ ಪರಿಷತ್ ಅಧ್ಯಕ್ಷ ಶಿವಪ್ರಸಾದ್ ಆಲೆಟ್ಟಿ, ಅರಂತೋಡು ಗ್ರಾ.ಪಂ. ಉಪಾಧ್ಯಕ್ಷ ಶಿವಾನಂದ ಕುಕ್ಕುಂಬಳ, ಪಂ. ಅ. ಅಧಿಕಾರಿ ಜಯಪ್ರಕಾಶ್ ಎಂ. ಆರ್, ಅರಂತೋಡು ಭಜರಂಗದಳ ಘಟಕದ ಆಧ್ಯಕ್ಷ ರವಿಚಂದ್ರ ಆಚಾರ್ಯ, ಭಜನಾ ಮಂದಿರದ ಕಾರ್ಯದರ್ಶಿ ತೀರ್ಥರಾಮ ಅಡ್ಕಬಳೆ ಉಪಸ್ಥಿತರಿದ್ದರು. ಭ. ಮಂ. ನಿರ್ದೇಶಕ ಪುಂಡರೀಕ ಕೆ.ಯಂ. ಪ್ರಾರ್ಥಿಸಿದರು. ಕಾರ್ಯದರ್ಶಿ ತೀರ್ಥರಾಮ ಅಡ್ಕಬಳೆಯವರು ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿದರು. ಉಪಾಧ್ಯಕ್ಷ ಮಹೇಶ್ ಪೂಜಾರಿಮನೆ ವಂದಿಸಿದರು.ಸಂಚಾಲಕ ಭವಾನಿಶಂಕರ ಅಡ್ತಲೆ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಮೊದಲು ಅರಂತೋಡು ಎನ್.ಎಂ.ಪಿ.ಯು.ಕಾಲೇಜಿನ ಬಳಿಯ ಮಹಾದ್ವಾರದಿಂದ  ಸ್ವಾಮೀಜಿಯವರನ್ನು ಚೆಂಡೆ ವಾದ್ಯ ಘೊಷ ಹಾಗೂ ಮಹಿಳೆಯರು ಪೂರ್ಣಕುಂಭದೊಂದಿಗೆ ಭಜನಾ ಮಂದಿರದವರೆಗೆ ಮೆರವಣಿಗೆಯ ಮೂಲಕ ಸ್ವಾಗತಿಸಿದರು. ಭಜನಾ ಮಂದಿರದಲ್ಲಿ ಸಂಜೆ ಶ್ರೀ ದುರ್ಗಾ ಪೂಜೆ ಮತ್ತು ಹೂವಿನ ಪೂಜೆ ನಡದು ಪ್ರಸಾದ ವಿತರಣೆಯಾಯಿತು. ಆಗಮಿಸಿದ ಸರ್ವರಿಗೂ ರಾತ್ರಿ ಅನ್ನ ಸಂತರ್ಪಣೆ ವಿತರಣೆಯಾಯಿತು. ಭಜನಾ ಮಂದಿರದ ಪದಾಧಿಕಾರಿಗಳು, ಸದಸ್ಯರು ಹಾಗೂ ಅಮೃತ ಮಹೋತ್ಸವ ಸಮಿತಿಯ ಸಂಚಾಲಕರು, ಸದಸ್ಯರು ಸಹಕರಿಸಿದರು.   
  

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.