Breaking News

ಬಳ್ಪ ಗ್ರಾಮೋತ್ಸವ ಪೂರ್ವಭಾವಿ ಸಭೆ

Advt_Headding_Middle
Advt_Headding_Middle

ಸಂಸದರ ಆದರ್ಶ ಗ್ರಾಮವಾದ ಬಳ್ಪದಲ್ಲಿ ಜ. 25 ಮತ್ತು 26 ರಂದು ಬಳ್ಪ ಗ್ರಾಮೋತ್ಸವ 2019 ನಡೆಯಲಿದ್ದು, ಈ ಬಗ್ಗೆ ಪೂರ್ವ ಭಾವಿ ಸಭೆಯು ಜ. 16 ರಂದು ಬಳ್ಪ ಗ್ರಾ.ಪಂ.ನ ಸಭಾಭವನದಲ್ಲಿ ನಡೆಯಿತು.

ಸಂಸದ ನಳಿನ್ ಕುಮಾರ್ ಕಟೀಲು ಗ್ರಾಮೋತ್ಸವ ಕಾರ್ಯಕ್ರಮಗಳ ರೂಪು ರೇಷೆಗಳ ಬಗ್ಗೆ ಚರ್ಚಿಸಿದರು. ಗ್ರಾಮೋತ್ಸವ ಸಮಿತಿ ಅಧ್ಯಕ್ಷ ನೀಲೇಶ್ವರ ನಾಳ, ಕಾರ್ಯದರ್ಶಿ ರಾಧಾಕೃಷ್ಣ ಕುಳ, ಕೋಶಾಧಿಕಾರಿ ಮುರಲಿ ಕಾಮತ್ ಬಳ್ಪ, ಗ್ರಾಮ ವಿಕಾಸ ಪ್ರತಿಷ್ಠಾನದ ಅಧ್ಯಕ್ಷ ವಿನೋದ್ ಬೊಳ್ಮಲೆ, ಪಂಚಾಯತ್ ಅಧ್ಯಕ್ಷ ಪ್ರಕಾಶ್ ಮುಡ್ನೂರು, ಉಪಾಧ್ಯಕ್ಷೆ ಶ್ರೀಮತಿ ತಾರಾ ಬಿ. ರೈ, ಸದಸ್ಯರುಗಳಾದ ರಮಾನಂದ ಎಣ್ಣೆಮಜಲು, ಧರ್ಮಪಾಲ ಕಣ್ಕಲ್, ಶ್ರೀಮತಿ ಬೇಬಿ ಭಾಸ್ಕರ ಕಟ್ಟ, ಶ್ರೀಮತಿ ಯಮುನಾ ಕಾರ್ಜ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ಯಾಂಪ್ರಸಾದ್, ಅರಂತೋಡು ಕ್ಷೇತ್ರದ ಜಿ.ಪಂ. ಸದಸ್ಯ ಹರೀಶ್ ಕಂಜಿಪಿಲಿ, ಪಂಜ ಸಿ.ಎ. ಬ್ಯಾಂಕ್ ನಿರ್ದೇಶಕರುಗಳಾದ ಶ್ರೀಕೃಷ್ಣ ಭಟ್ ಪಠೋಳಿ ಮತ್ತು ರಘುನಾಥ ರೈ ಕೆರೆಕ್ಕೋಡಿ,
ಗುತ್ತಿಗಾರು ಜಿ.ಪಂ. ಕ್ಷೇತ್ರದ ಬಿ.ಜೆ,ಪಿ, ಶಕ್ತಿ ಕೇಂದ್ರದ ಅಧ್ಯಕ್ಷ ಸುಬ್ರಹ್ಮಣ್ಯ ಕುಳ ಸೇರಿದಂತೆ ಗ್ರಾಮಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಸೂಕ್ತ ಸಲಹೆಗಳನ್ನು ನೀಡಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.