Breaking News

ಬಳ್ಪ ಗ್ರಾ.ಪಂ. ವಿಶೇಷ ಗ್ರಾಮಸಭೆ

Advt_Headding_Middle
Advt_Headding_Middle

ಬಳ್ಪ ಗ್ರಾಮ ಪಂಚಾಯತ್‌ನಲ್ಲಿ 2018 – 19 ನೇ ಸಾಲಿನ ದ್ವಿತೀಯ ಹಂತದ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ವಿಶೇಷ ಗ್ರಾಮಸಭೆಯು ಜ. 16 ರಂದು ಬಳ್ಪ ಗ್ರಾ.ಪಂ. ವಠಾರದಲ್ಲಿ ಪಂಚಾಯತ್ ಅಧ್ಯಕ್ಷ ಪ್ರಕಾಶ್ ಮುಡ್ನೂರುರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸುಳ್ಯ ಅಕ್ಷರದಾಸೋಹ ಸಹಾಯಕ ನಿರ್ದೇಶಕರಾದ ದೇವರಾಜ್ ಮುತ್ಲಾಜೆ ಮಾರ್ಗದರ್ಶಿ ಅಧಿಕಾರಿಯಾಗಿ ಭಾಗವಹಿಸಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ಯಾಂಪ್ರಸಾದ್ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿ ಕೊನೇಯಲ್ಲಿ ವಂದಿಸಿದರು. ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ತಾಂತ್ರಿಕ ಸಂಯೋಜಕ ಪ್ರಜ್ವಲ್ ಕುಮಾರ್, ಸಾಮಾಜಿಕ ಪರಿಶೋಧನಾ ತಾಲೂಕು ಸಂಯೋಜಕರಾದ ರೋಹಿತ್ ಕುಮಾರ್ ಮತ್ತು ಕು. ಲಕ್ಷ್ಮೀ ಮಾಹಿತಿ ನೀಡಿದರು. ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ತಾರಾ ಬಿ. ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸದಸ್ಯರುಗಳಾದ ರಮಾನಂದ ಎಣ್ಣೆಮಜಲು, ವಿನೋದ್ ಬೊಳ್ಮಲೆ, ಶ್ರೀಮತಿ ಲಲಿತಾ ಬಿ. ಕೆರೆ, ಶ್ರೀಮತಿ ಬೇಬಿ ಭಾಸ್ಕರ ಕಟ್ಟ, ಕೈಮಲ ಮುಗೇರ, ಶ್ರೀಮತಿ ಸುಮಿತ್ರಾ ಬಿ. ಕೆರೆ ಸೇರಿದಂತೆ ಗ್ರಾಮಸ್ಥರು ಈ ಸಂದಭ
ದಲ್ಲಿ ಉಪಸ್ಥಿತರಿದ್ದರು. ಪಂಚಾಯತ್ ಸಿಬ್ಬಂದಿಗಳು ಸಹಕಾರ ನೀಡಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.