ಅಭಿಜ್ಞಾ ಪಳಂಗಾಯ ಡ್ರಾಯಿಂಗ್ ಗ್ರೇಡ್ ಪರೀಕ್ಷೆಯಲ್ಲಿ ಸುಳ್ಯ, ಪುತ್ತೂರು ತಾಲೂಕಿಗೆ ಪ್ರಥಮ

Advt_Headding_Middle
Advt_Headding_Middle


ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ಬೆಂಗಳೂರು ನಡೆಸಿದ ಜೂನಿಯರ್ ಗ್ರೇಡ್ ಚಿತ್ರಕಲೆ ಪರೀಕ್ಷೆಯಲ್ಲಿ ಅಭಿಜ್ಞಾ ಪಳಂಗಾಯ ೪೯೪ ಅಂಕಗಳೊಂದಿಗೆ ಡಿಸ್ಟಿಂಕ್ಷನ್ ಪಡೆದು ಸುಳ್ಯ, ಪುತ್ತೂರು ತಾಲೂಕಿಗೆ ಪ್ರಥಮ ಸ್ಥಾನಿಯಾಗಿದ್ದಾರೆ. ಈ ಹಿಂದೆ ಕೇಂದ್ರ ಸರಕಾರ ಶಕ್ತಿ ಸಂವರ್ಧನೆಯ ಚಿತ್ರಕಲಾ ಸ್ಪರ್ಧೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಿ, ರಾಷ್ಟ್ರಮಟ್ಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ಪ್ರಶಸ್ತಿ ಗಳಿಸಿರುವುದಲ್ಲದೆ, ಲಯನ್ಸ್ ಜಾಗತಿಕ ಮಟ್ಟದ ಸ್ಪರ್ಧೆಯಲ್ಲಿ ದೇಶಕ್ಕೆ ಪ್ರಥಮ ಸ್ಥಾನಿಯಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಇವರು ಪಂಜದ ಶಶಿಧರ ಪಳಂಗಾಯ ರಶ್ಮಿ ದಂಪತಿಗಳ ಪುತ್ರ. ಕಡಬದ ಸೈಂಟ್ ಆನ್ಸ್ ವಿದ್ಯಾ ಸಂಸ್ಥೆಯ ವಿದ್ಯಾರ್ಥಿ. ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರಕಲಾ ಶಿಕ್ಷಕ ಸತೀಶ್ ಪಂಜ ಇವರು ನಡೆಸುತ್ತಿರುವ ಕ್ರಿಯೇಟಿವ್ ಡ್ರಾಯಿಂಗ್ ಸ್ಕೂಲ್ ಪಂಜ ಇಲ್ಲಿಯ ವಿದ್ಯಾರ್ಥಿ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.