ಎಣ್ಣೆಮಜಲು ಶಾಲೆಯಲ್ಲಿ ಕ್ರೀಡೋತ್ಸವ ಮತ್ತು ಸನ್ಮಾನ ಸಮಾರಂಭ

Advt_Headding_Middle
Advt_Headding_Middle

ಎಣ್ಣೆಮಜಲು ಸ.ಕಿ.ಪ್ರಾ.ಶಾಲೆ, ಅಂಗನವಾಡಿ ಕೇಂದ್ರ ಎಣ್ಣೆಮಜಲು ಹಾಗೂ ಹಳೆವಿದ್ಯಾರ್ಥಿ ಸಂಘ ಎಣ್ಣೆಮಜಲು ಇವುಗಳ ಸಂಯುಕ್ತ ಆಶ್ರಯದಲ್ಲಿ ಕ್ರೀಡೋತ್ಸವ ಮತ್ತು ಸನ್ಮಾನ ಸಮಾರಂಭವು ಡಿ. 22 ರಂದು ಶಾಲಾ ಆವರಣದಲ್ಲಿ ನಡೆಯಿತು.

ಕ್ರೀಡೋತ್ಸವದ ಉದ್ಘಾಟನೆಯನ್ನು ಪುರುಷೋತ್ತಮ ಅಮ್ಮಣ್ಣಾಯ ಮುಡ್ನೂರು ನೆರವೇರಿಸಿದರು. ಪಠೇಲ್ ಪುಟ್ಟಣ್ಣ ಗೌಡ ಎಣ್ಣೆಮಜಲುರವರು ಧ್ವಜಾರೋಹಣಗೈದರು. ಬಳ್ಪ ಗ್ರಾ.ಪಂ. ಅದ್ಯಕ್ಷ ಪ್ರಕಾಶ್ ಎಂ. ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗ್ರಾ.ಪಂ. ಸದಸ್ಯರಾದ ರಮಾನಂದ ಎಣ್ಣೆಮಜಲು, ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕರಾದ ತುಕಾರಾಮ ಏನೆಕಲ್ಲು ಉಪಸ್ಥಿತರಿದ್ದರು.
ಸಮಾರೋಪ ಸಮಾರಂಭದಲ್ಲಿ ಜಿಲ್ಲಾ ಪ್ರಶಸ್ತಿ ವಿಜೇತ ಶಿಕ್ಷಕಿ ಶಾಲಿನಿ ಎಂ.ರವರನ್ನು ಸನ್ಮಾನಿಸಲಾಯಿತು. ರಾಷ್ಟ್ರಪ್ರಶಸ್ತಿ ಪುರಸ್ಕೃತರಾದ ನಾರಾಯಣ ಭಟ್ ಟಿ. ರಾಮಕುಂಜ ಸನ್ಮಾನ ಕಾರ್ಯಕ್ರಮವನ್ನು ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ತಾ.ಪಂ. ಸದಸ್ಯ ಅಶೋಕ್ ನೆಕ್ರಾಜೆ, ಪ್ರಾ.ಶಾಲಾ ಶಿಕ್ಷಕರ ಸಂಘ ಬೆಂಗಳೂರು, ಜಿಲ್ಲಾ ಸಮಿತಿ ಮಂಗಳೂರು ಇದರ ಪ್ರ.ಕಾರ್ಯದರ್ಶಿ ರಾಮಕೃಷ್ಣ ಮಲ್ಲಾರ ಉಪಸ್ಥಿತರಿದ್ದರು.
ವೇದಿಕೆಯಲ್ಲಿ ಪುರುಷೋತ್ತಮ ಅಮ್ಮಣ್ಣಾಯ, ಎಸ್‌ಡಿಎಂಸಿ ಅಧ್ಯಕ್ಷರಾದ ಚಂದ್ರನಾಥ ಪಟುಳಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಭಾಸ್ಕರ ಗೌಡ ಪಂಡಿ, ಹಿರಿಯರಾದ ಪಠೇಲ್ ಪುಟ್ಟಣ್ಣ ಗೌಡ ಎಣ್ಣೆಮಜಲು, ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಹರಿಣಾಕ್ಷಿ, ಮುಖ್ಯ ಶಿಕ್ಷಕಿ ಶಾಲಿನಿ ಎಂ., ಶಾಲಾ ವಿದ್ಯಾರ್ಥಿ ನಾಯಕ ರಾಕೇಶ್ ಕೃಷ್ಣ ಕೆ.ಎಸ್. ಉಪಸ್ಥಿತರಿದ್ದರು. ಕ್ರೀಡೋತ್ಸವದಲ್ಲಿ ವಿಜೇತರಾದ ವಿದ್ಯಾರ್ಥಿ ಮತ್ತು ಹಳೆವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ನಿವೃತ್ತ ಮುಖ್ಯ ಶಿಕ್ಷಕ ಪುಟ್ಟಣ್ಣ ಎ.ರವರು ದಿ. ದಾಸಪ್ಪ ಗೌಡ ಎಣ್ಣೆಮಜಲುರವರ ಸ್ಮರಣಾರ್ಥ ೫೦೦೦ ರೂ.ಗಳನ್ನು ದತ್ತಿನಿಧಿಯಾಗಿ ಶಾಲೆಗೆ ನೀಡಿದರು. ರಮಾನಂದ ಎಣ್ಣೆಮಜಲು ಸ್ವಾಗತಿಸಿ, ಮುಖ್ಯಶಿಕ್ಷಕಿ ಶಾಲಿನಿ ಎಂ. ವಂದಿಸಿದರು. ಪ್ರಸನ್ನ ವೈ.ಟಿ. ಕಾರ್ಯಕ್ರಮ ನಿರೂಪಿಸಿದರು. ಅಂಗನವಾಡಿ ಪುಟಾಣಿಗಳಿಂದ ಶಾಲಾ ವಿದ್ಯಾರ್ಥಿಗಳಿಂದ, ಹಳೆವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.