ಅರಂತೋಡು ಶ್ರೀ ದುರ್ಗಾಮಾತಾ ಭಜನಾ ಮಂದಿರದ ಅಮೃತ ಮಹೋತ್ಸವದ ಸಮಾರೋಪ ಸಮಾರಂಭ

Advt_Headding_Middle
Advt_Headding_Middle


ಜ. 16 ರಿಂದ ಪ್ರಾರಂಭಗೊಂಡ ಅರಂತೋಡು ಶ್ರೀ ದುರ್ಗಾಮಾತಾ ಭಜನಾ ಮಂದಿರದ ಅಮೃತ ಮಹೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭವು ಜ. 2೦ರಂದು ನಡೆಯಿತು.

ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಭಜನಾ ಮಂಡಳಿ ಅಧ್ಯಕ್ಷ ಯು.ಎಂ.ನಾರಾಯಣ ಗೌಡ ವಹಿಸಿದ್ದರು.  ಶಕ್ತಿಪತ್ರಿಕೆಯ ಉಪಸಂಪಾದಕ ಸೋಮೇಶ್ ಧಾರ್ಮಿಕ ಉಪನ್ಯಾಸ ನೀಡಿದರು. ಮುಖ್ಯ ಅತಿಥಿಗಳಾಗಿ ಶಾಸಕ ಎಸ್. ಅಂಗಾರ, ಜಿ.ಪಂ.ಸದಸ್ಯ ಹರೀಶ್ ಕಂಜಿಪಿಲಿ, ಗ್ರಾ.ಪಂ. ಅಧ್ಯಕ್ಷೆ ಲೀಲಾವತಿ ಕೊಡೆಂಕಿರಿ, ತೊಡಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಅಧ್ಯಕ್ಷ ಕೇಶವ ಕೊಳಲುಮೂಲೆ, ಅರಂತೋಡು ಸೊಸೈಟಿ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಧ.ಯೋಜನಾಧಿಕಾರಿ ಸಂತೋಷ್ ಶೆಟ್ಟಿ, ಅರಂತೋಡು ವಿಶ್ವ ಹಿಂದೂ ಪರಿಷತ್‌ನ ಅಧ್ಯಕ್ಷ ಸೋಮಶೇಖರ ಪೈಕ, ಅರಂತೋಡು ವಾಹನ ಚಾಲಕ ಮಾಲಕರ ಸಂಘದ ಅಅಧ್ಯಕ್ಷ ರಮಾನಂದ ಬಾಳೆಕಜೆ, ಭಜನಾ ಮಂದಿರದ ಕಾರ್ಯದರ್ಶಿ ಎ.ವಿ.ತೀರ್ಥರಾಮ ಉಪಸ್ಥಿತರಿದ್ದರು. ಸಭೆಯಲ್ಲಿ ಅಂಬರೀಶ್ ಭಟ್, ನರಸಿಂಹ ಭಟ್, ಪುಂಡರಿಕ ಕೆ.ಎಂ., ಶ್ರೀಮತಿ ಸರಸ್ವತಿ ಅಡ್ತಲೆ, ಶಿವಾನಂದ ಕುಕ್ಕುಂಬಳ, ಎ.ಸಿ.ವಸಂತ, ಪವನ್ ಕಲ್ಲುಗದ್ದೆ, ಎಲ್ಯಣ್ಣ ಪಾನತ್ತಿಲರವರನ್ನು ಸನ್ಮಾನಿಸಲಾಯಿತು. ನಿವೃತ್ತ ಪ್ರಾಂಶುಪಾಲರಾದ ಕೆ.ಆರ್.ಗಂಗಾಧರರವರು ಸ್ವಾಗತ ಮತ್ತು ಪ್ರಾಸ್ತಾವಿಕ ಮಾತುಗಳನ್ನಾಡಿದರು. ತಾ.ಪಂ. ಸದಸ್ಯೆ ಪುಷ್ಪಾ ಮೇದಪ್ಪ ಪ್ರಾರ್ಥಿಸಿದರು. ಭವಾನಿಶಂಕರ ಅಡ್ತಲೆ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.