ಕುಕ್ಕಂದೂರು ಶ್ರೀ ಮುರುಗನ್ ದೇವಸ್ಥಾನದಲ್ಲಿ ಶ್ರೀ ನಾಗಕನ್ನಿಕೆಯ ಪ್ರತಿಷ್ಠಾ ಬ್ರಹ್ಮಕಲಶೋತ್ಸವ

Advt_Headding_Middle
Advt_Headding_Middle

ಜಾಲ್ಸೂರು ಗ್ರಾಮದ ಕುಕ್ಕಂದೂರು ಶ್ರೀ ಮುರುಗನ್ ದೇವಸ್ಥಾನದಲ್ಲಿ ಶ್ರೀ ನಾಗಕನ್ನಿಕೆಯ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಶ್ರೀ ಕ್ಷೇತ್ರದ ತಂತ್ರಿಗಳಾದ ವೇದಮೂರ್ತಿ ಗಣೇಶ್ ಭಟ್ ಆಚಾರ್ಯತ್ವದಲ್ಲಿ ಜ. 20 ಮತ್ತು 21ರಂದು ನಡೆಯಿತು.

ಜ.2೦ರಂದು ಸಂಜೆ ತಂತ್ರಿಗಳ ಆಗಮನ, ದೇವತಾಪ್ರಾರ್ಥನೆ, ದೀಪ ಪ್ರತಿಷ್ಠೆ, ಆಚಾರ್ಯ ವರಣ, ಸ್ಥಳಶುದ್ಧಿ, ಪ್ರಾಸಾದಶುದ್ಧಿ, ಸಂಜೆ ಗುರುಗಣಪತಿ ಪೂಜೆ, ಪುಣ್ಯಾಹ, ವಾಸ್ತುಹೋಮ, ರಾಕ್ಷೋಘ್ನ, ವಾಸ್ತುಬಲಿ, ಪ್ರಾಕಾರಬಲಿ, ಅಧಿವಾಸಾದಿಗಳು, ಬಿಂಬಶುದ್ಧಿ, ಕಲಶಪ್ರತಿಷ್ಠೆ, ಶಯ್ಯಾ ನಡೆಯಿತು.
ಜ.21 ರಂದು ಪ್ರಾತ:ಕಾಲ ಗುರುಗಣಪತಿ ಪೂಜೆ, ಪುಣ್ಯಾಹ, ಗಣಪತಿ ಹೋಮ, ಪಂಚಗವ್ಯ ಹವನ, ಪ್ರತಿಷ್ಠಾ ಹೋಮ, ಬೆಳಿಗ್ಗೆ 9-12ರಿಂದ 1೦-15 ರ ಪುಷ್ಯ ನಕ್ಷತ್ರ 1 ಪಾದ ಕುಂಭ ಲಗ್ನದ ಶುಭಮುಹೂರ್ತದಲ್ಲಿ ನಾಗ ಕನ್ನಿಕೆ ಪ್ರತಿಷ್ಠೆ ಮತ್ತು ನಾಗ ಪ್ರತಿಷ್ಠೆ ನಡೆಯಿತು. ಪೂ.11ರಿಂದ ನಾಗತಂಬಿಲ, ವಿಶೇಷಪೂಜೆ, ಪ್ರಸಾದ ವಿತರಣೆ, ಮಧ್ಯಾಹ್ನ ಅನ್ನಸಂತರ್ಪಣೆ ಜರುಗಿತು.


ಅಪರಾಹ್ನ ೩ರಿಂದ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಜಾಲ್ಸೂರು ಗ್ರಾ.ಪಂ.ಅಧ್ಯಕ್ಷೆ ಶ್ರೀಮತಿ ಶಶಿಕಲಾ ಎಸ್.ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭವನ್ನು ಶಾಸಕ ಎಸ್.ಅಂಗಾರ ಉದ್ಘಾಟಿಸಿದರು. ಶ್ರೀಮತಿ ಶ್ರೀದೇವಿ ನಾಗರಾಜ್ ಭಟ್ ಸುಳ್ಯ ಧಾರ್ಮಿಕ ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ಜಿ.ಪಂ.ಸದಸ್ಯೆ ಶ್ರೀಮತಿ ಪುಷ್ಪಾವತಿ ಬಾಳಿಲ, ತಾ.ಪಂ.ಸದಸ್ಯ ತೀರ್ಥರಾಮ ಜಾಲ್ಸೂರು, ಉದ್ಯಮಿ ಸುಧಾಕರ ಕಾಮತ್ ವಿನೋಬನಗರ, ಕೃಷಿ ಇಲಾಖೆಯ ಮೋಹನ್ ನಂಗಾರು, ಮಾಜಿ ತಾ.ಪಂ.ಸದಸ್ಯ ಗೋಪಿನಾಥ್ ಬೊಳುಬೈಲು, ಶ್ರೀ ಕ್ಷೇ.ಧ.ಗ್ರಾ.ಯೋಜನೆಯ ಜಾಲ್ಸೂರು ವಲಯ ಮೇಲ್ವಿಚಾರಕ ಪ್ರಶಾಂತ್, ಗ್ರಾ.ಪಂ.ಸದಸ್ಯ ಸುಬ್ಬಯ್ಯ ನಾಯರ್ ಹಿತ್ಲು, ಶ್ರೀ ಮುರುಗನ್ ದೇವಾಲಯದ ಆಡಳಿತ ಸಮಿತಿ ಅಧ್ಯಕ್ಷ ರಾಮಚಂದ್ರನ್, ದ.ಕ.ತ.ಸೇ.ಸಂಘದ ಅಧ್ಯಕ್ಷ ಕನಕರಾಜ್ ವಿ., ಪ್ರ.ಕಾರ್ಯದರ್ಶಿ ವಿಜಯರತ್ನಂ, ಶ್ರೀ ಮುತ್ತುಮಾರಿಯಮ್ಮ ದೇವಸ್ಥಾನದ ಅಧ್ಯಕ್ಷ ಅಳಗಯ್ಯ ಗೌರವ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.