Breaking News

ಸುಳ್ಯ ತಾಲೂಕಿನಲ್ಲಿವೆ ಸುಂದರ ಸರಕಾರಿ ಶಾಲೆಗಳು, ತಮ್ಮೂರಿನ ಸೊತ್ತನ್ನು ತಿಳಿಯದ ಸ್ಥಳೀಯರು

Advt_Headding_Middle
Advt_Headding_Middle

ಡಾ. ಚಂದ್ರಶೇಖರ ದಾಮ್ಲೆ

ಸರಕಾರಿ ಶಾಲೆಗಳು ಚೆನ್ನಾಗಿಲ್ಲ ಮತ್ತು ಕನ್ನಡ ಮಾಧ್ಯಮ ಪ್ರಯೋಜ ನಕ್ಕಿಲ್ಲ ಎಂಬ ಮೂಢ ನಂಬಿಕೆಯಲ್ಲಿ ಮುಳುಗಿದೆ ನಮ್ಮ ಸಮಾಜ. ಇದರಿಂದಾಗಿ ಸರಕಾರಿ ಶಾಲೆಗಳು ಸ್ಥಳೀಯರಿಂದಲೇ ಅವಗಣನೆಗೆ ಒಳಗಾಗಿವೆ. ಹೀಗಿದ್ದರೂ ನಾವು ನಿಮ್ಮೂರಿನ ಆಸ್ತಿ ಎನ್ನುವಂತೆ ನಗುತ್ತ ನಿಂತಿರುವ ಸರಕಾರಿ ಶಾಲೆಗಳನ್ನು ನೋಡಿಯೇ ನಾನು ಈ ಲೇಖನ ಬರೆಯುತ್ತಿzನೆ. ಸುಳ್ಯ ತಾಲೂಕಿನ ಸರಕಾರಿ ಶಾಲೆಗಳ ಅತ್ಯುತ್ತಮ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (ಎಸ್.ಡಿ.ಎಂ.ಸಿ.) ಪ್ರಶಸ್ತಿಗೆ ಆಯ್ಕೆ ಸಮಿತಿಯ ಸದಸ್ಯನಾಗಿ ನಾನು ಕಂಡಿರುವ ವಾಸ್ತವಿಕ ಚಿತ್ರಣವು ಸರಕಾರಿ ಶಾಲೆಗಳ ಬಗ್ಗೆ ಇರುವ ಸಾರ್ವಜನಿಕ ಅಭಿಪ್ರಾಯಕ್ಕಿಂತ ಭಿನ್ನವಾಗಿದೆ ಎಂಬ ಅನುಭವ ನೀಡಿದೆ.
ಸರಕಾರಿ ಶಾಲೆ ಎಂಬುದು ಸಮುದಾಯದ ಆಸ್ತಿ. ಪೋಷಕರು ಅದರ ಫಲಾನುಭಾವಿಗಳು. ಹಾಗಾಗಿಯೇ ಎಸ್.ಡಿ.ಎಂ.ಸಿ. ಯಲ್ಲಿ ಪೋಷಕರಿಗೇ ಮಾನ್ಯತೆ ಮತ್ತು ಆದ್ಯತೆ. ಈ ಅರಿವನ್ನು ಮೂಡಿಸುವಲ್ಲಿ ಶಿಕ್ಷಕರು ಎಲ್ಲಿ ಸಫಲರಾಗುತ್ತಾರೋ ಅಲ್ಲಿ ಸರಕಾರಿ ಶಾಲೆಗಳು ಖಾಸಗಿ ಶಾಲೆಗಳಿಗೆ ಸರಿ ಮಿಗಿಲಾಗಿ ಸ್ಪರ್ಧೆಯಲ್ಲಿವೆ. ಶಿಕ್ಷಕರ ಸಫಲತೆ ಇರುವುದು ಅವರ ವೃತ್ತಿ ಪರತೆಯಿಂದಾಗಿ ಹುಟ್ಟುವ ಆತ್ಮವಿಶ್ವಾಸದಲ್ಲಿ. ಇಂತಹ ಆತ್ಮವಿಶ್ವಾಸವೇ ಪೋಷಕರ ವಿಶ್ವಾಸವನ್ನು ಗಳಿಸುವಲ್ಲಿ ಸಹಾಯಕವಾಗುತ್ತದೆ. ಹೀಗೆ ಪೋಷಕರೂ ಶಿಕ್ಷಕರೂ ಸೇರಿದಾಗ ಒಂದು ಉಪಯುಕ್ತ ಸಂಸ್ಥೆಯಾಗಿ ಸರಕಾರಿ ಶಾಲೆ ರೂಪುಗೊಳ್ಳುತ್ತದೆ. ಪರಿಶೀಲನೆಯ ನೆಪದಲ್ಲಿ ನಾನು ನೋಡಿದ ಆರು ಶಾಲೆಗಳೂ ಸಶಕ್ತ ಸರಕಾರಿ ಶಾಲೆಗಳಾಗಿರುವುದಕ್ಕೆ ಸಾಕ್ಷಿ ನೀಡಿವೆ. ಆದರೆ ಇಷ್ಟೇ ಅಲ್ಲ, ಸುಳ್ಯ ತಾಲೂಕಿನಲ್ಲಿ ಇನ್ನೂ ಅನೇಕ ಸರಕಾರಿ ಶಾಲೆಗಳು ಸಶಕ್ತವಾಗಿ ಕಾರ್ಯಾತ್ಮಕತೆ ಹೊಂದಿವೆ ಹಾಗೂ ಉತ್ತಮ ಶಿಕ್ಷಕಿಯರೂ ಇದ್ದಾರೆ ಎಂಬುದಾಗಿ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಆಗಿರುವ ಶ್ರೀಮತಿ ವೀಣಾಎಂ.ಟಿ. ಹೇಳುತ್ತಾರೆ. ಪಠ್ಯ, ಪಠ್ಯೇತರ ಮತ್ತು ಪಠ್ಯಪೂರಕ ಕಲಿಕೆಯಲ್ಲಿ ಸ್ಪರ್ಧಾತ್ಮಕವಾಗಿ ಮಕ್ಕಳನ್ನು ರೂಪಿಸುವ ಸರಕಾರಿ ಶಾಲೆಗಳು ಸುಳ್ಯ ತಾಲೂಕಿನಲ್ಲಿ ಸಾಕಷ್ಠಿವೆ ಎಂಬುದು ಅವರ ಅನುಭವದ ಮಾತು.
ಐವರ್ನಾಡು, ದೇವರ್ಕಾನ, ಪೆರುವಾಜೆ, ಉಬರಡ್ಕ, ಅರಂತೋಡು ಎಂಬ ಹಳ್ಳಿಗಳ ಪ್ರಾಥುಕ ಶಾಲೆಗಳು ಹಾಗೂ ಎಲಿಮಲೆಯ ಸರಕಾರಿ ಪ್ರೌಢ ಶಾಲೆ ನಾವು ಭೇಟಿ ನೀಡಿದ ಶಾಲೆಗಳು. ಇಲ್ಲೆಲ್ಲ ಶಾಲಾ ಆವರಣದ ಭದ್ರತೆಂದತೊಡಗಿ ಸ್ವಚ್ಛವಾದ ಪರಿಸರ, ಸುಭದ್ರವಾದ ಕಟ್ಟಡಗಳು, ಹಾಗೂ ಅಕ್ಷರದಾಸೋಹದ ಕಟ್ಟಡ, ಸಾಕಷ್ಟು ನೀರಿನ ವ್ಯವಸ್ಥೆ, ತರಕಾರಿ ಬೆಳೆಸುವ ಅಕ್ಷರತೋಟ, ಸ್ವಚ್ಛ ಶೌಚಾಲಯಗಳು, ಶಾಲಾ ಸೌಂದರ್ಯಕ್ಕಾಗಿ ಹೂಗಿಡಗಳು, ವಿಸ್ತಾರವಾದ ಆಟದ ಬಯಲು, ಸ್ವಚ್ಛವಾದ ತರಗತಿ ಕೊಠಡಿಗಳಲ್ಲಿ ಅಗತ್ಯವಿರುವಷ್ಟು ಪೀಠೋಪಕರಣಗಳು, ಗ್ರಂಥಾಲಯ, ವಾಚನಾಯಲಯ, ಕಂಪ್ಯೂಟರ್ ಶಿಕ್ಷಣ, ಪ್ರೊಜೆಕ್ಟರ್ ಮೂಲಕ ದೃಶ್ಯ ಶ್ರವಣ ಕಲಿಕಾ ವ್ಯವಸ್ಥೆ, ಸುವ್ಯವಸ್ಥಿತ ಶಿಕ್ಷಕರ ಕೊಠಡಿ, ನಿಯಮಾನುಸಾರ ನೇಮಕ ಹೊಂದಿದ ಶಿಕ್ಷಕರಲ್ಲದೆ ಎಸ್. ಡಿ.ಎಂ.ಸಿ. ಪ್ರಾಯೋಜಿತ ಅತಿಥಿ ಶಿಕ್ಷಕರು ಹೀಗೆ ಎಲ್ಲವೂ ಇದೆ. ಆದರೆ ಬೇಕಾದ ಇಲ್ಲ. ಅಂದರೆ ಊರಿನ ಎಲ್ಲಾ ಮಕ್ಕಳು ತಮ್ಮೂರಿನ ಶಾಲೆಗೆ ಬರುತ್ತಿಲ್ಲ. ಕೇವಲ ಬಡವರ ಮಕ್ಕಳಷ್ಟೇ ಅಲ್ಲ, ಊರಿನ ಎಲ್ಲ ಮಕ್ಕಳೂ ತಮ್ಮೂರಿನ ಸರಕಾರಿ ಶಾಲೆಗೆ ಸೇರಬೇಕು. ಕನ್ನಡಮಾಧ್ಯಮವಾದರೂ ಒಂದನೇ ತರಗತಿಯಿಂದಲೇ ಇಂಗ್ಲಿಷ್ ಕಲಿಕೆಗೆ ಕೊರತೆ ಇಲ್ಲದ ವ್ಯವಸ್ಥೆಗಳಿರುವಾಗ ಊರಿನ ಎಲ್ಲರೂ ಸರಕಾರಿ ಶಾಲೆಯ ಸದುಪಯೋಗಕ್ಕೆ ತೊಡಗಬೇಕು. ಆಗ ‘ನೆರೆಹೊರೆಯ ಶಾಲೆ’ ಎಂಬ ಪದಕ್ಕೆ ಅರ್ಥ ಬರುತ್ತದೆ. ಅಲ್ಲದೆ ಮಕ್ಕಳ ಸಂಖ್ಯೆ ಹೆಚ್ಚಿದರೆ ಅನುಪಾತ ಪ್ರಕಾರ ಶಿಕ್ಷಕರ ಸಂಖ್ಯೆಯೂ ಹೆಚ್ಚುತ್ತದೆ. ಊರಿನ ಶಾಲೆಯಲ್ಲಿ ಕಲಿಯುವುದು ಮಕ್ಕಳಿಗೂ ಹಿತ, ಹೆತ್ತವರಿಗೂ ಹಿತ. ಮನೆಯಿಂದ ನಡೆದು ಹೋಗುವಷ್ಟು ದೂರದಲ್ಲಿ ಮಗುವಿನ ಶಿಕ್ಷಣ ಆಗುತ್ತಿದ್ದರೆ ಸುರಕ್ಷತೆಯ ಸಮಸ್ಯೆಯೇ ಬರುವುದಿಲ್ಲ. ಇಂತಹ ಲಾಭಗಳಿರುವಾಗ ಸ್ಥಳೀಯವಾಗಿ ಸ್ವಯಂಪೂರ್ಣವಾದ ಶಾಲೆಯನ್ನು ಬೆಳೆಸಿಕೊಳ್ಳದೆ ಇಂಗ್ಲಿಷ್ ಮಾಧ್ಯಮದ ವ್ಯಾಮೋಹದಲ್ಲಿ ದೂರಕ್ಕೆ ವಾಹನಗಳಲ್ಲಿ ಮಕ್ಕಳನ್ನು ಕಳಿಸುವುದು ನಿಜಕ್ಕೂ ಪ್ರಶಸ್ತವಲ್ಲ. ವಾಹನಗಳಿಗೆ ಮಾಡುವ ವೆಚ್ಚವನ್ನುತಮ್ಮಊರಿನ ಶಾಲೆಗಳ ಅಭಿವೃದ್ಧಿಗೆ ತೊಡಗಿಸಿದರೆ ಅವು ತಮ್ಮ ಮಕ್ಕಳ ನೆಮ್ಮದಿಯ ಕಲಿಕಾ ತಾಣಗಳಾಗುತ್ತವೆ. ಅಂತಹ ಅವಕಾಶದ ಬಾಗಿಲು ಸುಳ್ಯ ತಾಲೂಕಿನಲ್ಲಿ ಇನ್ನೂ ತೆರೆದಿದೆ ಎಂಬುದು ನಾನು ಕಂಡಿರುವ ವಾಸ್ತವ.
ಸರಕಾರಿ ಶಾಲೆಯಲ್ಲಿ ಕಲಿಯುವು ದರಿಂದ ಎರಡು ಲಾಭಗಳಿವೆ. ಒಂದನೇಯದಾಗಿ, ಒಂದು ಭಾಷೆಯಾಗಿ ಇಂಗ್ಲಿಷನ್ನು ಒಂದನೇಯಿಂದಲೇ ಕಲಿಸುವಂತಹ ಪಾಠ ಪಟ್ಟಿ ಇದೆ. ಹಾಗಾಗಿ ಮಕ್ಕಳಿಗೆ ದೊಡ್ಡ ತರಗತಿಗಳಲ್ಲಿ ಇಂಗ್ಲಿಷ್ ಮಾಧ್ಯಮದ ಭಯ ಇರುವುದಿಲ್ಲ. ಎರಡನೇಯದಾಗಿ, ಅರ್ಥೈಸಿಕೊಂಡು ಕಲಿಯು ನಲಿ-ಕಲಿ ಪದ್ಧತಿ ಒಂದನೇಯಿಂದ ಮೂರನೇಯ ತನಕ ಬಳಕೆಯಲ್ಲಿದೆ. ಇದು ಸ್ವಯಂ ಕಲಿಕಾ ಸಾಮರ್ಥ್ಯವನ್ನು ಬೆಳೆಸಿಕೊಳ್ಳಲು ಮಕ್ಕಳಿಗೆ ತುಂಬಾ ಸಹಕಾರಿಯಾಗಿದೆ. ನಲಿಕಲಿಯಲ್ಲಿ ಮಕ್ಕಳು ತಮ್ಮನ್ನು ತೊಡಗಿಸಿಕೊಂಡು ಕಲಿಯುತ್ತಾರೆ. ಬಾಯಿಪಾಠದ ಕಲಿಕೆಗೆ ಜೋತು ಬಿದ್ದು ನೋಟ್ಸ್ ಆಧಾರಿತವಾಗಿ ಕಲಿಯುವ ಆಂಗ್ಲಮಾಧ್ಯಮ ಶಾಲೆಗಳಿಗಿಂತ ಇದು ಎಷ್ಟೋ ಒಳ್ಳೆಯದು. ಮಾಹಿತಿಯನ್ನು ಹುಡುಕಿ ಕಲಿಯುವ ಪ್ರವೃತ್ತಿ ಬೆಳೆಸಿಕೊಂಡ ಮಗು ಮೇಲಿನ ತರಗತಿಗಳಲ್ಲಿಯೂ ಸೃಜನಶೀಲ ವಿದ್ಯಾರ್ಥಿಯಾಗುವ ಸಾಧ್ಯತೆ ಹೆಚ್ಚು. ಹಾಗಾಗಿ ಐ.ಟಿ.ಬಿ.ಟಿ.ಯಲ್ಲಾಗಲೀ ಎಲ್ಲೇ ಆಗಲಿ ತಮ್ಮ ಮಗು ಕಾರ್ಮಿಕ ನಾಗದೆ ಮಾಲಕನಾಗಬೇಕು ಎಂತ ಭಾವನೆ ಇರುವ ಹೆತ್ತವರು ಕನ್ನಡ ಮಾಧ್ಯಮಕ್ಕೆ ಮಕ್ಕಳನ್ನು ಕಳಿಸುವುದು ಒಳ್ಳೆಯದು. ಇಂತಹ ವಿಶ್ವಾಸರುವ ನಾನು ನನ್ನ ಮಗನನ್ನು ಸರಕಾರಿ ಕನ್ನಡ ಮಾಧ್ಯಮ ಶಾಲೆಯಲ್ಲೇ ಓದಿಸಿದೆ. ಇಂದು ಅವನು ಒಂದು ಬಹು ರಾಷ್ಟ್ರೀಯ ಕಂಪೆನಿಯ ಬೆಂಗಳೂರಿನ ಘಟಕದ ಆಡಳಿತ ಹುದ್ದೆಯಲ್ಲಿದ್ದಾನೆಂಬುದೇ ಕನ್ನಡದ ಯಶಸ್ಸಿಗೆ ಪುರಾವೆ. ಇಂಗ್ಲಿಷ್‌ನಲ್ಲೇ ವ್ಯವಹರಿಸುತ್ತ ಕನ್ನಡದಲ್ಲೂ ಸಂವಾದ ನಡೆಸುವ ಸಾಮರ್ಥ್ಯ ಬರುವುದು ಸರಕಾರಿ ಶಾಲೆಗಳಲ್ಲಿ ಕಲಿತ ಮಕ್ಕಳಿಗೇ ಎಂಬುದಕ್ಕೆ ಐ.ಟಿ.ಬಿ.ಟಿ ಗಳಲ್ಲಿ ಸಾಕಷ್ಟು ಪುರಾವೆಗಳಿವೆ.
ಎಸ್.ಡಿ.ಎಂ.ಸಿ. ಯವರು ಕ್ರಿಯಾಶೀಲರಾಗಿದ್ದರೆ ಶಾಲೆಯ ಅಭಿವೃದ್ಧಿಯನ್ನು ಹೇಗೆ ಸಾಧಿಸಬಹು ದೆಂಬುದಕ್ಕೆ ನಾವು ಭೇಟಿ ನೀಡಿದ ಶಾಲೆಗಳು ಹೊಂದಿರುವ ಬೆಳವಣಿಗೆಯೇ ಸಾಕ್ಷಿ. ಅವರ ಪ್ರಕಾರ ನಿರ್ದಿಷ್ಟ ಯೋಜನೆಗಳನ್ನು ರೂಪಿಸಿ ಕೇಳಿದರೆ ಊರವರು ಶಾಲೆಗೆ ಹಣ ನೀಡಲು ಸಿದ್ಧರಿದ್ದಾರೆ. ಹಾಗೆಯೇ ಹಳೆವಿದ್ಯಾರ್ಥಿಗಳೂ ನೀಡುವ ಮನಸ್ಸು ಹೊಂದಿದ್ದಾರೆ. ಹೀಗಿರುವಾಗ ಹಣ ಸಂಗ್ರಸಿ ಶಿಕ್ಷಕಿಯರ ಕೊರತೆಯನ್ನು ನೀಗಿಸಿಕೊಂಡರೆ ನಮ್ಮೂರ ಶಾಲೆ ಯೇ ನಮಗೆ ಸಾಕಲ್ಲ? ಇಂತಹ ಯೋಚನೆ ಯಿಂದ ಒಂದು ಶಿಕ್ಷಣ ಕ್ರಾಂತಿ ಮಾಡುವ ಎಲ್ಲ ಸಾಧ್ಯತೆಗಳೂ ಸುಳ್ಯ ತಾಲೂಕಿನಲ್ಲಿವೆ.
ಇತ್ತೀಚಿನ ಒಂದು ವಿದ್ಯಮಾನ ವೆಂದರೆ ಇಂಗ್ಲಿಷ್ ವಿಡಿಯಂನ ಒತ್ತಡ ಸಾಕಾಗಿ ಸರಕಾರಿ ಕನ್ನಡ ಶಾಲೆಗಳತ್ತ ಹೆತ್ತವರು ತಿರುಗಿ ಬರುತ್ತಿದ್ದಾರೆ. ಅಂತಹುದಕ್ಕೆ ಉದಾಹರಣೆಗಳೂ ಈ ಭೇಟಿಯ ಸಂದರ್ಭದಲ್ಲಿ ಕಾಣಸಿಕ್ಕಿ ದುವು. ಆರಂಭಿಕ ಹಂತದಲ್ಲಿರುವ ಈ ಪ್ರಕ್ರಿಯೆ ಇನ್ನು ಕೆಲವು ವರ್ಷಗಳಲ್ಲಿ ಬಲಗೊಳ್ಳಬಹುದು. ಆದುದರಿಂದ ಸ್ಥಳೀಯವಾಗಿ ಹೆತ್ತವರು ತಮ್ಮೂರಿನ ಸರಕಾರಿ ಶಾಲೆಗಳ ಸಾಮರ್ಥ್ಯವನ್ನು ಹೆಚ್ಚಿಸುವತ್ತ ಗಮನ ಹರಿಸಬೇಕು. ನಮ್ಮೂರಿನ ಸರಕಾರಿ ಶಾಲೆಯನ್ನೊಮ್ಮೆ ನೋಡೋಣ ಎಂಬ ಅಭಿಯಾನ ಆರಂಭವಾಗಬೇಕು. ಶಿಕ್ಷಣ ಇಲಾಖೆ ಯೂ ಸ್ಥಳೀಯ ಸಂಸ್ಥೆಗಳೂ ಇಂತಹ ಅಭಿಯಾನಕ್ಕೆ ಚಾಲನೆ ನೀಡಬೇಕು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.