ಜ.26: ಎ.ಪಿ.ಎಂ.ಸಿ ಯಲ್ಲಿ ರೈತ ಸಹಕಾರಿ ಸಂಘದ ಎರಡನೇ ಪೂರ್ವಭಾವಿ ಸಭೆ

Advt_Headding_Middle
Advt_Headding_Middle

 

ದೇಶದಲ್ಲೇ ಮೊದಲು ಎನ್ನಬಹುದಾದ ವ್ಯವಸಾಯಗಾರರ ಮತ್ತು ಶ್ರಮಿಕರ ಸಹಕಾರಿಯಾಗಿ ಕೆಲಸ ಮಾಡಲಿರುವ ರೈತ ಸಹಕಾರಿ ಸಂಘದ ಎರಡನೇ ಪೂರ್ವಭಾವಿ ಸಭೆ ಜ.26 ರಂದು ಸುಳ್ಯ ಎ.ಪಿ.ಎಂ.ಸಿ ಸಭಾಂಗಣದಲ್ಲಿ ನಡೆಯಲಿದೆ.

ಈ ಸಂಘವು ರಾಜ್ಯ ಮಟ್ಟದ ಸಹಕಾರಿ ತತ್ವದ ನೆಲೆಯಲ್ಲಿ ಕೆಲಸ ಮಾಡಲಿದ್ದು ನಿರುದ್ಯೋಗ ಸಮಸ್ಯೆ ನಿವಾರಣೆ ಹಾಗೂ ಕೃಷಿ ಪದ್ದತಿಯನ್ನು ಉಳಿಸುವವುದಾಗಿದೆ. ಸಂಘದ ಮೂಲ ಉದೆಶ ರೈತರ ಮತ್ತು ಶ್ರಮಿಕರ ಒಂದುಗೂಡುವಿಕೆಯೊಂದಿಗೆ ಕೃಷಿ ಚಟುವಟಿಕೆಯ ಪ್ರಾಥಮಿಕ ಹಂತದಿಂದ ಕೊನೆಯ ಬಳಕೆದಾರರ ಬೇಡಿಕೆಯನ್ನು ಒಂದೇ ಛತ್ರದ ಅಡಿಯಲ್ಲಿ ತರುವುದಾಗಿದೆ . ಇಲ್ಲಿ ಉದ್ಯೋಗ ಮತ್ತು ನಿರುದ್ಯೋಗದ ಮಾನವ ಸಂಪನ್ಮೂಲಗಳ ಬೃಹತ್ ಕೊಂಡಿಯಾಗಿ ಕೆಲಸ ಮಾಡಲಿದೆ. ಎಂದು ರೈತ ಸಹಕಾರಿ ಸಂಘದ ಮೂಲ ಪ್ರವರ್ತಕರಾದ ಪ್ರದೀಪ್ ಕೆ.ಎಲ್ ಮತ್ತು ಅಶೋಕ್ ಎಡಮಲೆ ತಿಳಿದಿದ್ದಾರೆ. ಹೆಚ್ಚಿನ ಸಂಖ್ಯೆಯ ಸುಳ್ಯ ತಾಲೂಕಿನ ಕೃಷಿಕರು ಮತ್ತು ಶ್ರಮಿಕರು ಭಾಗವಹಿಸುವಂತೆ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.