ಫೆ. 3: ಬೆಳ್ಳಾರೆ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದಲ್ಲಿ ಚಂಡಿಕಾಹೋಮ

Advt_Headding_Middle
Advt_Headding_Middle

ಗೌಡ ಸಾರಸ್ವತ ಬ್ರಾಹಣ 18 ಪೇಟೆ ದೇವಸ್ಥಾನಗಳಿಗೊಳಪಟ್ಟಿರುವ ಬೆಳ್ಳಾರೆ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದ ಶ್ರೀ ದುರ್ಗಾಪರಮೇಶ್ವರೀ ಅಮ್ಮನವರ ಸನ್ನಿಧಾನದಲ್ಲಿ 13ನೇ ವರ್ಷದ ಚಂಡಿಕಾಹೋಮ ಫೆ. ೦3ರಂದು ನಡೆಯಲಿದೆ.

ಬೆಳಿಗ್ಗೆ ಗಂಟೆ 6.3೦ಕ್ಕೆ ದೇವತಾ ಪ್ರಾರ್ಥನೆ, ಬೆಳಿಗ್ಗೆ 8.೦೦ಕ್ಕೆ ಕಲಶ ಪ್ರತಿಷ್ಠೆ, ಮಧ್ಯಾಹ್ನ12.೦೦ರಿಂದ ಉಭಯ ದೇವರಿಗೆ ಪೂಜೆ, ಮಧ್ಯಾಹ್ನ ಗಂಟೆ ೧.೦೦ಕ್ಕೆ ಪೂರ್ಣಾಹುತಿ ಪ್ರಸಾದ ವಿತರಣೆ, ಬಳಿಕ ಭೂರಿ ಸಮಾರಾಧನೆ ನಡೆಯಲಿದೆ. ರಾತ್ರಿ ಗಂಟೆ 8.೦೦ಕ್ಕೆ ಶ್ರೀ ವೆಂಕಟರಮಣ ದೇವರ ಪಲ್ಲಕ್ಕಿ ಉತ್ಸವ ಸಹಿತ ಪೇಟೆ ಸವಾರಿ, ವಸಂತಪೂಜೆ, ರಾತ್ರಿ 1೦.೦೦ಕ್ಕೆ ಮಂಗಳಾರತಿ ಪ್ರಸಾದ ವಿತರಣೆ ನಡೆಯಲಿದೆ. ಬೆಳಿಗ್ಗೆ 1೦.೦೦ರಿಂದ ಶ್ರೀಮತಿ ಶಾಂತೇರಿ ಕಾಮತ್ ಪ್ರಭು ಮಂಜೇಶ್ವರ ಮತ್ತು ಬಳಗದವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ಜರಗಲಿದೆ.

ಭಗವದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪೂಜಾ ಕಾರ್ಯದಲ್ಲಿ ಭಾಗವಹಿಸಿ ಶ್ರೀ ವೆಂಕಟರಮಣ ದೇವರ ಮತ್ತು ಶ್ರೀ ದುರ್ಗಾಪರಮೇಶ್ವರೀ ಅಮ್ಮನವರ ಕೃಪಾಕಟಾಕ್ಷಕ್ಕೆ ಪಾತ್ರರಾಗಬೇಕೆಂದು ದೇವಸ್ಥಾನದ ಆಡಳಿತ ಮೊಕ್ತೇಸರರಾದ ಮಣಿಕ್ಕಾರ ಗೋಪಾಲಕೃಷ್ಣ ಶ್ಯಾನುಭಾಗರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.