Breaking News

ಫೆ.5  ರಿಂದ 23 : ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಶ್ರೀ ಮಲರಾಯ ಮೂವರ್ ದೈವಸ್ಥಾನ ಪುನ:ಪ್ರತಿಷ್ಠಾ ಬ್ರಹ್ಮಕಲಶೋತ್ಸವ

Advt_Headding_Middle
Advt_Headding_Middle

ಪಿಲಿಪ್ಪೆ ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಮತ್ತು ಶ್ರೀ ಮಲರಾಯ ಮೂವರ್ ದೈವಂಗಳ ದೈವಸ್ಥಾನ ಶಿಬರಿಕಲ್ಲ ಮಾಡ ಇದರ ಪುನ: ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಫೆ.5 ರಿಂದ 23 ರ ವರೆಗೆ ಸೀಮೆಯ ಕುಂಟುಕುಡೇಲು ತಂತ್ರಿವರ್ಯರುಗಳ ನೇತೃತ್ವದಲ್ಲಿ ವಿವಿದ ವೈದಿಕ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿರುವುದು.

ಫೆ. 5 ರಂದು ಸಂಜೆ ತಂತ್ರಿವರ್ಯರ ಆಗಮನ, ಫೆ 6 ರಂದು ಗಣಪತಿ ಹವನ, ಕೊಪ್ಪರಿಗೆ ಏರುವುದು, ಧ್ವಜಾರೋಹಣ, ಉಗ್ರಾಣ ಮುಹೂರ್ತ, ಫೆ.7 ರಂದು ಗಣಪತಿ ಹವನ, ಆಶ್ಲೇಷಾಬಲಿ, ಫೆ.8 ಗಣಪತಿ ಹವನ, ಕುಂಕುಮಾರ್ಚನೆ, ಶ್ರೀ ದುರ್ಗಾಪೂಜೆ, ಫೆ.9 ಗಣಪತಿಹವನ, ಚಕ್ರಾಬ್ಜ ಪೂಜೆ,ಫೆ.10 ಶ್ರೀ ಗಣಪತಿ, ಶ್ರೀ ಶಾಸ್ತಾರ ಸಹಿತ ಶ್ರೀ ವಿಷ್ಣುಮೂರ್ತಿ ದೇವರ ಪುನ:ಪ್ರತಿಷ್ಠೆ, ಗೋದರ್ಶನ, ಅಷ್ಟಮಂಗಲದರ್ಶನ, ಶಿಖರ ಪ್ರತಿಷ್ಠೆ, ಭದ್ರದೀಪ ಪ್ರತಿಷ್ಠೆ, ಫೆ. 11 ಶ್ರೀ ವಿಷ್ಣುಯಾಗ, ಫೆ.12 ಶ್ರೀ ಗಣಪತಿ, ಶ್ರೀ ಶಾಸ್ತಾರ ದೇವರು ಸಹಿತ ಶ್ರೀ ಮಹಾವಿಷ್ಣುದೇವರಿಗೆ ಬ್ರಹ್ಮಕಲಶಪೂಜೆ, ಫೆ.13ಶ್ರೀ ದೇವರುಗಳಿಗೆ ಪರಿಕಲಾಶಭೀಷೇಕ ಸಹಿತ ದ್ರವ್ಯಕುಂಭಾಭಿಷೇಕ, ಬ್ರಹ್ಮಕಲಶಾಭಿಷೇಕಗಳು, ಜಾತ್ರಾ ಮಹೋತ್ಸವ, ಶ್ರೀ ದೇವರ ಉತ್ಸವಬಲಿ, ಫೆ.14 ಶ್ರೀ ದೇವರ ದೀಪಬಲಿ,ಶ್ರೀ ಭೂತಬಲಿ, ಶ್ರೀ ದೇವರ ದರ್ಶನಬಲಿ, ಬಟ್ಟಲುಕಾಣಿಕೆ, ಭಕ್ತಾದಿಗಳಿಗೆ ರಾಜಾಂಗಣ ಪ್ರಸಾದ, ಶ್ರೀ ಲಕ್ಷ್ಮೀನಾರಾಯಣ ಕಲ್ಯಾಣೋತ್ಸವ, ಫೆ.15 ಶ್ರೀ ಮಲರಾಯ ಶ್ರೀ ಮೂವರ್ ದೈವಂಗಳ ಸ್ಥಾನ ಪ್ರದಾನಕ್ಕೆ ಗೊನೆಮುಹೂರ್ತ, ಫೆ.19 ತಂತ್ರಿಗಳ ಆಗಮನ, ಸಾಮೂಹಿಕ ಪ್ರಾರ್ಥನೆ, ಫೆ.20 ಗಣಪತಿ ಹವನ, ಕೊಪ್ಪರಿಗೆ ಏರುವುದು, ಫೆ.21 ಶ್ರೀ ಮಲರಾಯ ಮೂವರ್ ದೈವಂಗಳ ಸಾನಿಧ್ಯದ ಸ್ಥಾನಪ್ರದಾನ, ಶುದ್ಧಿ ಕಲಶಾಭಿಷೇಕ, ಪೂಜಾ ತಂಬಿಲಗಳು, ಮಂತ್ರಾಕ್ಷತೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಲಿರುವುದು. ಫೆ. 21 ರಾತ್ರಿ ಶ್ರೀ ಅಂಗಣದ ಬಂಟರ ಮತ್ತು ಫೆ.22 ರಂದು ರಾತ್ರಿ ಮೂವರ್ ದೈವಂಗಳ ನೇಮೋತ್ಸವ, ಫೆ.23 ರಂದು ಬೆಳಗ್ಗೆ ಶ್ರೀ ಮಲರಾಯ ದೈವದ ನೇಮೋತ್ಸವ ನಡೆಯಲಿರುವುದು. ಫೆ. 10 ರಂದು ಸಂಜೆ ಗಂಟೆ 4.೦೦ ರಿಂದ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಯವರ ದಿವ್ಯ ಉಪಸ್ಥಿತಿಯಲ್ಲಿ, ಮಹಾರಾಜ ಶ್ರೀ ಯಧುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮೈಸೂರುರವರ ಘನ ಉಪಸ್ಥಿತಿ, ಜನಾರ್ಧನ ವರ್ಮ ಅರಸರ ಅಧ್ಯಕ್ಷತೆಯಲ್ಲಿ ಪುಂಡಿಕಾ ಗಣಪತಿ ಭಟ್ ರವರ ಉಪನ್ಯಾಸದೊಂದಿಗೆ ವಿಶೇಷ ರಾಜ ದರ್ಬಾರ್ ಸಭೆಯು ನಡೆಯಲಿರುವುದು. ಉತ್ಸವದ ಪ್ರತೀ ದಿನ ಸಂಜೆ ಗಂಟೆ 4.3೦ ರಿಂದ ಯತಿವರೇಣ್ಯರ, ಧರ್ಮದರ್ಶಿಗಳ ಉಪಸ್ಥಿತಿಯಲ್ಲಿ ಧರ್ಮಸಭೆಯು ನಡೆಯಲಿರುವುದು.ಪ್ರತೀದಿನ ರಾತ್ರಿ 8.೦೦ ಗಂಟೆಯಿಂದ ಜಿಲ್ಲೆಯ ಹಾಗೂ ಸ್ಥಳೀಯ ಕಲಾವಿದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿರುವುದು. ಉತ್ಸವದ ಸಂದರ್ಭದಲ್ಲಿ ಆಗಮಿಸಿದ ಭಕ್ತಾದಿಗಳಿಗೆ ಅನ್ನ ಸಂತರ್ಪಣೆಯಾಗಲಿರುವುದು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.