ನವೋದಯ ವಿದ್ಯಾಲಯದಲ್ಲಿ ಶಿಕ್ಷಕರೂ ಸೇರಿದಂತೆ ವಿವಿಧ ಹುದ್ದೆ

Advt_Headding_Middle
Advt_Headding_Middle

 

ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದ ಅಧೀನದಲ್ಲಿರುವ ನವೋದಯ ವಿದ್ಯಾಲಯ ಸಮಿತಿ ಜವಾಹರ ನವೋದಯ ವಿದ್ಯಾಲಯಗಳಲ್ಲಿ ಖಾಲಿ ಇರುವ ಶಿಕ್ಷಕರೂ ಸೇರಿದಂತೆ ವಿವಿಧ ಹುದ್ದೆಗಳಿಗೆ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ.

ಹುದ್ದೆ ಮತ್ತು ಅರ್ಹತೆ:
ಪ್ರಿನ್ಸಿಪಾಲ್ : ಕನಿಷ್ಠ ಶೇಕಡಾ 50 ಅಂಕಗಳೊಂದಿಗೆ ಸ್ನಾತಕೋತ್ತರ ಪದವಿ ಪಡೆದು ಜತೆಗೆ ಬಿಎಡ್ ಮಾಡಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಅಭ್ಯರ್ಥಿಗಳು ಕೇಂದ್ರ/ರಾಜ್ಯ ಸರಕಾರಗಳ ಶಿಕ್ಷಣ ಸಂಸ್ಥೆಗಳಲ್ಲಿ ವೈಸ್ ಪ್ರಿನ್ಸಿಪಾಲ್ ಆಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿರಬೇಕಾದ್ದು ಕಡ್ಡಾಯ.

ಅಸಿಸ್ಟೆಂಟ್ ಕಮೀಷನರ್, ಅಸಿಸ್ಟೆಂಟ್ ಮತ್ತು ಕಂಪ್ಯೂಟರ್ ಅಪರೇಟರ್: ಈ ಹುದ್ದೆಗಳಿಗೆ ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಪದವಿ ಪೂರ್ಣಗೊಳಿಸಿರಬೇಕು. ಅಸಿಸ್ಟೆಂಟ್ ಕಮೀಷನರ್ ಹುದ್ದೆಯ ಅಭ್ಯಥಿಗಳು ಪೈನಾನ್ಸಿಯಲ್/ಅಡ್ಮಿನಿಸ್ಟ್ರೇಶನ್ ವಿಭಾಗದಲ್ಲಿ ಕನಿಷ್ಠ ಎಂಟು ವರ್ಷ ಕೆಲಸ ಮಾಡಿದ ಅನುಭವ ಹೊಂದಿರಬೇಕು, ಕಂಪ್ಯೂಟರ್ ಅಪರೇಟರ್ ಹುದ್ದೆಯ ಅಭ್ಯಥಿಗಳು ಒಂದು ವರ್ಷದ ಕಂಪ್ಯೂಟರ್ ಡಿಪ್ಲೊಮಾ ಮಾಡಿರಬೇಕು.
ಪೋಸ್ಟ್ ಗ್ರಾಜ್ಯುಯೇಟ್ ಟೀಚರ್ : ಬಯೋಲಜಿ, ಕೆಮಿಸ್ಟ್ರಿ, ಕಾಮರ್ಸ್, ಎಕನಾಮಿಕ್ಸ್, ಜಿಯೋಗ್ರಫಿ, ಹಿಂದಿ, ಮ್ಯಾಥ್ಸ್,ಫಿಸಿಕ್ಸ್,ಮತ್ತು ಐಟಿ ವಿಷಯಗಳಿಗೆ ಪೋಸ್ಟ್ ಗ್ರಾಜ್ಯುಯೇಟ್ ಟೀಚರ್‌ಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಆಯಾ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ(ಐಟಿ ವಿಷಯಕ್ಕೆ ಬಿ/ಇ ಬಿ.ಟೆಕ್ ಜತೆಗೆ ಬಿಎಡ್ ಮಾಡಿರುವ ಅಭ್ಯಥಿಗಳು ಅರ್ಜಿ ಸಲ್ಲಿಸಲು ಅರ್ಹರು.
ವಯೋಮಿತಿ:
ಪ್ರಿನ್ಸಿಪಾಲ್ ಹುದ್ದೆಗೆ40 ವರ್ಷ, ಅಸಿಸ್ಟೆಂಟ್ ಕಮೀಷನರ್ ಹುದ್ದೆಗೆ 45  ವರ್ಷ, ಅಸಿಸ್ಟೆಂಟ್ ಮತ್ತು ಕಂಪ್ಯೂಟರ್ ಅಪರೇಟರ್ ಹುದ್ದೆಗೆ 30  ವರ್ಷ ಮತ್ತು ಪೋಸ್ಟ್ ಗ್ರ್ಯಾಜುಯೇಟ್ ಟೀಚರ್ ಹುದ್ದೆಗೆ 40 ವರ್ಷ ಗರಿಷ್ಠ ವಯೋಮಿತಿ ನಿಗದಿಪಡಿಸಲಾಗಿದೆ. ವಯೋಮಿತಿಯಲ್ಲಿ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ಮತ್ತು ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.
ಅರ್ಜಿ ಶುಲ್ಕ: ಪ್ರಿನ್ಸಿಪಾಲ್ ಮತ್ತು ಅಸಿಸ್ಟೆಂಟ್ ಕಮಿಷನರ್ ಹುದ್ದೆಗಳಿಗೆ 1500ರೂ, ಅಸಿಸ್ಟೆಂಟ್ ಮತ್ತು ಕಂಪ್ಯೂಟರ್ ಹುದ್ದೆಗೆ 800ರೂ, ಹಾಗೂ ಪೋಸ್ಟ್ ಗ್ರಾಜ್ಯುಯೇಟ್ ಟೀಚರ್ ಹುದ್ದೆಗೆ 1000ರೂ ಶುಲ್ಕ ನಿಗದಿಪಡಿಸಲಾಗಿದೆ. ಆನ್‌ಲೈನ್‌ನಲ್ಲಿಯೇ ಶುಲ್ಕ ಪಾವತಿಸಬಹುದಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:14.02.2019
ಶುಲ್ಕ ಪಾವತಿಗೆ ಕೊನೆಯ ದಿನಾಂಕ: 15.02.2019
ಹೆಚ್ಚಿನ ವಿವರಗಳಿಗಾಗಿ:www.navodaya.gov.in
                                http://www.navodaya.gov.in

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.