ರಂಗಮನೆ ರಂಗಸಂಭ್ರಮ 2019 ಸಾಂಸ್ಕೃತಿಕ ಉತ್ಸವಕ್ಕೆ ತೆರೆ

Advt_Headding_Middle
Advt_Headding_Middle


ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರ ಆಶ್ರಯದಲ್ಲಿ ಜ.17 ರಿಂದ ಆರಂಭಗೊಂಡ ರಂಗಸಂಭ್ರಮ 2019 ರಾಜ್ಯಮಟ್ಟದ ಸಾಂಸ್ಕೃತಿಕ ಉತ್ಸವ ಜ.20 ರಂದು ಅದ್ಧೂರಿ ತೆರೆಕಂಡಿತು.


ಸಮಾರಂಭದ ಅಧ್ಯಕ್ಷತೆಯನ್ನು ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಕಲ್ಕೂರ. ವಹಿಸಿದ್ದರು.
ಪ್ರತಿಭಾನ್ವಿತ ಚಿತ್ರ ಕಲಾವಿದ ಶಿವಕುಮಾರ್ ಉಜಿರೆ ಅವರನ್ನು ಸನ್ಮಾನಿಸಲಾಯಿತು. ಖ್ಯಾತ ನಟಿ, ನಿರ್ದೇಶಕಿ ಗೀತಾ ಸುರತ್ಕಲ್ ಮಾತನಾಡಿ ಸುಳ್ಯದ ರಂಗಮನೆ ಕಲಾವಿದರಿಗೊಂದು ಸ್ಪೂರ್ತಿ. ಇಂತಹ ರಂಗ ಕೇಂದ್ರಗಳು ನಾಡಿನೆಲ್ಲೆಡೆ ನಿರ್ಮಾಣವಾಗಬೇಕು ಎಂದು ಹೇಳಿದರು. ಹಿರಿಯ ಯಕ್ಷ ಕಲಾವಿದ ಜೀವನ್ ರಾಂ ತಂದೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಂಗಮನೆ ರೂವಾರಿ ಜೀವನ್ ರಾಂ ಪ್ರಸ್ತಾವನೆಗೈದರು.ಡಾ ವಿದ್ಯಾ ಶಾರದೆ ವಂದಿಸಿದರು.ಡಾ ಸುಂದರ ಕೇನಾಜೆ ಕಾರ್ಯಕ್ರಮ ನಿರೂಪಿಸಿದರು. ಕೆ.ಆರ್.ಗೋಪಾಲಕೃಷ್ಣ ಆಶಯ ಗೀತೆ ಹಾಡಿದರು.
ನಂತರ ಮಾ. ಮನುಜ ನೇಹಿಗ ಪ್ರಸ್ತುತ ಪಡಿಸಿದ ಮಣಿಪುರಿ ಸ್ಟಿಕ್ ಡ್ಯಾನ್ಸ್,ಬಳಿಕ ಆಳ್ವಾಸ್ ರಂಗ ಅಧ್ಯಯನ ಕೇಂದ್ರ ಮೂಡುಬಿದಿರೆ ಅಭಿನಯದ ಕಿರು ನಾಟಕ ಅಭಿವೃದ್ಧಿ, ಅನಂತರ ವೈದೇಹಿ ಕಥೆಯಾಧಾರಿತ ಚಂಪಾ ಶೆಟ್ಟಿ ಬೆಂಗಳೂರು ನಿರ್ದೇಶನದ ಅಮ್ಮಚ್ಚಿಯೆಂಬ ನೆನಪು ಚಲನಚಿತ್ರ ಪ್ರದರ್ಶನ ಗೊಂಡಿತು.

ಬದುಕನ್ನು ಶ್ರೀಮಂತಗೊಳಿಸುವ ಸಾಂಸ್ಕೃತಿಕ ಅಭಿವೃದ್ಧಿಯು ಜತೆಯಾಗಿ ಸಾಗಬೇಕು.-ಪ್ರದೀಪ್ ಕುಮಾರ ಕಲ್ಕೂರ
ಅಭಿವೃದ್ಧಿ ಎಂದರೆ ರಸ್ತೆ, ಸೇತುವೆ, ಅಣೆಕಟ್ಟು ನಿರ್ಮಿಸುವುದಕ್ಕಷ್ಟೇ ಸೀಮಿತ ಆಗಿರಬಾರದು.ಗ್ರಾಮಗಳನ್ನು ಸ್ಮಾರ್ಟ್ ಸಿಟಿ ಮಾಡುವುದಕ್ಕಿಂತ ಹೆಚ್ಚು ಮುಖ್ಯವಾದುದು ಬದುಕನ್ನು ಶ್ರೀಮಂತಗೊಳಿಸುವ ಸಾಂಸ್ಕೃತಿಕ ಅಭಿವೃದ್ಧಿಯೂ ಜತೆ ಜತೆಯಾಗಿ ಸಾಗಬೇಕಿದೆ.ಮಕ್ಕಳ ಬದುಕು ಮೊಬೈಲ್‌ ನಲ್ಲಿ ಕಳೆದು ಹೋಗದೆ ಅವರನ್ನು ಸಾಂಸ್ಕೃತಿಕ ರಾಯಭಾರಿಯನ್ನಾಗಿ ರೂಪಿಸುವ ಮೌಲ್ಯಯುತ ಶಿಕ್ಷಣಕ್ಕೆ ಒತ್ತು ನೀಡಬೇಕಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.