ಸುಳ್ಯ ಕೆ.ವಿ.ಜಿ. ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ವಿಚಾರ ಸಂಕಿರಣ

Advt_Headding_Middle
Advt_Headding_Middle


ಸುಳ್ಯದ ಕೆ.ವಿ.ಜಿ. ದಂತ ಮಹಾವಿದ್ಯಾಲಯದ ಬಾಯಿಯ ರೋಗ ಪತ್ತೆ ಮತ್ತು ಕ್ಷ-ಕಿರಣ ವಿಭಾಗದ (ಓರಲ್ ಮೆಡಿಸಿನ್ ಮತ್ತುರೇಡಿಯಾಲಜಿ) ವತಿಯಿಂದ“ಸಂಶೋಧನಾ ಪ್ರಬಂಧ ಬರೆಯುವ ವಿಧಾನ” ದ ಕುರಿತು ವಿಚಾರ ಸಂಕಿರಣ ಕಾರ್ಯಾಗಾರವನ್ನು ಜ. ೨೪ರಂದು ಆಯೋಜಿಸಲಾಯಿತು.


ಕೆ.ವಿ.ಜಿ. ದಂತ ಮಹಾವಿದ್ಯಾಲಯದ ಪ್ರಾಂಶುಪಾಲೆ ಡಾ|| ಮೋಕ್ಷ ನಾಯಕ್‌ರವರು ಕಾರ್ಯಕ್ರಮ ಉದ್ಘಾಟಿಸಿದರು. ಸೌದಿ ಅರೇಬಿಯಾದ ಡೆಂಟಲ್ ಬಯೋಮೆಟಿರಿಯಲ್ಸ್ ರಿಸರ್ಚ್ ಸೆಂಟರ್‌ನಲ್ಲಿ ಸಂಶೋಧಕರಾಗಿರುವ ಡಾ| ದರ್ಶನ್ ಡಿ.ಡಿ. ಅವರು ಸಂಪನ್ಮೂಲ ವ್ಯಕ್ತಿಯಾಗಿ ಉಪನ್ಯಾಸ ನೀಡಿದರು. ಸ್ನಾತಕೋತ್ತರ ದಂತ ವೈದ್ಯಕೀಯ ನಿರ್ದೇಶಕರು ಹಾಗೂ ವಕ್ರದಂತ ಚಿಕಿತ್ಸಾ ವಿಭಾಗ ಮುಖ್ಯಸ್ಥರಾದ ಡಾ| ಶರತ್‌ಕುಮಾರ್ ಶೆಟ್ಟಿಯವರು ಉಪಸ್ಥಿತರಿದ್ದರು.
ಬಾಯಿಯ ರೋಗ ಪತ್ತೆ ಮತ್ತು ಕ್ಷ-ಕಿರಣ ವಿಭಾಗ ಮುಖ್ಯಸ್ಥರಾದ ಡಾ| ಜಯಪ್ರಸಾದ್ ಆನೆಕಾರ್ ಸ್ವಾಗತಿಸಿದರು. ಡಾ| ಜಯಲಕ್ಷ್ಮಿ ಮತ್ತು ಡಾ| ಸೀಮಾ ಅತಿಥಿಗಳ ಕಿರು ಪರಿಚಯ ನೀಡಿದರು. ಹಾಗೂ ಡಾ| ದೀಪಿಕಾರವರು ವಂದನಾರ್ಪಣೆಗೈದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.