ರಂಗಮಯೂರಿ ಶಿಕ್ಷಕ ಕಿರಣ್ ಕುಮಾರ್ ರಿಗೆ ಗೌರವ ಡಾಕ್ಟರೇಟ್

Advt_Headding_Middle
Advt_Headding_Middle

ನ್ಯಾಷನಲ್ ವರ್ಚುವಲ್ ಯೂನಿವರ್ಸಿಟಿ ಫಾರ್ ಪೀಸ್ ಆಂಡ್ ಎಜುಕೇಷನ್ ವತಿಯಿಂದ ಕೊಡಮಾಡುವ ಪ್ರತಿಷ್ಟಿತ ಗೌರವ ಡಾಕ್ಟರೇಟ್ ಬಿರುದು, ತಾಲೂಕಿನ ಸೃಜನಶೀಲ ಯುವ ಗಾಯಕ ಗಾನಸಿರಿ ಕಿರಣ್ ಕುಮಾರ್ ಇವರ ಮುಡಿಗೇರಿದೆ.

ಹದಿನಾರು ವರ್ಷಗಳ ಕಾಲ ವಿದ್ವಾನ್ ಕಾಂಚನ ನಾರಾಯಣ ಭಟ್ ಇವರಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡಿದ ಗಾನಸಿರಿ ಕಿರಣ್ ಕುಮಾರ್ ಇವರು, ೨೦೦೨ ರಲ್ಲಿ ತನ್ನ ಹತ್ತೊಂಬತ್ತನೆಯ ವಯಸ್ಸಿನಲ್ಲಿ ಗಾನಸಿರಿ ಕಲಾಕೇಂದ್ರವನ್ನು ಹುಟ್ಟು ಹಾಕಿ, ಇದುವರೆಗೆ ದಾಖಲೆಯ 16,0೦೦ ವಿದ್ಯಾರ್ಥಿಗಳಿಗೆ ಸುಗಮ ಸಂಗೀತ ತರಬೇತಿಯನ್ನು ನೀಡಿ,ಯುವ ಪ್ರತಿಭೆಗಳ ಹಾಡುವ ಉತ್ಸಾಹಕ್ಕೆ ಸ್ಫೂರ್ತಿ ತುಂಬಿದವರು. ಆರ್ಥಿಕವಾಗಿ ಹಿಂದುಳಿದಿರುವ ಸುಮಾರು ಇನ್ನೂರು ಸಂಗೀತಾಸಕ್ತ ವಿದ್ಯಾರ್ಥಿಗಳಿಗೆ ಉಚಿತವಾಗಿ ತರಬೇತಿಯನ್ನು ನೀಡುತ್ತಾ,ಪ್ರತಿಭಾನ್ವಿತ ಮಕ್ಕಳ ಗಾಯನ ತಂಡವನ್ನು ಕಟ್ಟಿಕೊಂಡು ಇದುವರೆಗೆ ನಾಡಿನಾದ್ಯಂತ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಸುಗಮ ಸಂಗೀತ ಕಾರ್ಯಕ್ರಮಗಳನ್ನು ಪ್ರಸ್ತುತಡಿಸಿರುತ್ತಾರೆ.


ವಿನೂತನವಾಗಿ ಕಾರ್ಯಕ್ರಮಗಳನ್ನು ಸಂಘಟಿಸುತ್ತಾ, ಹೊಸತನದ ಹುಡುಕಾಟದೊಂದಿಗೆ ಸಾಗುತ್ತಿರುವ ಇವರ ಸಂಗೀತ ಪಯಣವು, ವೃದ್ಧಾಶ್ರಮ, ಅನಾಥಾಶ್ರಮಗಳಲ್ಲಿ ಉಚಿತ ಕಾರ್ಯಕ್ರಮ ನೀಡುವ ಮೂಲಕ, ಸಾಂಸ್ಕೃತಿಕ ಸೇವೆಗೈಯ್ಯುವ ಮಹತ್ವಾಕಾಂಕ್ಷೆಯೊಂದಿಗೆ ಮುನ್ನಡೆಯುತ್ತಿದೆ.

ತನ್ನ ಗಾನಸಿರಿ ಕಲಾಸಂಸ್ಥೆಯ ಮೂಲಕ ಕಲಾಕ್ಷೇತ್ರದ ಗಣನೀಯ ಸಾಧಕರಿಗೆ ಸನ್ಮಾನ ಮಾಡಿರುವ ಇವರು, ತಮ್ಮ ಸುಗಮ ಸಂಗೀತ ಕ್ಷೇತ್ರದ ವಿಶೇಷ ಸಾಧನೆಗಾಗಿ ೨೦೧೨ ರಲ್ಲಿ ಪ್ರತಿಷ್ಟಿತ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈಟಿವಿ ವಾಹಿನಿಯ ’ಎದೆ ತುಂಬಿ ಹಾಡುವೆನು’ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಭಾಗವಹಿಸಿದ ಮೊದಲಿಗ ಎನ್ನುವ ಹೆಗ್ಗಳಿಕೆ ಇವರದು. ಏಷ್ಯಾನೆಟ್ ಸುವರ್ಣ ವಾಹಿನಿಯ ’ಕಾನ್ಫಿಡೆಂಟ್ ಸ್ಟಾರ್ ಸಿಂಗರ್’ ಕಾರ್ಯಕ್ರಮದ ಟಾಪ್ ಹದಿನೈದರಲ್ಲಿ ಒಬ್ಬರಾಗಿದ್ದರು. ಇವರಲ್ಲಿ ತರಬೇತಿ ಪಡೆದ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ನಾಡಿನ ವಿವಿಧ ಟಿ.ವಿ ವಾಹಿನಿಗಳಲ್ಲಿ ಮಿಂಚುತ್ತಿದ್ದಾರೆ.ಹಲವಾರು ಸುಗಮ ಸಂಗೀತದ ಧ್ವನಿ ಸುರುಳಿಗಳಿಗೆ ದನಿಯಾಗಿರುವ ಇವರು, ಜೊತೆ ಜೊತೆಗೆ ತನ್ನ ಸಂಗೀತದ ವಿದ್ಯಾರ್ಥಿಗಳನ್ನೂ ನಿಸ್ಪೃಹ ಮನಸ್ಸಿನಿಂದ ಬೆಳೆಸುತ್ತಿದ್ದಾರೆ.


ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ, ಗಾನಸಿರಿಯ ಏಳು ಶಾಖೆಗಳ ಮೂಲಕ, ಸುಮಾರು ೬೦೦ ವಿದ್ಯಾರ್ಥಿಗಳಿಗೆ ಸುಗಮ ಸಂಗೀತ ತರಬೇತಿ ನೀಡುತ್ತಾ,ಮುನ್ನೂರಕ್ಕೂ ಅಧಿಕ ಬೃಹತ್ ಕಾರ್ಯಕ್ರಮಗಳನ್ನು ಸಂಘಟಿಸಿ, ಹಾಡುವ ಪ್ರತಿಭೆಗಳಿಗೆ ವೇದಿಕೆಯನ್ನೊದಗಿಸಿ ಕೊಟ್ಟವರು. ದಿನಾಂಕ ೨೬.೦೧.೨೦೧೯ ರಂದು ಬೆಂಗಳೂರಿನಲ್ಲಿ ನಡೆಯುವ ಅದ್ದೂರಿ ಕಾರ್ಯಕ್ರಮದಲ್ಲಿ ,ತಮ್ಮ ಸುಗಮ ಸಂಗೀತ ಕ್ಷೇತ್ರದ ಗಣನೀಯ ಸಾಧನೆಗಾಗಿ ಈ ಗೌರವವನ್ನು ಸ್ವೀಕರಿಸಲಿದ್ದಾರೆ. 

ಇವರು ಸುಳ್ಯದ ರಂಗಮಯೂರಿ ಕಲಾ ಶಾಲೆಯಲ್ಲಿ ಸಂಗೀತ ತರಬೇತಿ ನೀಡುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.