ಫೆ. 3 ರಂದು ಪುತ್ತೂರಿನಲ್ಲಿ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರದಾನ

Advt_Headding_Middle
Advt_Headding_Middle

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ನೀಡಲಾಗುವ 2018 ನೇ ಸಾಲಿನ ಗೌರವ ಪ್ರಶಸ್ತಿ ಪ್ರದಾನ ಸಮಾರಂಭವು ಫೆ. 3ರಂದು ಪುತ್ತೂರಿನ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆಯಲಿದೆ.

ಕಾರ್ಯಕ್ರಮಕ್ಕೆ ಪುತ್ತೂರು ಒಕ್ಕಲಿಗ ಗೌಡ ಸೇವಾ ಸಂಘ ಸಹಕಾರ ನೀಡಲಿದೆ ಎಂದು ಅರೆಭಾಷೆ ಅಕಾಡೆಮಿ ಅಧ್ಯಕ್ಷ ಪಿ.ಸಿ.ಜಯರಾಮ್ ಹೇಳಿದರು. ಜ. 25ರಂದು ಸುಳ್ಯ ಪ್ರೆಸ್‌ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಪ್ರಶಸ್ತಿ ಪ್ರದಾನ ಸಮಾರಂಭದ ವಿವರ ನೀಡಿದರು.
ಗೌರವ ಪ್ರಶಸ್ತಿಯನ್ನು ಅಧ್ಯಯನ ಮತ್ತು ಸಂಶೋಧನೆಗಾಗಿ ಡಾ. ಎನ್.ಸುಕುಮಾರ ಗೌಡ, ಸಾಹಿತ್ಯ ಕ್ಷೇತ್ರದಲ್ಲಿ ಕೋಡಿ ಕುಶಾಲಪ್ಪ ಗೌಡ, ಸಂಸ್ಕೃತಿ ಕ್ಷೇತ್ರದಲ್ಲಿ ಶ್ರೀಮತಿ ಕಾರೆಯಂಡ ತಂಗಮ್ಮ ಅಪ್ಪಚ್ಚುರವರಿಗೆ ನೀಡಲಾಗಿದ್ದು, ನಾಳಿದ್ದು ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅವರು ಹೇಳಿದರು. ಬೆಳಿಗ್ಗೆ ಕಾರ್ಯಕ್ರಮ ಉದ್ಘಾಟನೆ ನಡೆಯಲಿದ್ದು ಮಾಜಿ ಸಚಿವ ರಮಾನಾಥ ರೈ, ಅಕಾಡೆಮಿಯ ಮಾಜಿ ಸದಸ್ಯ ಮೋಹನ ಗೌಡ ಇಡ್ಯಡ್ಕ ಭಾಗವಹಿಸುವರು. ಬಳಿಕ ಡ್ರಾಮ ಜ್ಯೂನಿಯರ್ ಖ್ಯಾತಿಯ ತುಷಾರ್ ಗೌಡ ಮತ್ತು ಇತರ ಕಲಾವಿದರ ಅಭಿನಯದ ರಂಗಮಯೂರಿ ಕಲಾ ತಂಡ ಸುಳ್ಯ ಮತ್ತು ಗೌಡ ಯುವ ಸಂಘ ಪುತ್ತೂರು ಇವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುವುದು. ೧೧-೩೦ಕ್ಕೆ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್, ಶಾಸಕರುಗಳಾದ ಸಂಜೀವ ಮಠಂದೂರು, ಎಸ್.ಎಲ್.ಭೋಜೇ ಗೌಡ ಭಾಗವಹಿಸುವರು. ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲ ಸೀತಾರಾಮ ಕೇವಳ ಅಭಿನಂದನಾ ಭಾಷಣ ಮಾಡಲಿದ್ದಾರೆಂದು ಅಕಾಡೆಮಿ ಅಧ್ಯಕ್ಷ ಪಿ.ಸಿ.ಜಯರಾಮ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅಕಾಡೆಮಿ ಸದಸ್ಯರುಗಳಾದ ಎ.ಕೆ.ಹಿಮಕರ, ಕಾಮಧೇನು ಮಾಧವ ಗೌಡ, ಪರಶುರಾಮ ಚಿಲ್ತಡ್ಕ, ದಿನೇಶ್ ಹಾಲೆಮಜಲು ಇದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.