Breaking News

ನಾಳೆ ಸುಳ್ಯದಲ್ಲಿ ರೈತ ಸಹಕಾರಿ ಸಂಘದ ಪೂರ್ವಭಾವಿ ಸಭೆ

Advt_Headding_Middle
Advt_Headding_Middle

ರೈತ ಸಹಕಾರಿ ಸಂಘದ 2 ನೇ ಪೂರ್ವಭಾವಿ ಸಭೆಯು ಜ. 26 ರಂದು ಸುಳ್ಯದ ಎಪಿಎಂಸಿ ರೈತ ಸಭಾಂಗಣದಲ್ಲಿ ಕರೆಯಲಾಗಿದೆ ಎಂದು ರೈತ ಸಹಕಾರಿ ಸಂಘದ ಮೂಲ ಪ್ರವರ್ತಕರುಗಳಾದ ಪ್ರದೀಪ್ ಕುಮಾರ್ ಕೆ.ಎಲ್. ಹಾಗೂ ಅಶೋಕ್ ಎಡಮಲೆ ತಿಳಿಸಿದ್ದಾರೆ.


ಜ. 25 ರಂದು ಸುಳ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ರೈತ ಸಹಕಾರಿ ಮತ್ತು ಶ್ರಮಿಕರ ಒಂದುಗೂಡುವಿಕೆಗೆ ಆದ್ಯತೆಯಾಗಿ ರೈತ ಸಹಕಾರಿ ಸಂಘವನ್ನು ಮಾಡಲಾಗಿದೆ. ಕೃಷಿ ಚಟುವಟಿಕೆಯ ಮೂಲಾಧಾರ ಮತ್ತು ವ್ಯವಸಾಯಗಾರ ಮತ್ತು ಶ್ರಮಿಕ ವರ್ಗ. ರೈತಾಪಿ ಕೃಷಿ ಚಟುವಟಿಕೆಯ ಪ್ರಾಥಮಿಕ ಹಂತದಿಂದ, ದ್ವಿತೀಯ ಮತ್ತು ತೃತೀಯ ತುತ್ತತುದಿಯ ಕೊನೆಯ ಬಳಕೆದಾರರ ಬೇಡಿಕೆ ಮತ್ತು ಪೂರೈಕೆಯನ್ನು ಒಂದೇ ಛತ್ರದಲ್ಲಿ ತರುವ ಮೂಲಭೂತ ಧ್ಯೇಯ ಇದಾಗಿದೆ ಎಂದು ಹೇಳಿದರು.
ಜ. ೨೬ರಂದು ನಡೆಯುವ ಸಭೆಯಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ರೈತರು ಭಾಗವಹಿಸಬೇಕೆಂದು ಅವರು ವಿನಂತಿಸಿಕೊಂಡರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.